ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ವಿಂಟರ್ ಸೀಸನ್ ಕೊನೆಯಲ್ಲೂ ಬದಲಾಗದ ಮೆನ್ಸ್ ಲೇಯರ್ ಲುಕ್

Mens Layer Look: ಸೀಸನ್ ಕೊನೆಯ ಹಂತದಲ್ಲೂ ಮೆನ್ಸ್ ಫ್ಯಾಷನ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಬದಲಿಗೆ ಡಾರ್ಕ್ ಶೇಡ್‌ನ ಜಾಕೆಟ್‌ಗಳು, ಕೋಟ್‌ಗಳು, ಫುಲ್ ಸ್ಲೀವ್ ಶರ್ಟ್-ಟೀ ಶರ್ಟ್‌ಗಳು ಟ್ರೆಂಡ್‌ನಲ್ಲಿ ಮುಂದುವರಿದಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಮಹಮ್ಮದ್ ಫಹಾದ್ ಖಾನ್, ಮಾಡೆಲ್/ನಟ
1/5

ವಿಂಟರ್ ಸೀಸನ್ ಕೊನೆಯಲ್ಲೂ ಮೆನ್ಸ್ ಫ್ಯಾಷನ್‌ನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಬದಲಿಗೆ ಅದೇ ಡಾರ್ಕ್ ಶೇಡ್‌ನ ಬಗೆಬಗೆಯ ಜಾಕೆಟ್‌ಗಳು, ಕೋಟ್‌ಗಳು, ಫುಲ್ ಸ್ಲೀವ್ ಶರ್ಟ್-ಟೀ ಶರ್ಟ್‌ಗಳು, ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ಗೆ ಹೊಂದುವ ಫ್ಯಾಷನ್‌ವೇರ್‌ಗಳು ಮುಂದುವರೆದಿವೆ.

2/5

ಸದ್ಯ ಚಾಲ್ತಿಯಲ್ಲಿರುವ ಲೇಯರ್ ಲುಕ್

ಸದ್ಯ ಲೇಯರ್ ಲುಕ್ ಕಾನ್ಸೆಪ್ಟ್‌ನಲ್ಲಿ ಯುವಕರು ಶರ್ಟ್ ಮೇಲೆ ಫುಲ್ ಆರ್ಮ್ ಸ್ವೆಟರ್, ಪುಲ್ಓವರ್, ಇಲ್ಲವೇ ಬಾಂಬರ್ ಜಾಕೆಟ್, ಲೆದರ್ ಜಾಕೆಟ್ ಧರಿಸುವುದು ತೀರಾ ಕಾಮನ್ ಆಗಿದೆ. ಇನ್ನು, ಸಂಜೆಯಾದರೇ ಸಾಕು, ಟೀ ಶರ್ಟ್ ಮೇಲೆ ಸ್ಟೋಲ್-ಮಫ್ಲರನ್ನು ಸ್ಟೈಲಾಗಿ ಧರಿಸುವುದು ಸ್ಟೈಲಿಂಗ್ ಲಿಸ್ಟ್‌ನಲ್ಲಿದೆ ಎನ್ನುತ್ತಾರೆ ಮಾಡೆಲ್ ಮಹಮ್ಮದ್ ಫಹಾದ್ ಖಾನ್.

ಪುರುಷರ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿರುವ ಫ್ಯಾಷನ್‌ವೇರ್ಸ್

ಇನ್ನು, ವೃತ್ತಿಪರ ಪುರುಷರ ಮೆಚ್ಚಿನ ಆಯ್ಕೆಯ ಶರ್ಟ್‌ಗಳಲ್ಲಿ, ವಿನೂತನ ಬಗೆಯ ಕಾಲರ್ ಹಾಗೂ ಹ್ಯಾಂಡ್ ಬಟನ್ ಹೊಂದಿದ ಯೂರೋಪಿಯನ್-ಇಟಾಲಿಯನ್ ಮಾದರಿಯವು ಮತ್ತೆ ಟ್ರೆಂಡಿಯಾಗಿವೆ. ಇದರೊಂದಿಗೆ ಪಟ್ಟಿ ಇರುವ, ಗಾಢ ಬಣ್ಣದ ಸ್ಟ್ರೈಫ್ಸ್ ಹಾಗೂ ಫಂಕಿ ಚಿತ್ರಗಳಿರುವ ಟೀ-ಶರ್ಟ್‌ಗಳು ಯುವಕರನ್ನು ಸೆಳೆದಿವೆ.

3/5

ಫುಲ್ ಆರ್ಮ್ ಟೀ ಶರ್ಟ್ಸ್ ಪ್ರೇಮ

ಇವೆಲ್ಲದರೊಂದಿಗೆ ಇಂದಿಗೂ ಫುಲ್ ತೋಳಿನ ಶರ್ಟ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಗಾಢಬಣ್ಣಗಳ ಬದಲು ಉಲ್ಲಾಸ ನೀಡುವಂತಹ ಲೈಟ್ ಕಲರ್‌ನ ಫ್ಯಾಷನ್‌ವೇರ್‌ಗಳು ಸವಾರಿ ಮಾಡತೊಡಗಿವೆ. ಇನ್ನು ಲಾಂಗ್ ಸ್ಲೀವ್ ಟೀ ಶರ್ಟ್‌ಗಳು ವೀಕೆಂಡ್ ಪಾರ್ಟಿ ಪ್ರಿಯ ಯುವಕರನ್ನು ಆಕ್ರಮಿಸಿಕೊಂಡಿವೆ ಎನ್ನುತ್ತಾರೆ ಮಾಡೆಲ್ ಖಾನ್.

4/5

ಜಾಕೆಟ್ ಲೇಯರ್ ಲುಕ್

ಜಾಕೆಟ್‌ನೊಳಗೂ ಲೇಯರ್ ಲುಕ್ ಮಾಡುವುದು ಹಾಲಿಡೇ ಫ್ಯಾಷನ್ ಹಾಗೂ ಬೈಕರ್ಸ್ ಫ್ಯಾಷನ್‌ನಲ್ಲಿ ಇಂದಿಗೂ ಮುಂದುವರಿದಿದೆ. ಬಾಂಬರ್ ಜಾಕೆಟ್, ಫ್ರಿಂಝ್ ಜಾಕೆಟ್, ಲೆದರ್ ಜಾಕೆಟ್‌ಗಳು ಈ ಸೀಸನ್‌ನಲ್ಲಿ ಈ ಸ್ಟೈಲಿಂಗ್‌ನಲ್ಲಿವೆ.

5/5

ಮೆನ್ಸ್ ಲೇಯರ್ ಲುಕ್ ಮುಂದುವರಿಸುವವರಿಗೆ ಟಿಪ್ಸ್

  • ಧರಿಸುವ ಫುಲ್ ಸ್ಲೀವ್‌ನ ಶರ್ಟ್-ಟೀ ಶರ್ಟ್‌ಗೆ ತಕ್ಕಂತೆ ಜಾಕೆಟ್ ಹಾಗೂ ವೇಸ್ಟ್ ಕೋಟ್ ಧರಿಸಬೇಕು.
  • ಧರಿಸುವ ಔಟ್‌ಫಿಟ್‌ಗಳು ಕಾಂಟ್ರಸ್ಟ್ ಬಣ್ಣದ್ದಾಗಿದ್ದಲ್ಲಿ ಸ್ಟೈಲಿಶ್ ಆಗಿ ಕಾಣಿಸುವುದು.
  • ಲೇಯರ್ ಲುಕ್ ಆಕರ್ಷಕವಾಗಿರಬೇಕೇ ಹೊರತು ಹೊದ್ದುಕೊಂಡಂತೆ ಕಾಣಿಸಬಾರದು.

ಶೀಲಾ ಸಿ ಶೆಟ್ಟಿ

View all posts by this author