ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shidlaghatta News: ವಿಶ್ವದ ಮೊದಲ ಎಂಜಿನಿಯರ್ ಸಮುದಾಯ ಎಂದರೆ ವಿಶ್ವಕರ್ಮರಾಗಿದ್ದಾರೆ ಎಂದು ಶಾಸಕ ಬಿ.ಎನ್ ರವಿಕುಮಾರ್

ವಾಸ್ತುಶಿಲ್ಪ, ಶಿಲ್ಪಕಲೆ, ಲೋಹದ ಕೆಲಸ ಮತ್ತು ಮರಗೆಲಸದಂತಹ ಕರಕುಶಲ ಕಲೆಗಳಲ್ಲಿ ಇವರ ನೈಪುಣ್ಯವು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ನಮ್ಮ ದೇವಾಲಯಗಳು, ಸ್ಮಾರಕಗಳು ಮತ್ತು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳ ಹಿಂದಿನ ಸೌಂದರ್ಯ ಮತ್ತು ಶಕ್ತಿ ವಿಶ್ವಕರ್ಮ ಸಮುದಾಯದವರ ಕೈಚಳಕದ ಪರಿಣಾಮವಾಗಿದೆ

ವಿಶ್ವದ ಮೊದಲ ಎಂಜಿನಿಯರ್ ಸಮುದಾಯ ಎಂದರೆ ವಿಶ್ವಕರ್ಮರಾಗಿದ್ದಾರೆ

-

Ashok Nayak Ashok Nayak Sep 19, 2025 12:24 AM

ಶಿಡ್ಲಘಟ್ಟ: ವಿಶ್ವದ ಮೊದಲ ಎಂಜಿನಿಯರ್ ಸಮುದಾಯ ಯಾವುದಾದರೂ ಇದ್ದರೆ ಅದು ವಿಶ್ವಕರ್ಮ ಸಮಾಜ ಎಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.

ತಾಲೂಕು  ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವಕರ್ಮ ದಿನಾಚರಣೆಯಂದು ವಿಶ್ವಕರ್ಮನನ್ನು ಪೂಜಿಸುವುದರಿಂದ ತಮ್ಮ ಕೆಲಸದಲ್ಲಿ ಸಮೃದ್ಧಿ ಮತ್ತು ಯಶಸ್ಸು ದೊರೆಯು ತ್ತದೆ’ ಎಂದು ಹೇಳಿದರು

ವಾಸ್ತುಶಿಲ್ಪ, ಶಿಲ್ಪಕಲೆ, ಲೋಹದ ಕೆಲಸ ಮತ್ತು ಮರಗೆಲಸದಂತಹ ಕರಕುಶಲ ಕಲೆಗಳಲ್ಲಿ ಇವರ ನೈಪುಣ್ಯವು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ನಮ್ಮ ದೇವಾಲಯಗಳು, ಸ್ಮಾರಕಗಳು ಮತ್ತು ದೈನಂದಿನ ಜೀವನದಲ್ಲಿ ಬಳಸುವ ವಸ್ತುಗಳ ಹಿಂದಿನ ಸೌಂದರ್ಯ ಮತ್ತು ಶಕ್ತಿ ವಿಶ್ವಕರ್ಮ ಸಮುದಾಯದವರ ಕೈಚಳಕದ ಪರಿಣಾಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ

ತಹಶೀಲ್ದಾರ್ ಗಗನ ಸಿಂಧು ಮಾತನಾಡಿ, ಪಂಚತತ್ವಗಳನ್ನು ಕಟ್ಟಿಕೊಟ್ಟವರು ವಿಶ್ವಕರ್ಮ ರಾಗಿದ್ದಾರೆ. ಅವರ ಆರಾಧನೆಯಿಂದ ಬದುಕಿಗೆ ಅರ್ಥ ತಂದುಕೊಳ್ಳಬೇಕು’ಎಂದರು.

ವಿಶ್ವಕರ್ಮ ಸಮಾಜದ ಎಸ್ ಎಸ್ ಎಲ್ ಸಿ ,ಪಿಯುಸಿ , ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಕುಲಕಸುಬು ಮಾಡುತ್ತಿರುವ ಐದು ಜನ ಹಿರಿಯರಿಗೆ ಸನ್ಮಾನಿಸಲಾಯಿತು. 

ಸಮುದಾಯದ ವತಿಯಿಂದ ಶಾಸಕ ಬಿ ಎನ್ ರವಿಕುಮಾರ್ ಅವರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಮೇಲೂರು ಮಂಜುನಾಥ್,ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಲಕ್ಷ್ಮಣ್ ರಾಜ್, ಕಾಳಿಕಾಂಭ ಕಮಟೇಶ್ವರ

ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರಿ, ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಚಾರಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಂದರಾಚಾರಿ, ಶ್ರೀನಾಥ್ ಮತ್ತು ವಿಶ್ವಕರ್ಮ ಸಮುದಾಯದ ಹಿರಿಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.