ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter Styling 2026: ಸ್ಟೈಲಿಶ್ ಲುಕ್‌ಗಾಗಿ ಮಫ್ಲರ್ ಸ್ಟೈಲಿಂಗ್ ಟಿಪ್ಸ್

ಚಳಿಗಾಲದಲ್ಲಿ ನೀವು ಮಫ್ಲರ್ ಧರಿಸುತ್ತೀದ್ದೀರಾ? ಹಾಗಾದಲ್ಲಿ ಹೇಗೆ ಸ್ಟೈಲಿಶ್ ಆಗಿ ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಮಫ್ಲರ್ ಒಂದೇ ಆದರೂ ನಾನಾ ಬಗೆಯಲ್ಲಿ ಸ್ಟೈಲಿಂಗ್ ಮಾಡಬಹುದು. ಫ್ಯಾಷೆನಬಲ್ ಆಗಿಯೂ ಕಾಣಿಸಬಹುದು. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ನೀವು ಮಫ್ಲರ್ ಧರಿಸುತ್ತೀರಾ! ಹಾಗಾದಲ್ಲಿ ಅದನ್ನು ಸ್ಟೈಲಿಶ್ ಆಗಿ ಧರಿಸಿ, ಆಗ ನೀವು ಕೂಡ ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಮಫ್ಲರ್ ಒಂದೇ ಆದರೂ ನಾನಾ ಬಗೆಯಲ್ಲಿ ಸ್ಟೈಲಿಂಗ್ ಮಾಡಬಹುದು. ಫ್ಯಾಷೆನಬಲ್ ಆಗಿಯೂ ಕಾಣಿಸಬಹುದು. ಇದಕ್ಕಾಗಿ ನೀವು ಧರಿಸುವ ಡ್ರೆಸ್‌ಕೋಡ್‌ಗೆ ತಕ್ಕಂತೆ ಸ್ಟೈಲಿಂಗ್‌ನಲ್ಲಿ ಒಂದಿಷ್ಟು ಬದಲಾವಣೆ ಮಾಡಬೇಕಾಗುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಸ್ಟೈಲಿಶ್ ಆಗಿ ಕಾಣಿಸಲು ರೌಂಡ್ ಶೇಪ್

ಮೊದಲಿಗೆ ಮಫ್ಲರ್ ಅನ್ನು ಕತ್ತಿನ ಸುತ್ತಾ ಒಂದು ರೌಂಡ್ ಸುತ್ತಿ. ಎಡಗಡೆ ಹಾಗೂ ಬಲಗಡೆ ಒಂದೇ ಸಮನಾಗಿ ಬರುವಂತೆ ನೋಡಿಕೊಳ್ಳಿ. ನೆಕ್ಲೈನ್ ಅಗಲವಾಗಿರುವ ಡ್ರೆಸ್‌ಗಳಿಗೆ ಹೀಗೆ ಮಾಡಿ, ನೋಡಿ.

ಕತ್ತನ್ನು ಸುತ್ತುವರಿದ ಮಫ್ಲರ್

ಮೊದಲಿಗೆ ಒಂದು ಕಡೆ ಮಫ್ಲರನ್ನು ಯು ಶೇಪ್‌ನಲ್ಲಿ ತೆಗೆದುಕೊಳ್ಳಿ. ಕತ್ತಿನ ಮುಂಭಾಗದಲ್ಲಿ ಅದರ ಒಳಗೆ ಅಂದರೇ ಹೋಲ್‌ನಲ್ಲಿ ಇನ್ನೊಂದು ತುದಿಯನ್ನು ನುಸುಳಿಸಿ, ಹೊರ ತನ್ನಿ. ಇದು ನೋಡಲು ಟೈ ಹಾಕಿಕೊಂಡಂತೆ ಕಾಣಿಸುತ್ತದೆ.

3/5

ಮಫ್ಲರ್ ವ್ರಾಪ್ ಮಾಡಿ

ರೆಡಿಮೇಡ್ ರೌಂಡ್ ಶೇಪ್‌ನಲ್ಲಿ ಸುತ್ತಿಕೊಂಡಿರುವ ಮಫ್ಲರ್‌ಗಳು ದೊರೆಯುತ್ತವೆ. ಇವನ್ನು ಡಬ್ಬಲ್ ಫೋಲ್ಡ್‌ನಲ್ಲಿಯೂ ಧರಿಸಬಹುದು. ಅಲ್ಲದೇ ಸಾಮಾನ್ಯ ಮಫ್ಲರ್ ಅನ್ನು ಕೂಡ ಇದೇ ರೀತಿಯಲ್ಲಿ ಸುತ್ತಿಕೊಳ್ಳಬಹುದು. ಜಾಕೆಟ್ ಹಾಗೂ ಕೋಟಿನ ಜತೆ ಧರಿಸಿದಾಗ ಇದು ಆಕರ್ಷಕವಾಗಿ ಕಾಣಿಸುತ್ತದೆ.

4/5

ಮಫ್ಲರ್ ಸೇರಿಸಿ ಬೆಲ್ಟ್ ಹಾಕಿ

ಮಫ್ಲರನ್ನು ಉದ್ದನಾಗಿ ಇಳೆ ಬಿಡಿ. ಅದನ್ನು ಸೇರಿಸಿದಂತೆ ಉಡುಪಿಗೆ ಸ್ಟೇಟ್‌ಮೆಂಟ್ ಬೆಲ್ಟ್ ಹಾಕಿದಾಗ ಡಿಫರೆಂಟ್ ಲುಕ್ ನೀಡುವುದು. ಹಾಕುವ ಮಫ್ಲರ್ ತೆಳುವಾಗಿರಬೇಕು.

5/5

ಟೈ ಶೇಪ್ ಮಫ್ಲರ್ ಸ್ಟೈಲಿಂಗ್

ಮೊದಲಿಗೆ ಮಫ್ಲರನ್ನು ಎರಡೆಳೆ ತೆಗೆದುಕೊಂಡು ಒಂದು ಭಾಗವನ್ನು ಅದರೊಳಗೆ ನುಸುಳಿಸಿ. ಆದರೆ, ಮಫ್ಲರ್ ನೋಡಲು ಸ್ಟೋಲ್‌ನಂತಿರಬೇಕು. ಡಬಲ್ ಅಥವಾ ಸಿಂಗಲ್ ಟೈ ಸ್ಟೈಲಿಂಗ್ ಮಾಡಬಹುದು.

ಶೀಲಾ ಸಿ ಶೆಟ್ಟಿ

View all posts by this author