ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Fashion 2025: ಚಳಿಗಾಲಕ್ಕೆ ಮರಳಿದ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್

Wild Animal Prints Fashion: ಚಳಿಗಾಲ ಬಂದರೇ ಸಾಕು, ನಾನಾ ಬಗೆಯ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್ ನಯಾ ವಿನ್ಯಾಸದೊಂದಿಗೆ ಮರಳುತ್ತದೆ. ಈ ಬಾರಿ ಯಾವ್ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿವೆ? ಸ್ಟೈಲಿಂಗ್ ಹೇಗೆ? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಕೃತಿಕಾ ಕಮ್ರಾ, ಬಾಲಿವುಡ್ ನಟಿ, ಫೋಟೋಗ್ರಾಫಿ: ದೀಪ್ ಪಂಚಾಲ್
1/5

ಅನಿಮಲ್ ಪ್ರಿಂಟ್ಸ್ ಫ್ಯಾಷನ್

ಚಳಿಗಾಲ ಬಂದರೇ ಸಾಕು, ಅನಿಮಲ್ ಪ್ರಿಂಟ್ಸ್ ಫ್ಯಾಷನ್ ಮರಳುತ್ತದೆ. ಫ್ಯಾಷನ್ ಪ್ರಿಯರು ಮಾತ್ರವಲ್ಲ, ಸೆಲೆಬ್ರೆಟಿಗಳ ರೆಟ್ರೊ ಪಾರ್ಟಿವೇರ್ ಲಿಸ್ಟ್‌ನಲ್ಲಿಯೂ ಇವು ರಾರಾಜಿಸುತ್ತವೆ.‌ ಹೌದು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಬಾಲಿವುಡ್ ನಟಿ ಕೃತಿಕಾ ಕಮ್ರಾ ಧರಿಸಿದ ಲೇಯರ್ ಲುಕ್ ನೀಡುವ ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್‌ವೇರ್ ಸಖತ್ ಟ್ರೆಂಡಿಯಾಗಿತ್ತು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಏನಿದು ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್?

ಚೀತಾ, ಟೈಗರ್, ಜೀಬ್ರಾ, ಜಿರಾಫೆ, ಕಾಂಗರೋ, ಹೀಗೆ ನಾನಾ ಬಗೆಯ ಕಾಡುಪ್ರಾಣಿಗಳ ಚರ್ಮವನ್ನು ಹೋಲುವ ಪ್ರಿಂಟ್‌ಗಳಿರುವ ಫ್ಯಾಷನ್‌ವೇರ್‌ಗಳನ್ನು ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್ ಎನ್ನಲಾಗುತ್ತದೆ. ಇವು ಪಾರ್ಟಿವೇರ್‌ಗಳಲ್ಲಿ ಪಾರ್ಟಿ ಪ್ರಿಯರ ಲೇಯರ್ ಲುಕ್‌ನಲ್ಲಿ ಕಾಣಸಿಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

3/5

ಕಲರ್‌ಫುಲ್ ಪ್ರಿಂಟ್ಸ್

ಅಂದಹಾಗೆ, ವೈಲ್ಡ್ ಅನಿಮಲ್‌ಗಳ ಈ ಪ್ರಿಂಟ್ಸ್ ಫ್ಯಾಷನ್ ಹೊಸತೇನಲ್ಲ. ಸಾಕಷ್ಟು ವರ್ಷಗಳಿಂದಲೂ ಇದೆ. ಹಾಲಿವುಡ್ ನಟಿಯರ ಡಿಸೈನರ್‌ವೇರ್‌ಗಳಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಇದೀಗ ಸಾಮಾನ್ಯ ಹುಡುಗಿಯರನ್ನು ತಲುಪಿವೆ ಎನ್ನುವ ಫ್ಯಾಷನಿಸ್ಟಾ ಜಾನ್ ಪ್ರಕಾರ, ಈ ಪ್ರಿಂಟ್ಸ್ ಫ್ಯಾಷನ್ ಪ್ರತಿವರ್ಷವೂ ಡಿಫರೆಂಟ್ ಸ್ಟೈಲಿಂಗ್‌ನಲ್ಲಿ ಮರಳುತ್ತವೆ ಎನ್ನುತ್ತಾರೆ.

4/5

ಅನಿಮಲ್ ಪ್ರಿಂಟ್ಸ್ ಔಟ್‌ಫಿಟ್ಸ್

ಸ್ಟೈಲಿಸ್ಟ್ ಜೀವಾ ಪ್ರಕಾರ, ಕ್ರಾಪ್ ಟಾಪ್, ಕಟೌಟ್ ಟ್ರಾಪ್, ಹಾಲ್ಟರ್ ನೆಕ್ಲೈನ್ ಫ್ರಾಕ್, ಮ್ಯಾಕ್ಸಿ, ಮಿನಿ, ಮೀಡಿಸ್, ನಾರ್ಮಲ್ ಟೀ ಶರ್ಟ್‌ನಿಂದಿಡಿದು, ಜಾಕೆಟ್, ಕೋಟ್, ಬ್ಲೇಝರ್ ಹೀಗೆ ನಾನಾ ಬಗೆಯಲ್ಲಿ ಇವು ಈ ಸೀಸನ್‌ನಲ್ಲಿ ಕಾಣಿಸಿಕೊಂಡಿವೆ. ಇನ್ನು ಕಾಲೇಜ್ ಹುಡುಗಿಯರಿಗೆ ಪ್ರಿಯವಾಗುವಂತಹ ಬಾಡಿಕಾನ್ ಡ್ರೆಸ್, ಟ್ರೆಂಚ್ಕೋಟ್, ಲಾಂಗ್ ಟಾಪ್, ಪಾರ್ಟಿ ಡ್ರೆಸ್‌ಗಳ ಕೆಟಗರಿಯಲ್ಲಿ ಕೆಲವು ಹಿಟ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ.

5/5

ವೈಲ್ಡ್ ಅನಿಮಲ್ ಪ್ರಿಂಟ್ಸ್ ಫ್ಯಾಷನ್ ಪ್ರಿಯರಿಗೆ ಟಿಪ್ಸ್

  • ಎಲ್ಲ ಬಗೆಯ ಔಟ್‌ಫಿಟ್‌ಗಳಲ್ಲೂ ಇವು ಲಭ್ಯ.
  • ನೈಟ್ ಪಾರ್ಟಿಗೆ ಹೇಳಿ ಮಾಡಿಸಿದ ಡ್ರೆಸ್ಕೋಡ್.
  • ವೆಸ್ಟರ್ನ್ ಲುಕ್‌ಗೆ ಮಾತ್ರ ಮ್ಯಾಚ್ ಆಗುತ್ತವೆ.
  • ಎಥ್ನಿಕ್ ಲುಕ್‌ಗೆ ಹೊಂದದು, ನೆನಪಿರಲಿ.
  • ವೈಲ್ಡ್ ಹಾಗೂ ಫಂಕಿ ಲುಕ್ ನೀಡುತ್ತವೆ.

ಶೀಲಾ ಸಿ ಶೆಟ್ಟಿ

View all posts by this author