Chalavadi Narayanaswamy: ಎಡಪಂಥೀಯರ ವಿಚಾರ ಜನರ ಮೇಲೆ ಹೇರುವ ಕಾಂಗ್ರೆಸ್ ಆಡಳಿತ: ಛಲವಾದಿ ನಾರಾಯಣಸ್ವಾಮಿ
Chalavadi Narayanaswamy: ಸಮೀಕ್ಷೆಗೂ ಜನಗಣತಿಗೂ ವ್ಯತ್ಯಾಸವಿದೆ. ಜನಗಣತಿಯನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ; ಅದೇನಿದ್ದರೂ ಕೇಂದ್ರ ಸರ್ಕಾರ ಮಾಡಬೇಕು. ಈ ಸಮೀಕ್ಷೆ ಹೆಸರಿನಲ್ಲಿ ಇವರು ಜನಗಣತಿ ಮಾಡಲು ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

-

ಬೆಂಗಳೂರು: ಜಾತಿ ಸಮೀಕ್ಷೆಯಂಥ ಐಡಿಯವನ್ನು ಸಿದ್ದರಾಮಯ್ಯ ಅವರಿಗೆ ಯಾರು ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದು ಎಡಪಂಥೀಯರ ಕುತಂತ್ರ ಎಂದು ಕೆಲವರು ನನಗೆ ಹೇಳಿದ್ದಾರೆ; ಎಡಪಂಥೀಯರಿಗೆ ತಲೆ ಜಿಡ್ಡು ಹಿಡಿದಿದೆ. ಕಾಂಗ್ರೆಸ್ಸಿನವರಿಗೆ ತಲೆಯೇ ಇಲ್ಲ; ಅದಕ್ಕಾಗಿ ಎಡಪಂಥೀಯರ ವಿಚಾರಗಳನ್ನು ಪಡೆದು ಇವರು ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ಟೀಕಿಸಿದರು.
ಸಮೀಕ್ಷೆಗೂ ಜನಗಣತಿಗೂ ವ್ಯತ್ಯಾಸವಿದೆ. ಜನಗಣತಿಯನ್ನು ರಾಜ್ಯ ಸರ್ಕಾರ ಮಾಡಲು ಸಾಧ್ಯವಿಲ್ಲ; ಅದೇನಿದ್ದರೂ ಕೇಂದ್ರ ಸರ್ಕಾರ ಮಾಡಬೇಕು. ಈ ಸಮೀಕ್ಷೆ ಹೆಸರಿನಲ್ಲಿ ಇವರು ಜನಗಣತಿ ಮಾಡಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ಸಿನ ಅನೇಕ ಸಚಿವರಿಗೂ ಇದು ಇಚ್ಛೆ ಇಲ್ಲ; ಇದರಿಂದ ಅನೇಕ ಗೊಂದಲವಾಗುತ್ತಿದೆ ಎಂದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | R Ashok: ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ರಾಹುಲ್ ಗಾಂಧಿ- ಆರ್.ಅಶೋಕ್