Toxic Teaser: ಹಸಿಬಿಸಿ ದೃಶ್ಯಗಳಿಂದಲೇ ಸದ್ದು ಮಾಡಿದ ʻಟಾಕ್ಸಿಕ್ʼ ಟೀಸರ್; ಯಶ್ ಹೊಸ ಸಿನಿಮಾದ ಸ್ಪೆಷಾಲಿಟಿಗಳಿವು!
ʻರಾಕಿಂಗ್ ಸ್ಟಾರ್ʼ ಯಶ್ ಅವರ ಹೊಸ ಸಿನಿಮಾ ʻಟಾಕ್ಸಿಕ್ʼನ ಟೀಸರ್ ರಿಲೀಸ್ ಆಗಿದೆ. ಬಹುನಿರೀಕ್ಷಿತ ಈ ಟೀಸರ್‌ನಲ್ಲಿ ಸಿನಿಪ್ರಿಯರ ನಿರೀಕ್ಷೆಗೂ ಮೀರಿದ ದೃಶ್ಯಗಳಿವೆ. ಅದರಲ್ಲೂ ಹಸಿಬಿಸಿ ಬೋಲ್ಡ್ ಸೀನ್‌ಗಳಂತೂ ಹುಬ್ಬೇರುವಂತೆ ಮಾಡುತ್ತಿವೆ. ಈವರೆಗೂ ಯಶ್ ಇಂತಹ ದೃಶ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಟಾಕ್ಸಿಕ್‌ನಲ್ಲಿ ತಮ್ಮ ಮಡಿವಂತಿಕೆಯನ್ನು ಮೀರಿ, ಬೋಲ್ಡ್ ಸೀನ್‌ಗಳಲ್ಲಿ ಮಿಂಚಿದ್ದಾರೆ ಯಶ್. ಇನ್ನು, ಇಡೀ ಸಿನಿಮಾದ ಕ್ವಾಲಿಟಿ ಹಾಲಿವುಡ್ ರೇಂಜ್‌ನಲ್ಲಿದೆ. ಈ ಟೀಸರ್‌ನ ಕೆಲವು ಸ್ಪೆಷಾಲಿಟಿಗಳು ಇಲ್ಲಿವೆ ನೋಡಿ
ʻಟಾಕ್ಸಿಕ್ʼ ಚಿತ್ರದಲ್ಲಿ ಯಶ್ ಅವರು ʻರಾಯʼ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಆ ಪಾತ್ರವು ಎಂತಹ ಸ್ಟ್ರಾಂಗ್ ಹಿನ್ನೆಲೆಯನ್ನ ಹೊಂದಿದೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ
ಯಶ್ ಸ್ವ್ಯಾಗ್, ಇಂಟೆನ್ಸ್ ಲುಕ್ ಮತ್ತು ಕೋಲ್ಡ್ ಬ್ಲಡೆಡ್ ವಿಲನ್ ಶೇಡ್ ಟೀಸರ್‌ನಲ್ಲಿ ಹೈಲೈಟ್ ಆಗಿದೆ. ಈ ಸಿನಿಮಾದ ಸ್ಕ್ರಿಪ್ಟ್ ಅನ್ನು ಸ್ವತಃ ಯಶ್ ಬರೆದಿದ್ದು, ನಿರ್ದೇಶಕಿ ಗೀತು ಮೋಹನ್‌ದಾಸ್ ಕೂಡ ಕೈಜೋಡಿಸಿದ್ದಾರೆ
ಹಸಿಬಿಸಿ ದೃಶ್ಯಗಳಲ್ಲಿ ಯಶ್ ಕಾಣಿಸಿಕೊಂಡಿದ್ದು, ಟೀಸರ್‌ನಲ್ಲಿಯೇ ಹಿಂಗೆ ಇದೆ, ಸಿನಿಮಾದಲ್ಲಿ ಇನ್ನೆಷ್ಟಿರಬೇಡ ಎಂಬ ಅಚ್ಚರಿಯಲ್ಲಿದ್ದಾರೆ ಫ್ಯಾನ್ಸ್. ಇದು ಫ್ಯಾಮಿಲಿ ಆಡಿಯೆನ್ಸ್‌ಗೆ ಕಿರಿ ಕಿರಿ ಉಂಟು ಮಾಡಬಹುದಾ? ಗೊತ್ತಿಲ್ಲ
ʻಟಾಕ್ಸಿಕ್ʼ ಸಿನಿಮಾದ ಈ ಟೀಸರ್ ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ 2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ
ಟಾಕ್ಸಿಕ್ ಒಂದು ಡಾರ್ಕ್, ಇಂಟೆನ್ಸ್ ಮತ್ತು ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ರವಿ ಬಸ್ರೂರು ಅವರ ಹಿನ್ನಲೆ ಸಂಗೀತ ಮತ್ತೊಮ್ಮೆ ವರ್ಕ್ ಆಗಿದೆ.
ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವನ್ನು ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಹಲವಾರು ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಇಟ್ಟುಕೊಳ್ಳಲಾಗಿದೆ.