ಬೆಂಗಳೂರು: 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ 18 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವಾಲಯದಿಂದ 2026ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ (President's Medal for Distinguished Service) ಹಾಗೂ ‘ಶ್ಲಾಘನೀಯ ಸೇವಾ ಪದಕʼ (Medal for Meritorious Service) ಘೋಷಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿನ ಕರ್ತವ್ಯ ನಿಷ್ಠೆ, ಶಿಸ್ತು ಮತ್ತು ಅಪ್ರತಿಮ ಸೇವೆಯನ್ನು ಪರಿಗಣಿಸಿ ಒಬ್ಬ ಅಧಿಕಾರಿಗೆ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ ಹಾಗೂ 17 ಮಂದಿ ಅಧಿಕಾರಿ, ಸಿಬ್ಬಂದಿಗೆ ‘ಶ್ಲಾಘನೀಯ ಸೇವಾ ಪದಕ’ ಪ್ರಕಟಿಸಲಾಗಿದೆ.
ಬೆಂಗಳೂರು ಸಿಸಿಬಿ ಎಸಿಪಿಗೆ ವಿಶಿಷ್ಟ ಸೇವಾ ಪದಕ
ಬೆಂಗಳೂರು ನಗರ ಸಿಸಿಬಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಎಚ್.ಎನ್. ಧರ್ಮೇಂದ್ರ ಅವರು ಅತ್ಯುನ್ನತ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ’ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತರ ಪಟ್ಟಿ
- ಸಾರಾ ಫಾತಿಮಾ – ಎಸ್‌ಪಿ, ರೈಲ್ವೇಸ್, ಬೆಂಗಳೂರು
- ಥಾಮಸ್ ಮ್ಯಾಥ್ಯೂ – ಕಮಾಂಡೆಂಟ್, ಕೆಎಸ್‌ಆರ್‌ಪಿ
- ಮಹಾದೇವ್ – ಎಸಿಪಿ, ಆಗ್ನೇಯ ಸಂಚಾರ ಉಪವಿಭಾಗ, ಬೆಂಗಳೂರು
- ಪ್ರಮಾನಂದ್ ಘೋಡ್ಗೆ – ಡಿವೈಎಸ್ಪಿ, ಡಿಎಆರ್, ರಾಯಚೂರು
- ಕೆ. ಷಣ್ಮುಗ ವರ್ಮಾ – ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
- ಭಾವುದ್ದೀನ್ ರುಕ್ಮುದ್ದೀನ್ – ಪೊಲೀಸ್ ಇನ್ಸ್‌ಪೆಕ್ಟರ್, ಮಾಳಮಾರುತಿ ಠಾಣೆ
- ಗುರುಪ್ರಸಾದ್ ಗೋಪಾಲ್ ನಾಯಕ್ – ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ
- ನಯೀಂ – ರಿಸರ್ವ್ ಪೊಲೀಸ್ ಇನ್ಸ್‌ಪೆಕ್ಟರ್, ಲೋಕಭವನ
- ಶ್ರೀನಿವಾಸ – ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಕೆ.ಪಿ. ಅಗ್ರಹಾರ ಠಾಣೆ
- ಜ್ಞಾನದೇವ್ ನವಲ ತರಾಸೆ – ವಿಶೇಷ ಎಆರ್‌ಎಸ್‌ಐ (Spl. ARSI), ಕೆಎಸ್‌ಆರ್‌ಪಿ
- ಮಹದೇವಸ್ವಾಮಿ – ಹೆಡ್ ಕಾನ್ಸ್‌ಟೇಬಲ್, ವಿಧಾನಸೌಧ ಭದ್ರತಾ ವಿಭಾಗ
- ಮಾರಿಯಾ ಜೋಸೆಫ್ ದಿನೇಶ್ ಕುಮಾರ್ – ಹೆಡ್ ಕಾನ್ಸ್‌ಟೇಬಲ್, ಡಿಸಿಆರ್‌ಇ, ಕೆಜಿಎಫ್
- ಚಂದ್ರಶೇಖರ ಚಿಕ್ಕಣ್ಣನವರ್ – ಹೆಡ್ ಕಾನ್ಸ್‌ಟೇಬಲ್, ಕೆಎಸ್‌ಆರ್‌ಪಿ
- ಅಬ್ದುಲ್ ಕಮಾಲ್ – ಹೆಡ್ ಕಾನ್ಸ್‌ಟೇಬಲ್, ತರೀಕೆರೆ
- ನಾಗೇಶ್ ಮಚ್ಚಯ್ಯ – ಹೆಡ್ ಕಾನ್ಸ್‌ಟೇಬಲ್, ಸಿಐಡಿ
- ಮನೋಹರ್ – ಪೊಲೀಸ್ ಕಾನ್ಸ್‌ಟೇಬಲ್
- ಅಬ್ದುಲ್ ರಬ್ಬಾನಿ – ಎಪಿಸಿ, ಡಿಪಿಒ
ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರರಾದ ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.