ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajeev Shukla : ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ರಾಜೀವ್‌ ಶುಕ್ಲಾ ನೇಮಕ!

ಭಾರತದ ಮಾಜಿ ಆಲ್‌ರೌಂಡರ್ ಬಿನ್ನಿ ಭಾರತದ ಪರ 27 ಟೆಸ್ಟ್‌ ಮತ್ತು 72 ಏಕದಿನ ಪಂದ್ಯಗಳಾಡಿದ್ದು, ಒಟ್ಟು 124 ವಿಕೆಟ್‌ ಪಡೆದಿದ್ದರು. 1983ರ ಐತಿಹಾಸಿಕ ವಿಶ್ವಕಪ್‌ ಗೆಲುವಿನಲ್ಲಿ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದ ಬಿನ್ನಿ ಎಂಟು ಇನ್ನಿಂಗ್ಸ್‌ ಗಳಲ್ಲಿ 18 ವಿಕೆಟ್‌ ಪಡೆದಿದ್ದರು.

ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ರಾಜೀವ್‌ ಶುಕ್ಲಾ ನೇಮಕ!

-

Abhilash BC Abhilash BC Aug 29, 2025 2:48 PM

ಮುಂಬಯಿ: 2022ರಿಂದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷರಾಗಿರುವ ಕರ್ನಾಟಕದ ರೋಜರ್‌ ಬಿನ್ನಿ(Roger Binny) ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಬಿಸಿಸಿಐ ಚುನಾವಣೆಯವರೆಗೆ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್‌ ಶುಕ್ಲಾ(Rajeev Shukla) ಹಂಗಾಮಿಯಾಗಿ(BCCI Interim Chief) ನೇಮಕಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಿಸಿಸಿಐ ಸಂವಿಧಾನದ ಪ್ರಕಾರ 70 ವರ್ಷದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಇರುವಂತಿಲ್ಲ. ಬಿನ್ನಿಗೆ ಇದೇ ಜುಲೈ 19ರಂದು 70 ವರ್ಷ ತುಂಬಿತ್ತು.

ರಾಜೀವ್‌ ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಅಂದು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 2017ರವರೆಗೆ ಉತ್ತರ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 2018ರವರೆಗೆ ಐಪಿಎಲ್‌ ಅಧ್ಯಕ್ಷರಾಗಿ ಶುಕ್ಲಾ ಕೆಲಸ ಮಾಡಿದ್ದರು. ಹಲವು ಅನುಭವ ಆಧಾರದಲ್ಲಿ ಅವರಿಗೆ ಹಂಗಾಮಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ದೈನಿಕ್ ಜಾಗರಣ್ ವರದಿಯ ಪ್ರಕಾರ, ಶುಕ್ಲಾ ಈಗಾಗಲೇ ಅಧಿಕಾರ ಸ್ವೀಕರಿಸಿದ್ದು ಗುರುವಾರ ಅವರ ನೇತೃತ್ವದಲ್ಲಿ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಭಾರತ ತಂಡ ನೂತನ ಜರ್ಸಿ ಪ್ರಾಯೋಜಕತ್ವದ ಕುರಿತು ಚರ್ಚೆ ನಡೆಸಲಾಯಿತು ಎಂದು ವರದಿಯಾಗಿದೆ. ನೂತನ ರಾಷ್ಟ್ರೀಯ ಕ್ರೀಡಾ ಮಸೂದೆಯ ಪ್ರಕಾರ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಬಿನ್ನಿ ಸ್ಫರ್ಧಿಸಿದರೆ, 75 ವರ್ಷಗಳ ವರೆಗೆ ಅವರಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಬಹುದು. ಅವರು ಆಯ್ಕೆಯಾಗದಿದ್ದರೆ, ಸೆಪ್ಟೆಂಬರ್ ನಂತರ ಬಿಸಿಸಿಐಗೆ ಹೊಸ ಅಧ್ಯಕ್ಷರು ನೇಮಕಗೊಳ್ಳಲಿದ್ದಾರೆ.

ಬಿನ್ನಿ ಭಾರತದ ಪರ 27 ಟೆಸ್ಟ್‌ ಮತ್ತು 72 ಏಕದಿನ ಪಂದ್ಯಗಳಾಡಿದ್ದು, ಒಟ್ಟು 124 ವಿಕೆಟ್‌ ಪಡೆದಿದ್ದರು. 1983ರ ಐತಿಹಾಸಿಕ ವಿಶ್ವಕಪ್‌ ಗೆಲುವಿನಲ್ಲಿ ಬಿನ್ನಿ ಪ್ರಮುಖ ಪಾತ್ರ ವಹಿಸಿದ್ದರು. ಕೂಟದಲ್ಲಿ ಅತೀ ಹೆಚ್ಚು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದ ಬಿನ್ನಿ ಎಂಟು ಇನ್ನಿಂಗ್ಸ್‌ ಗಳಲ್ಲಿ 18 ವಿಕೆಟ್‌ ಪಡೆದಿದ್ದರು.

ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಭಾರತ ಕಣಕ್ಕೆ!