ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

BJP Padayatra: ಬರಪೀಡಿತ ಪ್ರದೇಶ ಘೋಷಿಸಲು ಲಂಚ ಬಯಸುವ ಸರ್ಕಾರ: ಬಿ.ವೈ. ವಿಜಯೇಂದ್ರ ವಾಗ್ದಾಳಿ

BY Vijayendra: ಮಸ್ಕಿಯಲ್ಲಿ ಭೀಕರ ಬರ ಇದೆ. ಆದರೂ ಇದನ್ನು ಬರಪೀಡಿತ ಎಂದು ಘೋಷಿಸಿಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಏನೂ ಆಗುವುದಿಲ್ಲ. ಮಸ್ಕಿಯ ರೈತರು 10 ಲಕ್ಷವೋ 50 ಲಕ್ಷವೋ ಲಂಚ ಕೊಟ್ಟರೆ ಮುಖ್ಯಮಂತ್ರಿಗಳು ಈ ಪ್ರದೇಶವನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

ರಾಯಚೂರು/ಮಸ್ಕಿ, ಸೆ.02: ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದ ಈ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಮೇಲೆ ರೈತರನ್ನು ಮರೆತಿದೆ. ದಲಿತರನ್ನೂ ಅದು ಮರೆತಿದೆ. ಯುವಜನತೆ, ಬಡವರನ್ನೂ ಮರೆತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ವಾಗ್ದಾಳಿ ನಡೆಸಿದ್ದಾರೆ. ಪಾದಯಾತ್ರೆಯ (BJP Padayatra) ಎರಡನೇ ದಿನವಾದ ಬುಧವಾರ ಮಾತನಾಡಿದ ಅವರು, ಮಸ್ಕಿಯಲ್ಲಿ ಭೀಕರ ಬರ ಇದೆ. ಆದರೂ ಇದನ್ನು ಬರಪೀಡಿತ ಎಂದು ಘೋಷಿಸಿಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಏನೂ ಆಗುವುದಿಲ್ಲ. ಮಸ್ಕಿಯ ರೈತರು 10 ಲಕ್ಷವೋ 50 ಲಕ್ಷವೋ ಲಂಚ ಕೊಟ್ಟರೆ ಮುಖ್ಯಮಂತ್ರಿಗಳು ಈ ಪ್ರದೇಶವನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಆ ಭಗವಂತನೂ ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ

52 ಸಾವಿರ ಕೋಟಿ ರೂ. ಎಸ್‍ಇಪಿ, ಟಿಎಸ್‍ಪಿ ಹಣವನ್ನು ಬೇರೆ ಬೇರೆ ಇಲಾಖೆಗೆ ವರ್ಗಾಯಿಸಿದ್ದರ ಪರಿಣಾಮವಾಗಿ ದಲಿತರ ಅಭಿವೃದ್ಧಿ ಕುಂಠಿತವಾಗಿದೆ. ಯುವಕರಿಗೆ ಉದ್ಯೋಗ ಕೊಡುವ ಅವಕಾಶ ತಪ್ಪಿಹೋಗಿದೆ. ದಲಿತರಿಗೆ ಮನೆ ಕಟ್ಟುವ ಅವಕಾಶ ಇತ್ತು. ಆ ಹಣದಲ್ಲಿ ಶಿಕ್ಷಣಕ್ಕೆ ಒತ್ತು ಕೊಡಬಹುದಾಗಿತ್ತು. ಬಡವರ ಮನೆ ಬಾಗಿಲಿಗೆ ನೀರು ಕೊಡಬಹುದಾಗಿತ್ತು. ಇದ್ಯಾವುದನ್ನೂ ಮಾಡದೇ ಆ ಹಣವನ್ನು ಬೇರೆ ಇಲಾಖೆಗೆ ವರ್ಗಾಯಿಸಿದ್ದಾರೆ. ಆ ಭಗವಂತನೂ ನಿಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಹೋರಾಟ ಘೋಷಣೆಯಿಂದ ಆತಂಕ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಈ ಹಣದಲ್ಲಿ ಕಾಂಗ್ರೆಸ್ ಹೈಕಮಾಂಡಿಗೆ ಕಪ್ಪ ಕಾಣಿಕೆ ಕೊಟ್ಟು ಅಧಿಕಾರ ನಡೆಸುತ್ತಿದ್ದ ಭ್ರಷ್ಟ ಸಚಿವರನ್ನು ಕೈಬಿಡಲು ಒತ್ತಾಯಿಸಿ ನಾವು ಪಾದಯಾತ್ರೆ ಘೋಷಿಸಿದ್ದೆವು. ಇದರಿಂದ ಮುಖ್ಯಮಂತ್ರಿಗಳಿಗೆ ಎದೆಯಲ್ಲಿ ಡವಡವ ಶುರುವಾಯಿತು ಎಂದು ಟೀಕಿಸಿದರು.

ಇದೇನಾ ನಿಮ್ಮ ದಲಿತಪರ ಕಾಳಜಿ?

ಮುಖ್ಯಮಂತ್ರಿ ಕುರ್ಚಿ ಬುಡಕ್ಕೆ ಬರುವ ಆತಂಕದಿಂದ ಸಚಿವರ ರಾಜೀನಾಮೆ ಕೊಡಿಸಿದ್ದಾರೆ ಎಂದು ಆರೋಪಿಸಿದ ಅವರು, ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜಣ್ಣ ಅವರು ರಾಹುಲ್ ಗಾಂಧಿ ವಿರುದ್ಧ ಮಾತನಾಡಿದರೆಂಬ ಕಾರಣಕ್ಕೆ 24 ಗಂಟೆಯಲ್ಲಿ ರಾಜೀನಾಮೆ ಪಡೆದಿರಲ್ಲವೇ ಮುಖ್ಯಮಂತ್ರಿಗಳೇ? ಇದೇನಾ ನಿಮ್ಮ ದಲಿತ ಪರ ಕಾಳಜಿ ಎಂದು ಕೇಳಿದರು.

Sugar Prices: ಗಣೇಶ ಹಬ್ಬದ ವೇಳೆ ಸಕ್ಕರೆ ಲಭ್ಯತೆ, ಬೆಲೆ ಸ್ಥಿರತೆಗೆ ಕೇಂದ್ರ ಕಟ್ಟುನಿಟ್ಟಿನ ಕ್ರಮ

ದಲಿತರು, ಬಡವರು, ರೈತರ ವಿರೋಧಿ ಲಜ್ಜೆಗೆಟ್ಟ ಸರ್ಕಾರ

ದಲಿತರು, ಬಡವರು, ರೈತರ ವಿರೋಧಿ ಲಜ್ಜೆಗೆಟ್ಟ ಸರ್ಕಾರ ಇದಾಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿ ಎಂದು ಜನರು ತೀರ್ಮಾನಿಸಿದ್ದಾರೆ ಎಂದ ಅವರು, ಯಡಿಯೂರಪ್ಪನವರು ಕೊಟ್ಟ ಭಾಗ್ಯಲಕ್ಷ್ಮಿ ಯೋಜನೆ, 108 ಆಂಬುಲೆನ್ಸ್ ಸೇವೆ, ದಲಿತರ ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಿಸಿದ್ದಾರೆ ಎಂದರು. ಇಂಥ ಜನವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಮನೆಗಟ್ಟುವ ಕೆಲಸ ಮಾಡುವಂತೆ ಮನವಿ ಮಾಡಿದರು.