ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ಕ್ರೀಡಾ ಪ್ರೇಮಿಗಳನ್ನು ಸೆಳೆದ ಸೈನಾ ನೆಹ್ವಾಲ್‌ ಡೆನಿಮ್‌ ರೆಡಿ ಸೀರೆ

ಬ್ಯಾಡ್ಮಿಂಟನ್‌ ಕ್ರೀಡಾಪಟು ಸೈನಾ ನೆಹ್ವಾಲ್‌ ಡೆನಿಮ್‌ ರೆಡಿಮೇಡ್‌ ಸೀರೆಯಲ್ಲಿ ಫ್ಯಾಷನೆಬಲ್‌ ಆಗಿ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಬ್ಯಾಡ್ಮಿಂಟನ್‌ ಮ್ಯಾಚ್‌ಗಳಿಗಾಗಿ ದೇಶ-ವಿದೇಶ ಸುತ್ತುವ ಸೈನಾ, ಸಮಯ ಸಂದರ್ಭಕ್ಕೆ ತಕ್ಕಂತೆ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ನೀಲಿ ವರ್ಣದ ಡೆನಿಮ್‌ ರೆಡಿಮೇಡ್‌ ಸೀರೆಯಲ್ಲಿ ಕಾಣಿಸಿಕೊಂಡು ಪೋಸ್‌ ನೀಡಿದ್ದಾರೆ. ಅವರು ಧರಿಸಿರುವ ಸೀರೆಯ ವಿಶೇಷತೆಯಾದರೂ ಏನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸೈನಾ ನೆಹ್ವಾಲ್‌, ಕ್ರೀಡಾಪಟು
1/5

ಬ್ಯಾಡ್ಮಿಂಟನ್‌ ಕ್ರೀಡಾಪಟು ಸೈನಾ ನೆಹ್ವಾಲ್‌ ಡೆನಿಮ್‌ ಪ್ರೀಡ್ರೇಪ್ಡ್ ರೆಡಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

2/5

ಫ್ಯಾಷೆನಬಲ್‌ ಸೈನಾ

ಹೌದು, ಆಗಾಗ್ಗೆ ಬ್ಯಾಡ್ಮಿಂಟನ್‌ ಮ್ಯಾಚ್‌ಗಳಿಗಾಗಿ ದೇಶ-ವಿದೇಶ ಸುತ್ತುವ ಸೈನಾ, ಸಮಯ ಸಂದರ್ಭಕ್ಕೆ ತಕ್ಕಂತೆ ಫ್ಯಾಷನೆಬಲ್‌ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಬಾರಿ ನೀಲಿ ವರ್ಣದ ಡೆನಿಮ್‌ ರೆಡಿಮೇಡ್‌ ಸೀರೆಯಲ್ಲಿ ಕಾಣಿಸಿಕೊಂಡು ಪೋಸ್‌ ನೀಡಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿ, ಖುಷಿಪಟ್ಟಿದ್ದಾರೆ.

3/5

ಸೈನಾ ಡ್ರೆಸ್‌ಕೋಡ್‌ ಲವ್‌

ಅಂದಹಾಗೆ, ಸೈನಾ ಕೇವಲ ತಾವಾಡುವ ಕ್ರೀಡೆಗೆ ಮಾತ್ರ ಸೀಮಿತಗೊಂಡಿಲ್ಲ! ತಾರೆಯರಂತೆ ಒಂದಿಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮ್ಮದೇ ಆದ ಡ್ರೆಸ್‌ಕೋಡ್‌ನಲ್ಲಿ ಸಾಕಷ್ಟು ಇವೆಂಟ್‌ಗಳಲ್ಲೂ ಪಾಲ್ಗೊಳ್ಳುತ್ತಿರುತ್ತಾರೆ. ಅಷ್ಟೇಕೆ? ಸಾಕಷ್ಟು ಬಾರಿ ತಾವು ಧರಿಸಿದ ಫ್ಯಾಷೆನಬಲ್‌ ಔಟ್‌ಫಿಟ್‌ಗಳ ಫೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಹಾಗಾಗಿ ಇವರನ್ನು ಫ್ಯಾಷನೆಬಲ್‌ ಸ್ಪೋರ್ಟ್ಸ್ ಸ್ಟಾರ್‌ ಲಿಸ್ಟ್‌ಗೆ ಸೇರಿಸಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

4/5

ಸೈನಾ ಉಟ್ಟ ಡೆನಿಮ್‌ ಸೀರೆ

ಸೈನಾ ನೆಹ್ವಾಲ್‌ ಉಟ್ಟಿರುವ ಡೆನಿಮ್‌ ಸೀರೆ ಹೆಚ್ಚು ವಿನ್ಯಾಸ ಹೊಂದಿಲ್ಲ. ಉಡುವವರಿಗೆ ಕಂಫರ್ಟಬಲ್‌ ಎಂದೆನಿಸುವಂತಹ ಜಿಪ್‌ ಶರ್ಟ್ ಶೈಲಿಯ ಕ್ರಾಪ್‌ ಟಾಪ್‌ನಂತಹ ಬ್ಲೌಸ್‌ ಹೊಂದಿದೆ. ಅದಕ್ಕೆ ಡೆನಿಮ್‌ ಲಾಂಗ್‌ ಸ್ಕರ್ಟ್ ಮ್ಯಾಚ್‌ ಮಾಡಲಾಗಿದೆ. ಇವೆರಡಕ್ಕೂ ಲಿಂಕ್‌ ನೀಡಲು ಮೊದಲೇ ಪ್ಲೀಟ್‌ ಮಾಡಿರುವಂತಹ ರೆಡಿಮೇಡ್‌ ಸೆರಗು ವಿನ್ಯಾಸಗೊಳಿಸಲಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಆನ್‌ಲೈನ್‌ನಲ್ಲಿ ಲಭ್ಯ

ಡೆನಿಮ್‌ ಸೀರೆಗಳು ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿ ದೊರೆಯುತ್ತವೆ. ಸೈನಾ ಡ್ಯಾಶ್‌ & ಡಾಟ್‌ ಬ್ರ್ಯಾಂ ಡ್‌ನ ಡೆನಿಮ್‌ ರೆಡಿ ಸೀರೆ ಧರಿಸಿದ್ದು, ಇದು ಅವರಿಗೆ ಸ್ಪೋರ್ಟಿ ಲುಕ್‌ ನೀಡಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author