ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ವಿಂಟರ್ ಫ್ಯಾಷನ್‌ನಲ್ಲಿ ಫ್ರಿಂಝ್ ಜಾಕೆಟ್ ಹಂಗಾಮ

ಬಗೆಬಗೆಯ ಫ್ರಿಂಝ್ ಜಾಕೆಟ್‌ಗಳು ಈ ವಿಂಟರ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಜಾಕೆಟ್ ತುದಿಯಲ್ಲಿ ಅಥವಾ ಸ್ಲೀವ್‌ಗಳ ತುದಿಯಲ್ಲಿ ಇಲ್ಲವೇ ಕೆಳಭಾಗದಲ್ಲಿ ಕುಚ್ಚಿನ ಬಿಡಿಬಿಡಿ ಭಾಗಗಳಂತೆ ನೇತಾಡುವ ಟ್ಯಾಸೆಲ್ಸ್ ವಿನ್ಯಾಸವಿರುತ್ತದೆ. ಇಂತಹ ಜಾಕೆಟ್‌ಗಳನ್ನು ಫ್ರಿಂಝ್ ಜಾಕೆಟ್ ಎನ್ನಲಾಗುತ್ತದೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಫ್ರಿಂಝ್ ಜಾಕೆಟ್‌ಗಳು (ಚಿತ್ರಕೃಪೆ: ಪಿಕ್ಸೆಲ್)
1/5

ಫಿಂಝ್ ಜಾಕೆಟ್‌ಗಳು ವಿಂಟರ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನಾನಾ ವಿನ್ಯಾಸಗಳಲ್ಲಿ ಬಿಡುಗಡೆಗೊಂಡು ಯುವತಿಯರನ್ನು ಸೆಳೆಯುತ್ತಿವೆ.

2/5

ಏನಿದು ಫ್ರಿಂಝ್ ಜಾಕೆಟ್?

ಜಾಕೆಟ್ ತುದಿಯಲ್ಲಿ ಅಥವಾ ಸ್ಲೀವ್‌ಗಳ ತುದಿಯಲ್ಲಿ ಇಲ್ಲವೇ ಕೆಳಭಾಗದಲ್ಲಿ ಕುಚ್ಚಿನ ಬಿಡಿಬಿಡಿ ಭಾಗಗಳಂತೆ ನೇತಾಡುವ ಟ್ಯಾಸೆಲ್ಸ್ ವಿನ್ಯಾಸವಿರುತ್ತದೆ. ಇಂತಹ ಜಾಕೆಟ್‌ಗಳನ್ನು ಫ್ರಿಂಝ್ ಜಾಕೆಟ್ ಎನ್ನಲಾಗುತ್ತದೆ.

3/5

ಟ್ರೆಂಡಿಯಾಗಿರುವ ಫ್ರಿಂಝ್ ಜಾಕೆಟ್‌ಗಳು

ಡೆನಿಮ್, ಲೆದರ್, ಕಾಟನ್ ಸೇರಿದಂತೆ ನಾನಾ ಬಗೆಯಲ್ಲಿ ಬಿಡುಗಡೆಗೊಂಡಿರುವ ಜಾಕೆಟ್‌ಗಳಲ್ಲಿ ಈ ಫ್ರಿಂಝ್ ವಿನ್ಯಾಸ ಕಂಡು ಬರುತ್ತಿವೆ. ಕೆಲವು ಸ್ಲಿವ್ಲೆಸ್ ಜಾಕೆಟ್‌ನಲ್ಲಿ ಕೇಪ್ ಶೈಲಿಯಲ್ಲಿದ್ದರೇ, ಇನ್ನು ಕೆಲವು ಸ್ಲೀವ್‌ನ ತುದಿಯಲ್ಲಿ ಹಾಗೂ ಜಾಕೆಟ್ನ ಕೆಳಭಾಗದಲ್ಲಿ ಫ್ರಿಂಝ್ ವಿನ್ಯಾಸ ಹೊಂದಿರುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೀವಾ.

4/5

ವಿಂಟೇಜ್ ಲುಕ್ ನೀಡುವ ಫ್ರಿಂಝ್ ಜಾಕೆಟ್

ಈ ಸೀಸನ್‌ನಲ್ಲಿ ಕ್ಯಾಶುವಲ್ ಫ್ರಿಂಝ್ ಕೇಪ್‌ಗಳು ಕೂಡ ಚಾಲ್ತಿಯಲ್ಲಿವೆ. ಜತೆಗೆ ವಿಂಟೇಜ್ ಲುಕ್‌ನಲ್ಲಿರುವಂತವು ಹಾಲಿವುಡ್ ಸ್ಟೈಲ್‌ನಲ್ಲಿ ಬಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ ಲೇಯರ್ ಲುಕ್‌ಗೆ ಸಾಥ್ ನೀಡುವ ಡಿಫರೆಂಟ್ ಶೈಲಿಯ ವಿಂಟೇಜ್ ಡಿಸೈನ್‌ನವು ಹೊಸ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರೀಟಾ.

5/5

ಫ್ರಿಂಝ್ ಜಾಕೆಟ್ ಪ್ರಿಯರಿಗಾಗಿ ಇಲ್ಲಿವೆ ಟಿಪ್ಸ್

  • ಅಗಲವಾದ ಭುಜವಿರುವವರಿಗೆ ಸೂಪರ್ಬ್ ಲುಕ್ ನೀಡುತ್ತವೆ.
  • ಈ ಶೈಲಿಯ ಜಾಕೆಟ್‌ಗಳಿಗೆ ಆಕ್ಸೆಸರೀಸ್ ಧರಿಸುವುದು ಬೇಡ.
  • ಈ ಜಾಕೆಟ್ ಧರಿಸಿದಾಗ ಹೆವ್ವಿ ಲೇಯರ್ ಲುಕ್ ನಾಟ್ ಓಕೆ.
  • ಕ್ಯಾಶುವಲ್‌ ಲುಕ್‌ಗೆ ಇವು ಬೆಸ್ಟ್ ಎನ್ನಬಹುದು.
  • ಡೆನಿಮ್‌ ಫ್ರಿಂಝ್‌ ಜಾಕೆಟ್‌ ಕಾಲೇಜು ಯುವತಿಯರಿಗೆ ಸೂಕ್ತ.
  • ಲೆದರ್‌ ಫ್ರಿಂಝ್‌ ಜಾಕೆಟ್‌ ವಿಂಟೇಜ್‌ ಲುಕ್‌ ನೀಡುತ್ತವೆ.
  • ಹಾಲಿವುಡ್‌ ಸ್ಟಾರ್ಸ್ ಲುಕ್‌ಗಾಗಿ ಈ ರೀತಿಯ ಜಾಕೆಟ್‌ ಧರಿಸಬಹುದು.

ಶೀಲಾ ಸಿ ಶೆಟ್ಟಿ

View all posts by this author