Winter Fashion 2026: ಸೀಸನ್‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಪೊಂಚೊಗಳಿವು
ಈ ಬಾರಿಯ ಚಳಿಗಾಲದಲ್ಲಿ3 ಶೈಲಿಯ ಪೊಂಚೊ ಸ್ಟೈಲಿಂಗ್ ಟ್ರೆಂಡಿಯಾಗಿದೆ. ಅವುಗಳಲ್ಲಿ ಫ್ರಿಂಝ್ ಪೊಂಚೊ, ಕಲರ್‌ಫುಲ್ ವುಲ್ಲನ್ ಪೊಂಚೊ, ಪೊಂಚೊ ಟಾಪ್‌ಗಳು ಅತಿ ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ. ಹಾಗಾದರೆ ಏನಿದು ಪೊಂಚೊ ? ಇದರಲ್ಲಿ ನೀವೂ ಹೇಗೆ ಮಿಂಚಬಹುದು ಎನ್ನುವ ವಿವರ ಇಲ್ಲಿದೆ.
ಪೊಂಚೊ ಸ್ಟೈಲಿಂಗ್
ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ಪೊಂಚೊ ಸ್ಟೈಲಿಂಗ್ ಮರಳಿದೆ. ಅದರಲ್ಲೂ3 ಬಗೆಯವು ಹೆಚ್ಚು ಜನಪ್ರಿಯತೆ ಗಳಿಸಿವೆ. ಫ್ರಿಂಝ್ ಪೊಂಚೊ, ಕಲರ್‌ಫುಲ್ ವುಲ್ಲನ್ ಪೊಂಚೊ, ಪೊಂಚೊ ಟಾಪ್‌ಗಳು ಅತಿ ಹೆಚ್ಚು ಬೇಡಿಕೆ ಹೊಂದಿವೆ.
ಹುಡುಗಿಯರ ನೆಚ್ಚಿನ ಫ್ರಿಂಝ್ ಪೊಂಚೊ
ಉಲ್ಲನ್, ಸಾಫ್ಟ್ ಮೇಟಿರಿಯಲ್, ಕ್ಲಾತ್ ಮೆಟೀರಿಯಲ್‌ನಲ್ಲಿ ದೊರೆಯುವ ಈ ಶೈಲಿಯ ಪೊಂಚೊಗಳು ಇದೀಗ ಫ್ರಿಂಝ್ ಡಿಸೈನ್‌ನಲ್ಲಿಯೂ ಲಭ್ಯ. ವಿ ಅಥವಾ ಯು ಶೇಪ್‌ನಲ್ಲಿ ಈ ಫ್ರಿಂಝ್‌ಗಳನ್ನು ಹೆಚ್ಚಾಗಿ ಕಾಣಬಹುದು.
ಮೃದುವಾದ ವಿನ್ಯಾಸದಲ್ಲಿ ಉಲ್ಲನ್ ಪೊಂಚೊ
ಎಲ್ಲ ಸೀಸನ್‌ನಲ್ಲೂ ಎಲ್ಲರಿಗೂ ಉಲ್ಲನ್‌ನ ಪೊಂಚೊಗಳನ್ನು ಧರಿಸುವುದೆಂದರೇ ಪ್ರಿಯ ಸಂಗತಿಗಳಲ್ಲೊಂದು. ಇವು ದೇಹವನ್ನು ಬೆಚ್ಚಗಿಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣುತ್ತವೆ. ಇದೀಗ ಇವುಗಳಲ್ಲಿ ಡಿಫರೆಂಟ್ ನೆಕ್ಲೈನ್‌ನವು ದೊರೆಯುತ್ತಿವೆ. ಟರ್ಟಲ್ ನೆಕ್, ಸಿಂಗ್ ನೆಕ್, ವಿ, ಯು ಹಾಗೂ ಬೋಟ್ ನೆಕ್ನವು ಸದ್ಯ ಪ್ರಚಲಿತದಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಕಿರಣ್.
ಪೊಂಚೊ ಟಾಪ್ ಫ್ಯಾಷನ್
ಪೊಂಚೊ ಎಂದಾಕ್ಷಣ ಎಲ್ಲರ ಮನಕ್ಕೆ ಬರುವುದು ಉಲ್ಲನ್ನದ್ದು ಮಾತ್ರ. ಇದೀಗ ಫ್ಯಾಷನಿಸ್ಟ್‌ಗಳು ಅದರ ರೂಪವನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಂಚೊ ಡಿಸೈನ್ ಮೂಲವಾಗಿಟ್ಟುಕೊಂಡು ನಾನಾ ಫ್ಯಾಬ್ರಿಕ್‌ಗಳಲ್ಲಿ ಪೊಂಚೊ ಟಾಪ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಕೇವಲ ಚಳಿಗಾಲದಲ್ಲಿ ಮಾತ್ರ ಧರಿಸಬಹುದಾಗಿದ್ದ ಇವನ್ನು ಇದೀಗ ಎಲ್ಲಾ ಕಾಲದಲ್ಲೂ ಧರಿಸುವಂತೆ ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ಮಾಡೆಲ್ ಪ್ರಿಯಾ ನಾಯಕ್.
ಪೊಂಚೊ ಪ್ರಿಯರಿಗೆ ಟಿಪ್ಸ್
- ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಕಲರ್ಸ್ ಹಾಗೂ ವಿನ್ಯಾಸದ್ದನ್ನು ನೋಡಿ ಖರೀದಿಸಿ.
- ಟಾಪ್ ಶೈಲಿಯವು ಎಲ್ಲ ಸೀಸನ್‌ಗೂ ಹೊಂದುತ್ತವೆ.
- ಲೇಯರ್ ಲುಕ್‌ಗೆ ಇವು ಸೂಕ್ತ ಎನ್ನಬಹುದು.
- ಎತ್ತರವಿರುವವರಿಗೆ ಪೊಂಚೊ ಆಕರ್ಷಕವಾಗಿ ಕಾಣಿಸುತ್ತದೆ.
- ಶೀರ್ ಡಿಸೈನ್‌ನವು ಕೂಡ ಚಾಲ್ತಿಯಲ್ಲಿವೆ.
- ನೆಕ್ಲೈನ್ ನೋಡಿ ಆಯ್ಕೆ ಮಾಡಿ.