Winter Fashion 2026: ವಿಂಟರ್ ಟ್ರಾವೆಲ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಶಿಯರ್ಲಿಂಗ್ ಜಾಕೆಟ್ಸ್
Winter Fashion: ಟ್ರಾವೆಲ್ ಫ್ಯಾಷನ್‌ನಲ್ಲಿ ಲಕ್ಷುರಿಯಸ್ ಲುಕ್ ನೀಡುವ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳನ್ನು ಧರಿಸಿದಾಗ ನೋಡಲು ಸ್ಟೈಲಿಶ್ ಆಗಿ ಕಾಣಿಸುವುದು ಮಾತ್ರವಲ್ಲ, ಬೆಚ್ಚಗಿನ ಅನುಭವವನ್ನು ಇವು ನೀಡುತ್ತವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ನೋಡಲು ಮನಮೋಹಕವಾಗಿ ಕಾಣಿಸುವ ಹೈ ಫ್ಯಾಷನ್ ಕೆಟಗರಿಯಲ್ಲಿರುವ ಲಕ್ಷುರಿಯಸ್ ಲುಕ್ ನೀಡುವ ವೈವಿಧ್ಯಮಯ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳು ಈ ಬಾರಿಯ ಟ್ರಾವೆಲ್ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ.
ವೈವಿಧ್ಯಮಯ ಡಿಸೈನ್ ಶಿಯರ್ಲಿಂಗ್ ಜಾಕೆಟ್/ಕೋಟ್
ಫರ್‌ನ ಮನಮೋಹಕ ನೆಕ್ಲೈನ್ ಜತೆಜತೆಗೆ ನೀ ಲೆಂಥ್ ಹಾಗೂ ಕ್ರಾಪ್ ಆಗಿರುವಂತಹ ನಾನಾ ವಿನ್ಯಾಸದಲ್ಲಿ ಬಂದಿವೆ. ಕೆಲವು ನೋಡಲು ವೆಸ್ಟ್‌ಲೈನ್‌ಗಿಂತ ಮೇಲಿದ್ದರೇ, ಮತ್ತೆ ಕೆಲವು ಕೆಳಗಿನ ತನಕ ಲಾಂಗ್ ಕೋಟ್‌ನಂತಿರುತ್ತವೆ.
ಹೈ ಫ್ಯಾಷನ್‌ನಲ್ಲಿ ಶಿಯರ್ಲಿಂಗ್ ಜಾಕೆಟ್ಸ್ /ಕೋಟ್ಸ್
ಶೀಪ್ ವೂಲ್ ಅಥವಾ ಫೇಕ್ ಫರ್‌ನಂತಹ ಮೆಟೀರಿಯಲ್ ಬಳಸಿ ಸಿದ್ಧಪಡಿಸಲಾಗುವ ಈ ಶಿಯರ್ಲಿಂಗ್ ಜಾಕೆಟ್/ಕೋಟ್‌ಗಳು ಒಳಗಿನ ಲೇಯರ್ ಒಂದು ಬಗೆಯಲ್ಲಿ ವಿನ್ಯಾಸಗೊಂಡಿದ್ದರೆ, ಹೊರಗಡೆಯ ಮತ್ತೊಂದು ಲೇಯರ್ ವಿಭಿನ್ನ ಮೆಟೀರಿಯಲ್‌ನಲ್ಲಿ ಸಿದ್ಧಗೊಂಡಿರುತ್ತವೆ. ಅಂದಹಾಗೆ, ಇವು ದುಬಾರಿ ಕೂಡ ಎನ್ನುತ್ತಾರೆ ಸ್ಟೈಲಿಸ್ಟ್ ಜೆಮಿನಿ. ಅವರ ಪ್ರಕಾರ, ಇವು ಯೂನಿಸೆಕ್ಸ್ ಡಿಸೈನ್‌ನಲ್ಲಿ ಇಂದು ಸದ್ಯ ಚಾಲ್ತಿಯಲ್ಲಿಲ್ಲ ಎನ್ನುತ್ತಾರೆ.
ಬಿಗ್ ಕಾಲರ್‌ನ ಶಿಯರ್ಲಿಂಗ್ ಜಾಕೆಟ್ಸ್ / ಕೋಟ್ಸ್
ಈ ಶೈಲಿಯ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳ ಕಾಲರ್‌ಗಳು ನಾರ್ಮಲ್ ಡಿಸೈನ್ಸ್‌ಗಿಂತ ದೊಡ್ಡದಾಗಿರುತ್ತವೆ. ಇದೇ ಈ ಶಿಯರ್ಲಿಂಗ್ ಜಾಕೆಟ್ ಹಾಗೂ ಕೋಟ್‌ಗಳ ಹೈಲೈಟ್ ಎನ್ನಬಹುದು.
ಹೂಡಿ ಸ್ಟೈಲ್ ಶಿಯರ್ಲಿಂಗ್ ಜಾಕೆಟ್
ಇನ್ನು, ಹೂಡಿ ಸ್ಟೈಲ್‌ನ ಶಿಯರ್ಲಿಂಗ್ ಜಾಕೆಟ್‌ಗಳು ಇತ್ತೀಚೆಗೆ ಹೆಚ್ಚು ಟ್ರೆಂಡಿಯಾಗಿವೆ. ನೋಡಲು ಸಖತ್ ಆಗಿಯೂ ಕಾಣಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
- ಹುಡುಗಿಯರು ಶಿಯರ್ಲಿಂಗ್ ಜಾಕೆಟ್ ಕೊಳ್ಳುವಾಗ ಆದಷ್ಟೂ ತಮ್ಮ ಎತ್ತರಕ್ಕೆ ಹೊಂದುವಂತದ್ದನ್ನು ಕೊಳ್ಳಬೇಕು.
- ಉದ್ದಗಿರುವವರಿಗೆ ಯಾವುದಾದರೂ ಓಕೆ. ಆದರೆ, ಕುಳ್ಳಗಿರುವವರು ಮಾತ್ರ ಆದಷ್ಟೂ ತಮ್ಮ ದೇಹಕ್ಕೆ ಫಿಟ್ಟಿಂಗ್ ಆಗಿ ಕೂರುವಂತವನ್ನು ಧರಿಸಬೇಕು.
- ಕುಳ್ಳಗಿರುವವರು ಕೋಟ್ನ ಬದಲು ಜಾಕೆಟ್ ಧರಿಸುವುದು ಉತ್ತಮ.
- ಹುಡುಗರು ಆದಷ್ಟೂ ಜಾಕೆಟ್ ಪ್ರಿಫರ್ ಮಾಡುವುದು ಬೆಸ್ಟ್.
- ಸ್ನೋ ಫಾಲ್ ಆಗುವ ಸ್ಥಳಗಳಲ್ಲಿ ಇದು ಪರ್ಫೆಕ್ಟ್ ಆಗಿ ಕಾಣಿಸುತ್ತವೆ.
- ಬಿಸಿಲಿನಲ್ಲಿ ಧರಿಸಲಾಗದು ಎಂಬುದು ನೆನಪಿರಲಿ. ಹೆಚ್ಚು ತಂಪಿರುವ ತಾಣಗಳಿಗೆ ಮಾತ್ರ ಸೂಕ್ತ.