ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Year Ender 2025: ಈ ವರ್ಷ ದಾಂಪತ್ಯ ಬದುಕಿಗೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರೇ ನೋಡಿ; ಇಲ್ಲಿದೆ ಫುಲ್‌ ಲಿಸ್ಟ್‌

2025ರಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕೆಲ ಸೆಲೆಬ್ರಿಟಿಗಳು ಅತ್ಯಂತ ಸರಳವಾಗಿ ಮದುವೆಯಾದರೆ, ಮತ್ತೆ ಕೆಲವರು ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. 2025ರ ಈ ವರ್ಷವು ಸೆಲೆಬ್ರಿಟಿಗಳು ತಮ್ಮ ಕಲ್ಯಾಣೋತ್ಸವದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದರು. ಈ ವರ್ಷ ವಿವಾಹವಾದ ಪ್ರಮುಖ ಕನ್ನಡದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

1/13

ಛಾಯಾಗ್ರಾಹಕ ಭುವನ್‌ ಗೌಡ ಅವರು ನಿಖಿತಾ ಅವರೊಂದಿಗೆ ಸಪ್ತಪದಿ ತುಳಿದರು

2/13

ಅನಯಾ ವಸುಧಾ ಜೊತೆ ‘777 ಚಾರ್ಲಿ’ ನಿರ್ದೇಶಕ ಕಿರಣ್‌ ರಾಜ್‌ ವಿವಾಹವಾದರು

3/13

ಫೆ.16ರಂದು ಮೈಸೂರಿನಲ್ಲಿ ಡಾ. ಧನ್ಯತಾ ಅವರನ್ನ ಡಾಲಿ ಧನಂಜಯ ಮದುವೆಯಾದರು

4/13

ನಟಿ ರಕ್ಷಿತಾ ಪ್ರೇಮ್‌ ಸಹೋದರ ರಾಣಾ ಮದುವೆಯು ಫೆ.7ರಂದು ಬೆಂಗಳೂರಿನಲ್ಲಿ ನಡೆಯಿತು

5/13

ಏಪ್ರಿಲ್‌ನಲ್ಲಿ ‌ಕ್ರಿಕೆಟಿಗ ಬಿ.ಆರ್‌ ಶರತ್‌ ಅವರ ಜೊತೆಗೆ ಹಸೆಮಣೆ ಏರಿದ ನಟಿ ಅರ್ಚನಾ ಕೊಟ್ಟಿಗೆ

6/13

ಹಿರಿಯ ನಟಿ ಜಯಮಾಲಾ ಪುತ್ರಿ ಸೌಂದರ್ಯ ಮತ್ತು ರುಷಭ್‌ ವಿವಾಹ ಬೆಂಗಳೂರಿನಲ್ಲಿ ನಡೆಯಿತು

7/13

‘ಬಿಗ್‌ ಬಾಸ್‌ʼ ಖ್ಯಾತಿಯ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್‌ ಕಶ್ಯಪ್‌ ಮದುವೆ ಮೇ 9ರಂದು ನಡೆಯಿತು

8/13

‘ಅಗ್ನಿಸಾಕ್ಷಿ’ ಧಾರಾವಾಹಿಯ ನಟಿ ವೈಷ್ಣವಿ ಗೌಡ ಮತ್ತು ಅನುಕೂಲ್‌ ಮಿಶ್ರಾ ಮದುವೆ ಜೂನ್‌ 5ರಂದು ನಡೆಯಿತು

9/13

ಕುವೆಂಪು ಅವರ ಮಂತ್ರ ಮಾಂಗಲ್ಯ ಆಶಯದಂತೆ ಗಾಯಕಿ ಸುಹಾನಾ ಸೈಯದ್‌ - ನಿತಿನ್‌ ಶಿವಾಂಶ್‌ ಮದುವೆಯಾದರು

10/13

ಬಹುಕಾಲದ ಗೆಳೆಯ ಅರುಣ್‌ ವೆಂಕಟೇಶ್‌ ಜೊತೆ ‘ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ನಟಿ ರಜಿನಿ ವಿವಾಹವು ನ.10ರಂದು ಜರುಗಿತು

11/13

ಸ್ಪೂರ್ತಿ ಜೊತೆ ‘ಶ್ರೀರಸ್ತು ಶುಭಮಸ್ತು’ ಸೀರಿಯಲ್‌ ಖ್ಯಾತಿಯ ನಟ ಶ್ರೀ ಮಹದೇವ್‌ ಮದುವೆಯು ನವೆಂಬರ್‌ 30ರಂದು ನಡೆಯಿತು

12/13

ನಿರೂಪಕಿ ಅನುಶ್ರೀ ಅವರು ತಮ್ಮ ಬಹುಕಾಲದ ಗೆಳೆಯ ರೋಷನ್‌ ಜೊತೆ ಆಗಸ್ಟ್‌ 28ರಂದು ವಿವಾಹವಾದರು

13/13

‘ಅಯೋಗ್ಯ’ ಖ್ಯಾತಿಯ ನಿರ್ದೇಶಕ ಮಹೇಶ್‌ ಕುಮಾರ್‌ ಈ ವರ್ಷ ದಾಂಪತ್ಯ ಬದುಕಿಗೆ ಕಾಲಿಟ್ಟರು