Winter Shopping 2025: ಮಾಲ್‌ಗಳಲ್ಲಿ ಆರಂಭವಾಯ್ತು 2025ರ ಇಯರ್ ಎಂಡ್ ಸೇಲ್
Winter Shopping: ಪ್ರತಿ ವರ್ಷದಂತೆ ಈ ವರ್ಷವೂ ಉದ್ಯಾನನಗರಿಯ ಬಹುತೇಕ ಎಲ್ಲ ಮಾಲ್‌ಗಳಲ್ಲೂ ಇಯರ್ ಎಂಡ್ ಸೇಲ್ ಈಗಾಗಲೇ ಆರಂಭಗೊಂಡಿದೆ. ಜತೆಗೆ ಕ್ರಿಸ್‌ಮಸ್ ರಜೆಯ ಹಿನ್ನೆಲೆಯಲ್ಲಿ ಖರೋದಿ ಭರಾಟೆಯೂ ಜೋರಾಗಿದೆ. ಈ ಬಗ್ಗೆ ಶಾಪಿಂಗ್ ಎಕ್ಸ್‌ಪರ್ಟ್ಸ್ ಹೇಳುವುದೇನು? ಇಲ್ಲಿದೆ ವಿವರ.
1/5
ಇಯರ್ ಎಂಡ್ ಸೇಲ್ ಭರಾಟೆ
ಪ್ರತಿ ವರ್ಷದಂತೆ ಈ ವರ್ಷವೂ ಇಯರ್ ಎಂಡ್ ಸೇಲ್ ಶಾಪಿಂಗ್ ಮಾಲ್‌ಗಳಲ್ಲಿ ಆರಂಭಗೊಂಡಿದೆ.
2/5
ಭರ್ಜರಿ ಆಫರ್
ಶಾಪಿಂಗ್ ಎಕ್ಸ್‌ಪರ್ಟ್ ರಾಹುಲ್ ಹೇಳುವಂತೆ, ಎಂದಿನಂತೆ, ಬಹುತೇಕ ಎಲ್ಲ ಮಾಲ್‌ಗಳಲ್ಲೂ ಈ ಸೇಲ್ ನಡೆಯುತ್ತಿದ್ದು, ಬ್ರಾಂಡೆಡ್ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳ ಮೇಲೆ ಶೇಕಡಾ 30,40,50, 60 ಮತ್ತು 70ರಷ್ಟು ಕಡಿತ ಹಾಗೂ ಆಫರ್‌ಗಳನ್ನು ನೀಡಲಾಗುತ್ತಿದೆ.
3/5
ಶಾಪಿಂಗ್ ಎಕ್ಸ್‌ಪರ್ಟ್ಸ್ ಹೇಳುವುದೇನು?
ಮಾಲ್‌ವೊಂದರ ಮ್ಯಾನೇಜರ್ ಹೇಳುವಂತೆ, ವರ್ಷದ ಕೊನೆಯಲ್ಲಿ ಇದು ಗ್ರಾಹಕರನ್ನು ಆಕರ್ಷಿಸುವ ಟ್ರಿಕ್ಸ್. ಇದರೊಂದಿಗೆ ರೆಗ್ಯುಲರ್ ಗ್ರಾಹಕರಿಗೆ ಡಿಸ್ಕೌಂಟ್ಸ್ ಕೂಡ ಘೋಷಿಸಲಾಗುತ್ತಿದೆ. ಇವೆಲ್ಲಾ ಇಯರ್ ಎಂಡ್ ಸೇಲ್ ಸೀಸನ್ ಸೇಲ್ ತಂತ್ರ. ಅಳಿದುಳಿದ ಪ್ರಾಡಕ್ಟ್ಗಳನ್ನು ಮಾರಾಟ ಮಾಡುವುದು ಈ ಸೇಲ್‌ನ ಉದ್ದೇಶ ಎನ್ನುತ್ತಾರೆ.
4/5
ಇಯರ್ ಎಂಡ್ ಸೇಲ್‌ನಲ್ಲಿ ಶಾಪಿಂಗ್ ಮಾಡುವ ಮುನ್ನ
- ಮಾಲ್‌ಗಳಲ್ಲಿ ಮಾತ್ರ ಈ ಆಫರ್ ದೊರೆಯುವುದು.
- ಮೊದಲು ವಿಂಡೋ ಶಾಪಿಂಗ್ ಪ್ಲಾನ್ ಮಾಡಿ, ನಂತರ, ಅಗತ್ಯವಿರುವುದನ್ನು ಖರೀದಿಸಿ.
- ಈ ಇಯರ್ ಎಂಡ್ ಸೇಲ್‌ನಲ್ಲಿ ಆದಷ್ಟೂ ಕಳೆದ ಸೀಸನ್ನ ಖರೀದಿಗೊಳ್ಳದ ಅಳಿದುಳಿದ ಫ್ಯಾಷನ್‌ವೇರ್‌ಗಳೇ ಇರುತ್ತವೆ. ಯೋಚಿಸಿ, ಖರೀದಿಸಿ.
- ಸೇಲ್‌ನ ಡಿಸ್ಕೌಂಟ್ಸ್ -ಗಿಫ್ಟ್ ವೋಚರ್ ಅಮಿಷಕ್ಕೆ ಬಲಿಯಾಗಬೇಡಿ. ಒಂದು ಕೊಂಡರೇ 50 ಪರ್ಸೆಂಟ್, ಎರಡು ಕೊಂಡರೇ ಒಂದು ಫ್ರೀ ಎಂಬೆಲ್ಲಾ ಆಫರ್ಸ್ ಹಾಗೂ ಇಂತಿಷ್ಟು ಹೆಚ್ಚು ಖರೀದಿಸಿದಲ್ಲಿ ಗಿಫ್ಟ್ ವೋಚರ್ ದೊರೆಯುತ್ತದೆ ಎಂಬ ಅಮಿಷಕ್ಕೆ ಮನಸೋಲಬೇಡಿ.
- ಉಡುಪುಗಳು ತೀರಾ ಕಡಿಮೆ ಬೆಲೆಗೆ ದೊರೆಯುತ್ತಿವೆ ಎಂದು ಖರೀದಿಸಬೇಡಿ. ಅವನ್ನು ಕೆಲವೊಮ್ಮೆ ಧರಿಸಲಾಗುವುದಿಲ್ಲ!
- ಆದಷ್ಟೂ ಈ ಸೀಸನ್ನ ಲೇಯರ್ ಲುಕ್ಗೆ ಸಾಥ್ ನೀಡುವ ಫ್ಯಾಷನ್‌ವೇರ್ಸ್ ಆಯ್ಕೆ ಮಾಡಿ. ಇದು ಸೀಸನ್‌ಗೆ ಮ್ಯಾಚ್ ಆಗುವುದಲ್ಲದೇ, ಯಾವಾಗ ಬೇಕಾದರೂ ಇತರೇ ಉಡುಪುಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
5/5
ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲೂ ಆಫರ್
ಉದ್ಯಾನನಗರಿಯ ಬಹುತೇಕ ಎಲ್ಲ ಮಾಲ್‌ಗಳಲ್ಲೂ ಇಯರ್ ಎಂಡ್ ಸೇಲ್ ಈಗಾಗಲೇ ಆರಂಭಗೊಂಡಿದೆ. ಅಲ್ಲದೆ ದೇಶಾದ್ಯಂತ ಖರೀದಿಯೂ ಭರಾಟೆಯೂ ಜೋರಾಗಿದೆ. ಮಾತ್ರವಲ್ಲ ಆನ್‌ಲೈನ್ ಶಾಪಿಂಗ್ ಸೈಟ್‌ನಲ್ಲೂ ಆಫರ್ ನೀಡಲಾಗುತ್ತಿದೆ.