ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yoga Fashion 2026: ಸೀಸನ್‌ನಲ್ಲಿ ಟ್ರೆಂಡಿಯಾದ ಯೋಗ ಕೋ-ಆರ್ಡ್ ಸೆಟ್‌ಗಳಿವು

Yoga Co-Ord Sets: ಪ್ರಿಂಟೆಡ್‌, ಮಾನೋಕ್ರೋಮ್‌ ಸೇರಿದಂತೆ ನಾನಾ ಬಗೆಯ ಯೋಗ ಕೋ -ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ನಯಾ ರೂಪದಲ್ಲಿ ಆಗಮಿಸಿವೆ. ಯಾವ್ಯಾವ ಬಗೆಯವು ಬೇಡಿಕೆ ಸೃಷ್ಟಿಸಿಕೊಂಡಿವೆ? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್‌
1/5

ವೈವಿಧ್ಯಮಯ ಯೋಗ ಕೋ- ಆರ್ಡ್ ಸೆಟ್‌ಗಳು ಇದೀಗ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಅದರಲ್ಲೂ ವೆಸ್ಟರ್ನ್‌ ಶೈಲಿಯ ಈ ಕೋ -ಆರ್ಡ್ ಸೆಟ್‌ಗಳು ಇದೀಗ ನಮ್ಮಲ್ಲೂ ಟ್ರೆಂಡಿಯಾಗಿವೆ.

2/5

ಟ್ರೆಂಡ್‌ನಲ್ಲಿರುವ ಯೋಗ ಕೋ- ಆರ್ಡ್ ಸೆಟ್ಸ್

ಪ್ರಿಂಟೆಡ್‌, ಮಾನೋಕ್ರೋಮ್‌, ಸಾಲಿಡ್‌ ಕಲರ್ಸ್, ಸಾದಾ, ಗ್ರಾಫಿಕ್‌ ಪ್ರಿಂಟ್ಸ್, ಬ್ರಶ್‌ ಸ್ಟ್ರೋಕ್ಸ್, ಜೆಮೆಟ್ರಿಕಲ್‌ ಪ್ರಿಂಟ್ಸ್ ನವು ಇದೀಗ ಕೋ- ಆರ್ಡ್ ಸೆಟ್‌ ಔಟ್‌ಫಿಟ್‌ ಕೆಟಗರಿಯಲ್ಲಿ ಟ್ರೆಂಡಿಯಾಗಿವೆ.

ದುಬಾರಿಯಾಗಿರುವ ಯೋಗ ಕೋ - ಆರ್ಡ್ ಸೆಟ್ಸ್

ಆಯಾ ಬ್ರಾಂಡ್‌ನ ಡಿಸೈನ್‌ ಹಾಗೂ ಫ್ಯಾಬ್ರಿಕ್‌ಗೆ ತಕ್ಕಂತೆ ಇವುಗಳ ಬೆಲೆ ನಿಗಧಿಯಾಗಿರುತ್ತವೆ. ಹಾಗೆಂದು ಇವೇನು ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿಲ್ಲ. ಬದಲಿಗೆ ದುಬಾರಿ ಬೆಲೆ ಹೊಂದಿವೆ ಎನ್ನುತ್ತಾರೆ ಮಾರಾಟಗಾರರಾದ ಜಯಂತ್‌.

3/5

ಕೋ ಆರ್ಡ್ ಸೆಟ್ಸ್ ನಲ್ಲಿ ಜೆನ್‌ ಜಿ ಯೋಗ

ಜೆನ್‌ ಜಿ ಯುವತಿಯರು ಹಾಗೂ ಕಾಲೇಜು ಹುಡುಗಿಯರು ಮತ್ತು ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು ಸೇರಿದಂತೆ ಹೈ ಫ್ಯಾಷನ್‌ ಟಚ್‌ ಬಯಸುವವರು ಹೆಚ್ಚಾಗಿ ವೆಸ್ಟರ್ನ್ ಲುಕ್‌ ನೀಡುವ ಕೋ -ಆರ್ಡ್ ಸೆಟ್‌ಗಳನ್ನೇ ಖರೀದಿಸುತ್ತಿರುವುದು ಹೆಚ್ಚಾಗಿದೆ.

4/5

ವೆಸ್ಟರ್ನ್‌ ಲುಕ್‌ ನೀಡುವ ಯೋಗ ಕೋ ಆರ್ಡ್ ಸೆಟ್ಸ್

ಅವುಗಳಲ್ಲಿ, ಕ್ರಿಸ್‌ ಕ್ರಾಸ್‌ ಕ್ರಾಪ್‌ ಫಿಟ್ಟಿಂಗ್‌ ಟಾಪ್‌, ಬ್ರಿಥೆಬಲ್‌ ಪ್ಯಾಂಟ್‌ನಂತವು ಹೆಚ್ಚು ಮಾರಾಟವಾಗುತ್ತಿವೆ. ಸಾಲಿಡ್‌ ಕಲರ್‌ನವು ಪ್ರಿಂಟೆಡ್‌ಗಿಂತ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಶಿ.

5/5

ಯೋಗ ಕೋ- ಆರ್ಡ್ ಸೆಟ್‌ ಪ್ರಿಯರಿಗೆ ಟಿಪ್ಸ್

  • ಬ್ರ್ಯಾಂಡೆಡ್ ಕೋ- ಆರ್ಡ್ ಸೆಟ್ಸ್ ಆಯ್ಕೆ ಮಾಡಿ. ಇವು ನಿಮಗೆ ಕಂಫರ್ಟಬಲ್ ಫೀಲ್ ನೀಡುತ್ತವೆ.
  • ಫ್ಯಾಬ್ರಿಕ್‌ನ ಗುಣಮಟ್ಟಕ್ಕೆ ಆದ್ಯತೆ ನೀಡಿ.
  • ಆದಷ್ಟೂ ಕೊಂಚ ಲೂಸಾಗಿರುವ ಕೋ -ಆರ್ಡ್ ಸೆಟ್ ಆಯ್ಕೆ ಮಾಡಿ. ಇಲ್ಲವಾದಲ್ಲಿ ಧರಿಸಿದಾಗ ಉಸಿರುಗಟ್ಟಬಹುದು.
  • ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಇವುಗಳನ್ನು ಧರಿಸಿ.

ಶೀಲಾ ಸಿ ಶೆಟ್ಟಿ

View all posts by this author