ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ಯುವತಿಯರನ್ನು ಅಪ್ಪಿದ ಕೊರಿಯನ್‌ ಶಾರ್ಟ್ ಸ್ವೆಟರ್ಸ್

ಈ ಬಾರಿಯ ವಿಂಟರ್‌ ಸೀಸನ್‌ನಲ್ಲಿ ಕೊರಿಯನ್‌ ಫ್ಯಾಷನ್‌ನಲ್ಲಿರುವ ಶಾರ್ಟ್ ಸ್ವೆಟರ್‌ಗಳು ಯುವತಿಯರ ಅಂದ ಹೆಚ್ಚಿಸಿವೆ. ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಸಮೈರಾ ರಾವ್‌ ಧರಿಸಿದ್ದ, ಬಟರ್‌ ಫ್ಲೈ ಡಿಸೈನ್‌ನ ಸ್ವೆಟರ್ ಟಾಪ್‌ ಅಂತೂ ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಸಮೈರಾ ರಾವ್‌, ನಟಿ
1/5

ಕೊರಿಯನ್‌ ಫ್ಯಾಷನ್‌ ಸ್ವೆಟರ್‌ಗಳು ಟ್ರೆಂಡಿಯಾಗಿವೆ. ಹೌದು, ಕೊರಿಯನ್‌ ಫ್ಯಾಷನ್‌ನಲ್ಲಿ ಸೂಪರ್‌ ಹಿಟ್‌ ಆಗಿರುವಂತಹ ಗ್ರಾಫಿಕ್‌ ಪ್ರಿಂಟ್ಸ್‌ನ ಶಾರ್ಟ್ ಅಥವಾ ಕ್ರಾಪ್ಡ್ ಸ್ವೆಟರ್‌ಗಳು ಈಗಾಗಲೇ ಯುವತಿಯರನ್ನು ಸವಾರಿ ಮಾಡತೊಡಗಿವೆ.

2/5

ಟ್ರೆಂಡಿಯಾದ ಸಮೈರಾ ಧರಿಸಿದ ಸ್ವೆಟರ್‌

ಇನ್ನು, ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಸಮೈರಾ ರಾವ್‌ ಧರಿಸಿದ್ದ, ಬಟರ್‌ ಫ್ಲೈ ಡಿಸೈನ್‌ನ ಸ್ವೆಟರ್ ಟಾಪ್‌ ಅಂತೂ ಈಗಾಗಲೇ ಫ್ಯಾಷನ್‌ ಲೋಕದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

3/5

ಕೊರಿಯನ್‌ ಸ್ವೆಟರ್ಸ್‌ಗೆ ಹೆಚ್ಚಾದ ಬೇಡಿಕೆ

ಪ್ರತಿ ಬಾರಿಯಂತೆ ಈ ಬಾರಿಯು ವಿಂಟರ್‌ ಸೀಸನ್‌ನಲ್ಲಿ, ಸಾಕಷ್ಟು ಬಗೆಯ ಸ್ವೆಟರ್‌ಗಳು ಬಂದಿವೆ. ಆದರೆ, ಅವುಗಳಲ್ಲಿ ಉಲ್ಲಾಸ ಹೆಚ್ಚಿಸುವಂತಹ ಕೊರಿಯನ್‌ ಫ್ಯಾಷನ್‌ ಕೆಟಗರಿಗೆ ಸೇರುವ ಕ್ರಾಪ್ಡ್ ಅಥವಾ ಶಾರ್ಟ್ ಸ್ವೆಟರ್‌ಗಳು ಮಾತ್ರ ಹುಡುಗಿಯರನ್ನು ಬರಸೆಳೆದಿವೆ. ಮೊದಲಿಗಿಂತ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಮಾರಾಟಗಾರರಾದ ಸುಮಂತ್‌.

4/5

ಕೊರಿಯನ್‌ ಡ್ರಾಮಾ ಎಫೆಕ್ಟ್

ಎಲ್ಲರಿಗೂ ಗೊತ್ತಿರುವಂತೆ, ಕೊರಿಯನ್‌ ಡ್ರಾಮಾಗಳು ಹಾಗೂ ವೆಬ್‌ಸೀರೀಸ್‌ಗಳು ಈ ಶೈಲಿಯ ಸ್ವೆಟರ್‌ ಇಷ್ಟಪಡಲು ಕಾರಣ. ಅದರಲ್ಲೂ ಕೆ ಡ್ರಾಮಾದ ನಟ-ನಟಿಯರು ಧರಿಸುವಂತಹ ಸೀಸನ್‌ವೇರ್‌ಗಳು ಇತ್ತೀಚೆಗೆ ಯುವತಿಯರನ್ನು ಹೆಚ್ಚು ಆಕರ್ಷಿಸುತ್ತಿವೆ. ಪರಿಣಾಮ ಈ ಕ್ರಾಪ್ಡ್ ಸ್ವೆಟರ್‌ಗಳು ಟ್ರೆಂಡಿಯಾಗುತ್ತಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್‌ ರಾಜ್‌.

5/5

ಟ್ರೆಂಡಿಯಾಗಿರುವ ಬಟರ್‌ ಫ್ಲೈ/ಬರ್ಡ್ಸ್ ಶಾರ್ಟ್ ಸ್ವೆಟರ್ಸ್

ಸದ್ಯ ಕೊರಿಯನ್‌ ವಿಂಟರ್‌ ಫ್ಯಾಷನ್‌ವೇರ್ಸ್‌ನಲ್ಲಿ ಗ್ರಾಫಿಕ್‌ ಬಟರ್‌ ಫ್ಲೈ ಹಾಗೂ ಬರ್ಡ್ಸ್ ಪ್ರಿಂಟ್ಸ್‌ನವು ಚಾಲ್ತಿಯಲ್ಲಿವೆ. ಅವುಗಳಲ್ಲಿ ಬೆಲ್ಲಿ ಕಾಣುವಂತಹ ನೆವಲ್‌ ಡಿಸೈನ್‌ನವು ಈ ಜನರೇಷನ್‌ ಹುಡುಗಿಯರನ್ನು ಹೆಚ್ಚು ಸೆಳೆದಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಚಾ ಹಾಗೂ ಸಾಧ್ವಿ.

ಶೀಲಾ ಸಿ ಶೆಟ್ಟಿ

View all posts by this author