ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Hairstyle 2025: ವಿಂಟರ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಹನ್ ಹೇರ್‌ಸ್ಟೈಲ್

Winter Fashion: ವಿಂಟರ್ ಫ್ಯಾಷನ್‌ಗೆ ಇದೀಗ ಹನ್ ಹೇರ್ ಸ್ಟೈಲ್ ನಯಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿದೆ. ನೋಡಲು ಫಂಕಿ ಲುಕ್ ನೀಡುವ ಈ ಹೇರ್‌ಸ್ಟೈಲ್ ಎಂತಹವರಿಗೂ ಯಂಗ್ ಲುಕ್ ನೀಡುತ್ತದೆ ಎನ್ನುತ್ತಾರೆ. ಹಾಗಾದಲ್ಲಿ, ಇದ್ಯಾವ ಬಗೆಯ ಹೇರ್‌ಸ್ಟೈಲ್? ಇಲ್ಲಿದೆ ಡಿಟೇಲ್ಸ್.

ಹನ್‌ ಹೇರ್‌ಸ್ಟೈಲ್‌ ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಪಿಕ್ಸೆಲ್)
1/5

ಈ ಬಾರಿಯ ವಿಂಟರ್ ಫ್ಯಾಷನ್‌ನಲ್ಲಿ ವಿನೂತನ ವಿನ್ಯಾಸದ ಹನ್ ಹೇರ್‌ಸ್ಟೈಲ್‌ಗಳು ಎಂಟ್ರಿ ನೀಡಿವೆ. ಅಷ್ಟು ಮಾತ್ರವಲ್ಲ, ತಾರೆಯರ ಫಂಕಿ ಹೇರ್‌ಸ್ಟೈಲ್‌ ಸ್ಟೇಟ್‌ಮೆಂಟ್‌ಗೂ ಸೇರಿಕೊಂಡಿವೆ.

ಏನಿದು ಹನ್ ಹೇರ್‌ಸ್ಟೈಲ್‌?

ಸಿಂಪಲ್ಲಾಗಿ ಹೇಳುವುದಾದಲ್ಲಿ, ಇತ್ತ ಕಂಪ್ಲೀಟ್ ಬನ್ ಹೇರ್‌ಸ್ಟೈಲೂ ಅಲ್ಲ, ಅತ್ತ ಕಂಪ್ಲೀಟ್ ಪೋನಿಟೇಲೂ ಅಲ್ಲ. ಅರ್ಧಂಬರ್ಧ ಮಿಕ್ಸ್‌ ಕಾಂಬಿನೇಷನ್‌ನ ಹೇರ್‌ಸ್ಟೈಲ್‌ ಇದು. ತಲೆಯ ಮುಂಭಾಗದ ಕೂದಲನ್ನು ಕೃಷ್ಣನ ಜುಟ್ಟಿನಂತೆ ಎತ್ತಿ ಕಟ್ಟುವ ವಿನ್ಯಾಸವಿದು. ಇನ್ನರ್ಧ ಫ್ರೀ ಹೇರ್‌ಸ್ಟೈಲ್‌ನಲ್ಲಿ ವೈವಿಧ್ಯಮಯವಾಗಿ ವಿನ್ಯಾಸಗೊಳಿಸುವುದು ಎನ್ನುತ್ತಾರೆ ಸ್ಟೈಲಿಸ್ಟ್ಸ್.

2/5

ಸೆಲೆಬ್ರೆಟಿಗಳ ಹೇರ್‌ಸ್ಟೈಲ್‌

ಇನ್ನು ಸಿನಿಮಾ ಹೇರ್ ಸ್ಟೈಲಿಸ್ಟ್ ಜೆನ್ ಡಿಸೋಜಾ ಪ್ರಕಾರ, ಈ ಕೇಶ ವಿನ್ಯಾಸ ತಾರೆಯರ ಔಟಿಂಗ್ ಇಲ್ಲವೇ ಹಾಲಿಡೇ ಅಥವಾ ಬಿಂದಾಸ್‌ ಹೇರ್‌ಸ್ಟೈಲ್‌ ಲಿಸ್ಟ್‌ಗೆ ಸೇರಿದೆ. ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರ ಫೇವರಿಟ್‌ ಹೇರ್‌ಸ್ಟೈಲ್‌ ಲಿಸ್ಟ್‌ನಲ್ಲಿರುವ ಹನ್‌ ಹೇರ್‌ಸ್ಟೈಲ್‌ ಇದೀಗ ಸಿನಿಮಾಗಳಲ್ಲೂ ಸ್ಥಾನ ಗಿಟ್ಟಿಸಿಕೊಂಡಿದೆ.

3/5

ಫ್ಯಾಷನ್ ರ‍್ಯಾಂಪ್‌ನಲ್ಲೂ ಜಾದೂ

ಲಂಡನ್, ನ್ಯೂಯಾರ್ಕ್ ಫ್ಯಾಷನ್, ಮಿಲಾನ್, ಪ್ಯಾರೀಸ್ ಮಾಡೆಲ್‌ಗಳ ರ‍್ಯಾಂಪ್ ಹೇರ್‌ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲೂ ಈ ಹೇರ್‌ಸ್ಟೈಲ್‌ ಕಾಣಿಸಿಕೊಂಡಿದೆ. ಇದರೊಂದಿಗೆ ಹನ್ ಸ್ಟೈಲ್ ಹಾಫ್ ಕಲರ್ಡ್‌ನಲ್ಲೂ ಫ್ಯಾಷನ್‌ಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ಸದ್ಯಕ್ಕೆ ನಿಧಾನಗತಿಯಲ್ಲಿ ಹಾಫ್ ರೈನ್‌ಬೋ ಹೇರ್ ಕಲರ್ ಕಾನ್ಸೆಪ್ಟ್‌ನಲ್ಲೂ ಕಾಲಿಟ್ಟಿದೆ.

4/5

ಯಂಗ್‌ಲುಕ್ ಗ್ಯಾರಂಟಿ

ಫ್ಯಾಷನ್‌ಲೋಕದ ಹನ್ ಹೇರ್‌ಸ್ಟೈಲ್‌ ಪ್ರಯೋಗಾತ್ಮಕ ಕೇಶವಿನ್ಯಾಸವಾಗಿದ್ದು, ಹಾಲಿವುಡ್ ಹಾಗೂ ಬಾಲಿವುಡ್ ಯಾಕೆ? ನಮ್ಮಲ್ಲೂಎಂಟ್ರಿ ನೀಡಿದೆ. ಇದು ನೋಡಲು ಯಂಗ್‌ಲುಕ್ ನೀಡುತ್ತದೆ. ಅಲ್ಲದೇ ಬಿಂದಾಸ್ ಸ್ಟೇಟ್‌ಮೆಂಟ್ ಕಲ್ಪಿಸುತ್ತದೆ ಎನ್ನುತ್ತಾರೆ ನಟಿ ದೀಪ್ತಿ.

5/5

ಹನ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಿಂಪಲ್ ಸಲಹೆ

  • ವಿಭಿನ್ನ ಲುಕ್ ಬೇಕೆಂದಲ್ಲಿ ಈ ಹೇರ್‌ಸ್ಟೈಲ್‌ ಟ್ರೈ ಮಾಡಿ ನೋಡಿ
  • ಹನ್ ಹೇರ್‌ಸ್ಟೈಲ್‌ಗೆ ತಕ್ಕಂತೆ ಔಟ್‌ಫಿಟ್ ಧರಿಸಿ
  • ಫಂಕಿ ಲುಕ್ ಆದಲ್ಲಿ ವೆಸ್ಟನ್‌ವೇರ್ ಧರಿಸುವುದು ಅವಶ್ಯ
  • ಹೇರ್ ಕಲರಿಂಗ್ ಹಾಗೂ ಸ್ಟ್ರೀಕ್ಸ್ ಮಾಡಿಸಿದಲ್ಲಿ ಡಿಫರೆಂಟ್‌ ಲುಕ್ ನಿಮ್ಮದಾಗುವುದು
  • ಕರ್ಲಿ, ಸ್ಪ್ರೇಟ್ ಹೇರ್‌ಗೆ ಭಿನ್ನವಾಗಿ ಕಾಣುವುದು

ಶೀಲಾ ಸಿ ಶೆಟ್ಟಿ

View all posts by this author