ಹೌರಾ: ವಿಧಾನಸಭಾ ಚುನಾವಣೆಗೂ (Assembly elections) ಮುನ್ನ ಟಿಎಂಸಿ ( Trinamool Congress) ಯುವ ನಾಯಕರ ಮೇಲೆ ಹೌರಾದಲ್ಲಿ ದಾಳಿ ನಡೆಸಲಾಗಿದೆ. ಇದು ಈಗ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ. ತೃಣಮೂಲ ವಿದ್ಯಾರ್ಥಿ ಕಾಂಗ್ರೆಸ್ ಪಕ್ಷದ (Trinamool Student Congress Party) ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬುಧವಾರ ವಿದ್ಯಾರ್ಥಿ ಸಂಘದ ಕೇಂದ್ರ ಸಭೆಗೆ ಹೋಗುತ್ತಿದ್ದ ಇಬ್ಬರು ನಾಯಕರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ. ಬರುಯಿಪರಾ-ಹೌರಾ (Baruipara-Howrah) ಪ್ರದೇಶದ ಲಿಲುವಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಹೌರಾ ಪ್ರದೇಶದ ಲಿಲುವಾ ರೈಲು ನಿಲ್ದಾಣದ ಬಳಿ ಟಿಎಂಸಿ ನಾಯಕರು ತೃಣಮೂಲ ಕಾಂಗ್ರೆಸ್ ಪಕ್ಷದ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಡಂಕುನಿ ಪುರಸಭೆಯ 11ನೇ ವಾರ್ಡ್‌ನ ಕೌನ್ಸಿಲರ್ ಅವರ ಮಗ ಮತ್ತು ಟಿಎಂಸಿಪಿಯ ವಾರ್ಡ್ ಸಮಿತಿಯ ಅಧ್ಯಕ್ಷ ಅರ್ನಾಬ್ ರಾಯ್ ಮತ್ತು ವಾರ್ಡ್ 21 ರ ವಿದ್ಯಾರ್ಥಿ ನಾಯಕ ಸಿದ್ಧಾರ್ಥ ರಾಯ್ ಗೆ ಗಂಭೀರ ಗಾಯಗಳಾಗಿವೆ. ಇವರನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಹೌರಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಎಂಸಿ ನಾಯಕರಿಗೆ ಹಲ್ಲೆ ನಡೆಸಿರುವ ಸುದ್ದಿ ಬಹುಬೇಗನೆ ಹರಡಿದ್ದು, ಇದು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಿದೆ. ರಾಜರಹತ್-ಗೋಪಾಲಪುರ್ ಟ್ಯಾಕ್ಸ್‌ನಿಂದ ಕಸ್ಬಾ ಕಾನೂನು ಕಾಲೇಜಿನವರೆಗೆ ಕಾಲೇಜುಗಳಲ್ಲಿ ಆಡಳಿತ ಪಕ್ಷದ ವಿದ್ಯಾರ್ಥಿ ವಿಭಾಗದ ಪ್ರಭಾವವನ್ನು ಈಗಾಗಲೇ ಪ್ರಶ್ನಿಸುತ್ತಿರುವ ವಿರೋಧ ಪಕ್ಷವು ಶೈಕ್ಷಣಿಕ ಸ್ಥಳಗಳಲ್ಲಿ ಅಶಾಂತಿ ಮತ್ತು ಹಿಂಸಾಚಾರವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಇಬ್ಬರೂ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Rajeev Shukla : ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕ!
ಹೌರಾದಲ್ಲಿ ವಿದ್ಯಾರ್ಥಿ ನಾಯಕರ ಮೇಲೆ ಯಾರು ದಾಳಿಯನ್ನು ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.