ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Fashion 2026: ವಿಂಟರ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ವೆಲ್ವೆಟ್ ಡ್ರೆಸ್‌ಗಳು

ಈ ಸೀಸನ್‌ನ ವಿಂಟರ್ ವೇರ್ ಲಿಸ್ಟ್‌ಗೆ ಇದೀಗ ಬೆಚ್ಚಗಿಡುವ ನಾನಾ ಬಗೆಯ ನಯಾ ಡಿಸೈನ್‌ನ ವೆಲ್ವೆಟ್ ಡ್ರೆಸ್‌ಗಳು ಸೇರಿಕೊಂಡಿವೆ. ಯಾವ್ಯಾವ ಡಿಸೈನವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಚಳಿಗಾಲಕ್ಕೆ ಹೊಂದುವಂತಹ ಹಾಗೂ ದೇಹವನ್ನು ಬೆಚ್ಚಗಿಡುವಂತಹ ನಾನಾ ಬಗೆಯ ವೆಲ್ವೆಟ್ ಡ್ರೆಸ್‌ಗಳು ಈ ಸೀಸನ್‌ನಲ್ಲಿ ಈಗಾಗಲೇ ಲಗ್ಗೆ ಇಟ್ಟಿವೆ. ಟ್ರೆಂಡಿಯಾಗಿವೆ.

2/5

ಟ್ರೆಂಡಿಯಾಗಿರುವ ಉಡುಗೆಗಳು

ಮೊದಲೆಲ್ಲಾ ಕೇವಲ ಗೌನನ್ನು ವೆಲ್ವೆಟ್ ಫ್ಯಾಬ್ರಿಕ್‌ನಲ್ಲಿ ಕಾಣಬಹುದಾಗಿತ್ತು. ಆದರೆ, ಇದೀಗ ವೆಲ್ವೆಟ್ ಪ್ಯಾಂಟ್ ಸೂಟ್, ವೆಲ್ವೆಟ್ ಲಾಂಗ್ ಫ್ರಾಕ್, ವೆಲ್ವೆಟ್ ಲೆಹೆಂಗಾ, ಗಾಗ್ರಾ, ವೆಲ್ವೆಟ್ ಕೋ ಆರ್ಡ್ ಸೆಟ್ ವಿನ್ಯಾಸದಲ್ಲೂ ಕೂಡ ಪ್ರಚಲಿತದಲ್ಲಿವೆ.

ರಾಯಲ್ ಲುಕ್ ನೀಡುವ ವೆಲ್ವೆಟ್ ಔಟ್‌ಫಿಟ್ಸ್

ಸಾಮಾನ್ಯವಾಗಿ ನೀವು ಯಾವುದೇ ಬಗೆಯ ವೆಲ್ವೆಟ್ ಡ್ರೆಸ್ ಧರಿಸಿದರೂ ಕೂಡ ಅವು ನಿಮಗೆ ರಾಯಲ್ ಲುಕ್ ನೀಡುತ್ತವೆ. ಅದರಲ್ಲೂ ರಾಯಲ್ ಬ್ಲ್ಯೂ, ಮಜೆಂತಾ, ಪಿಂಕಿಶ್, ಚಾಕೋಲೇಟ್ ಶೇಡ್‌ಗಳು ಪರ್ಫೆಕ್ಟ್ ರಾಯಲ್ ಲುಕ್ಗೆ ಸಾಥ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಛಾಯಾ.

3/5

ನಾನಾ ವಿನ್ಯಾಸಗಳಲ್ಲಿ ವೆಲ್ವೆಟ್ ಪಾರ್ಟಿವೇರ್ಸ್

ಇನ್ನು, ಪಾರ್ಟಿ ಪ್ರಿಯರಿಗೆಂದೇ ಈ ಸೀಸನ್‌ನಲ್ಲಿ ವೆಲ್ವೆಟ್ ಪಾರ್ಟಿವೇರ್‌ಗಳು ಕೂಡ ಆಗಮಿಸಿವೆ. ಅವುಗಳಲ್ಲಿ ಲಾಂಗ್ ಸ್ಲಿಟ್ ಗೌನ್, ಬಾಡಿಕಾನ್ ಗೌನ್, ಮ್ಯಾಕ್ಸಿ, ಲಾಂಗ್ ಎ ಲೈನ್ ಫ್ರಾಕ್ ಸೇರಿದಂತೆ ನಾನಾ ಬಗೆಯವು ಯುವತಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜೆನ್.

4/5

ಸೆಲೆಬ್ರೆಟಿಗಳಿಗೂ ಪ್ರಿಯವಾದ ವೆಲ್ವೆಟ್ ಫ್ಯಾಷನ್‌ವೇರ್ಸ್

ಸಾಮಾನ್ಯ ಹುಡುಗಿಯರು ಮಾತ್ರವಲ್ಲ, ಹಾಲಿವುಡ್ ಹಾಗೂ ಬಾಲಿವುಡ್ ಸೆಲೆಬ್ರೆಟಿಗಳಿಗೂ ಈ ವೆಲ್ವೆಟ್‌ವೇರ್‌ಗಳು ಪ್ರಿಯವಾಗಿವೆ. ಹೈ ಫ್ಯಾಷನ್‌ನ ಟಾಪ್ ಲಿಸ್ಟ್‌ಗೂ ಸೇರಿವೆ ಎನ್ನುತ್ತಾರೆ ಡಿಸೈನರ್ ರೀಟಾ.

5/5

ವೆಲ್ವೆಟ್ ಡ್ರೆಸ್ ಪ್ರಿಯರಿಗೆ ಟಿಪ್ಸ್

  • ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
  • ಹೆಚ್ಚು ವಾಶ್ ಮಾಡಿದರೇ ಮುದುರಿ ಹೋಗಬಹುದು.
  • ಆದಷ್ಟೂ ಡ್ರೈ ವಾಶ್ ಮಾಡುವುದು ಅಗತ್ಯ.
  • ಧರಿಸಿದ ನಂತರ ಮಡಿಸಿಡುವ ಬದಲು ಹ್ಯಾಂಗರ್‌ಗೆ ನೇತು ಹಾಕಿ.
  • ಆದಷ್ಟೂ ಸಾಫ್ಟ್ ಫ್ಯಾಬ್ರಿಕ್‌ನ ವೆಲ್ವೆಟ್ ಡ್ರೆಸ್ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author