ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಿಗ್ ಬಿಲಿಯನ್ ಡೇ 2025ಗೆ ಮುಂಚಿತವಾಗಿ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ವೀಸಾ ನಿರಾಕರಣೆ ಕವರ್ ಅನ್ನು ಘೋಷಿಸಿದ ಕ್ಲಿಯರ್‌ಟ್ರಿಪ್

ಕ್ಲಿಯರ್‌ಟ್ರಿಪ್ ಬಿಗ್ ಬಿಲಿಯನ್ ಡೇಯನ್ನು ಹಲವಾರು ಭಾರಿ ಆಫರ್‌ ಗಳೊಂದಿಗೆ ಆಚರಿಸುತ್ತಿದೆ. ಫ್ಲಾಶ್ ಸೇಲ್‌ ಗಳ ಸಮಯದಲ್ಲಿ, ದೇಶೀಯ ವಿಮಾನಗಳ ಟಿಕೆಟ್ ಗಳು ಕೇವಲ ₹999* ರಿಂದ ಪ್ರಾರಂಭವಾಗು ತ್ತವೆ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ 20% ರಿಯಾಯಿತಿ* ಲಭ್ಯವಿದೆ. ಜೊತೆಗೆ, ಕ್ಲಿಯರ್‌ಟ್ರಿಪ್ ತನ್ನ ಹೋಟೆಲ್ ವಿಭಾಗವನ್ನು 20,000ರಿಂದ 80,000+ ಹೋಟೆಲ್ ಗಳಿಗೆ ಗಣನೀಯವಾಗಿ ವಿಸ್ತರಿಸಿದೆ.

ಮೊದಲ ಬಾರಿಗೆ ವೀಸಾ ನಿರಾಕರಣೆ ಕವರ್ ಅನ್ನು ಘೋಷಿಸಿದ ಕ್ಲಿಯರ್‌ಟ್ರಿಪ್

-

Ashok Nayak Ashok Nayak Sep 18, 2025 11:41 PM

ಬೆಂಗಳೂರು: ಫ್ಲಿಪ್‌ಕಾರ್ಟ್ ಅಧೀನದ ಕಂಪನಿಯಾದ ಕ್ಲಿಯರ್‌ಟ್ರಿಪ್ ಬಹುನೀರಿಕ್ಷಿತ ದಿ ಬಿಗ್ ಬಿಲಿಯನ್ ಡೇ (ಬಿಬಿಡಿ) 2025ಕ್ಕೂ ಮುಂಚಿತವಾಗಿ ತನ್ನ ಹೊಸ ವೀಸಾ ನಿರಾಕರಣೆ ಕವರ್ (ವೀಸಾ ಡಿನಯಲ್ ಕವರ್) ಆಫರ್ ಅನ್ನು ಘೋಷಿಸಿದೆ.

ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿರುವ ಈ ಆಫರ್ ಶೂನ್ಯ ವೆಚ್ಚದಲ್ಲಿ ಲಭ್ಯ ವಿದ್ದು, ಈ ವೀಸ್ ಡಿನಯಲ್ ಕವರ್ ಅಂತಾರಾಷ್ಟ್ರೀಯ ಪ್ರಯಾಣ ಮಾಡುವಾಗಿನ ಅತಿದೊಡ್ಡ ಆತಂಕವಾದ ವೀಸಾ ನಿರಾಕರಣೆ ಸಮಸ್ಯೆಯನ್ನು ನಿವಾರಣೆ ಮಾಡಲಿದೆ.

ಗ್ರಾಹಕರು ಯಾವಾಗಲೂ ಅಂತಾರಾಷ್ಟ್ರೀಯ ವಿಮಾನಗಳನ್ನು ಬುಕ್ ಮಾಡುವಾಗ ‘ನನ್ನ ವೀಸಾ ನಿರಾಕರಣೆಯಾದರೆ ಏನು ಮಾಡುವುದು?’ ಎಂಬ ಆತಂಕವನ್ನು ಅನುಭವಿಸುತ್ತಿರುತ್ತಾರೆ. ಈ ವೀಸಾ ನಿರಾಕರಣೆ ಕವರ್ ಅನ್ನು ಈ ಆತಂಕವನ್ನು ದೂರ ಮಾಡಲು ವಿನ್ಯಾಸಗೊಳಿಸಲಾಗಿದ್ದು, ಇದೀಗ ಗ್ರಾಹಕರು ತಮ್ಮ ವೀಸಾ ನಿರಾಕರಣೆಯಾದರೆ ಟಿಕೆಟ್‌ ನ ಪೂರ್ಣ ಮರುಪಾವತಿಯನ್ನು ಪಡೆಯಬಹುದು ಎಂಬ ಭರವಸೆ ನೀಡಲಾಗುತ್ತದೆ ಮತ್ತು ಆತಂಕವಿಲ್ಲದೆ ಟಿಕೆಟ್ ಬುಕ್ ಮಾಡಲು ಅನುವು ಮಾಡಿಕೊಡಲಾಗುತ್ತದೆ.

ಈ ಕುರಿತು ಮಾತನಾಡಿರುವ ಕ್ಲಿಯರ್‌ಟ್ರಿಪ್‌ನ ಚೀಫ್ ಬಿಸಿನೆಸ್ ಆಂಡ್ ಗ್ರೋತ್ ಆಫೀಸರ್ ಮಂಜರಿ ಸಿಂಘಾಲ್ ಅವರು, “ವೀಸಾ ನಿರಾಕರಣೆ ಕವರ್‌ ಮೂಲಕ ನಾವು ಅಂತಾರಾಷ್ಟ್ರೀಯ ಪ್ರಯಾಣ ವನ್ನು ಬುಕ್ ಮಾಡುವಾಗ ಎದುರಾಗುವ ಅತಿದೊಡ್ಡ ಆತಂಕವನ್ನು ಪರಿಹರಿಸುತ್ತಿದ್ದೇವೆ. ಈ ಹೊಸ ವೈಶಿಷ್ಟ್ಯವು ಕೇವಲ ಮರುಪಾವತಿಯ ಬಗ್ಗೆ ಮಾತ್ರವೇ ಅಲ್ಲ; ಇದು ನಮ್ಮ ಗ್ರಾಹಕರಿಗೆ ಮಾನಸಿಕ ಶಾಂತಿಯನ್ನು ನೀಡಲಿದೆ. ಪ್ರಯಾಣ ಪ್ಲಾನ್ ಮಾಡುವಾಗ ಉಂಟಾಗಬಹುದಾದ ಆತಂಕವನ್ನು ನಿವಾರಿಸಿ ರೋಮಾಂಚಕವಾಗಿರುವಂತೆ ನೋಡಿಕೊಳ್ಳುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Mysuru Dasara: ಮೈಸೂರು ದಸರಾ ಉದ್ಘಾಟನೆ: ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದ ಅರ್ಜಿಗಳ ವಜಾ

ವೀಸಾ ನಿರಾಕರಣೆ ಕವರ್‌ನ ವಿಶೇಷತೆಗಳು:

● ಬೆಲೆ: ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಬುಕಿಂಗ್‌ ಗಳ ಮೇಲೆ ಉಚಿತ

● ಅರ್ಹ ವೀಸಾ ಪ್ರಕಾರಗಳು: ಕೇವಲ ಪ್ರವಾಸಿ ವೀಸಾಗಳಿಗೆ ಮಾತ್ರ ಅನ್ವಯ

● ಅರ್ಹ ರಾಷ್ಟ್ರೀಯತೆ: ಕೇವಲ ಭಾರತೀಯ ರಾಷ್ಟ್ರೀಯರಿಗೆ ಮಾತ್ರ ಲಭ್ಯ

● ವಯಸ್ಸಿನ ಮಾನದಂಡ: ಯಾವುದೇ ವಯಸ್ಸಿನ ನಿರ್ಬಂಧವಿಲ್ಲ; ಎಲ್ಲಾ ಪ್ರಯಾಣಿಕರಿಗೆ ಲಭ್ಯವಿರುತ್ತದೆ

● ಫೇರ್ ವಿಧ: ವಿಮಾನ ದರಗಳಲ್ಲಿ ಸಂಪೂರ್ಣ ಮತ್ತು ಭಾಗಶಃ ಮರುಪಾವತಿ

● ಕವರೇಜ್ ವ್ಯಾಪ್ತಿ: ಭಾರತದಿಂದ ಆರಂಭವಾಗುವ ಅಂತಾರಾಷ್ಟ್ರೀಯ ಪ್ರಯಾಣ

● ರದ್ದತಿ ವ್ಯವಸ್ಥೆ: ಪ್ರಯಾಣಕ್ಕೆ ಕನಿಷ್ಠ 24 ಗಂಟೆಗಳ ಮೊದಲು ರದ್ದತಿ ಮಾಡಬೇಕು

ಈ ಗಮನಾರ್ಹ ಕವರ್ ಜೊತೆಗೆ, ಕ್ಲಿಯರ್‌ಟ್ರಿಪ್ ಬಿಗ್ ಬಿಲಿಯನ್ ಡೇಯನ್ನು ಹಲವಾರು ಭಾರಿ ಆಫರ್‌ ಗಳೊಂದಿಗೆ ಆಚರಿಸುತ್ತಿದೆ. ಫ್ಲಾಶ್ ಸೇಲ್‌ ಗಳ ಸಮಯದಲ್ಲಿ, ದೇಶೀಯ ವಿಮಾನಗಳ ಟಿಕೆಟ್ ಗಳು ಕೇವಲ ₹999* ರಿಂದ ಪ್ರಾರಂಭವಾಗುತ್ತವೆ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ 20% ರಿಯಾಯಿತಿ* ಲಭ್ಯವಿದೆ. ಜೊತೆಗೆ, ಕ್ಲಿಯರ್‌ಟ್ರಿಪ್ ತನ್ನ ಹೋಟೆಲ್ ವಿಭಾಗವನ್ನು 20,000ರಿಂದ 80,000+ ಹೋಟೆಲ್ ಗಳಿಗೆ ಗಣನೀಯವಾಗಿ ವಿಸ್ತರಿಸಿದೆ. ಇದರಲ್ಲಿ 2-ಸ್ಟಾರ್‌ನಿಂದ ಹಿಡಿದು 5-ಸ್ಟಾರ್ ವರ್ಗದವರೆಗಿನ ಹೋಟೆಲ್‌ಗಳಿವೆ. ಈ ವೈವಿಧ್ಯಮಯ ಆಯ್ಕೆಯು ಫ್ಯಾಮಿಲಿ ಹಾಲಿಡೇ, ವೆಲ್‌ನೆಸ್ ರಿಟ್ರೀಟ್‌ ಗಳು, ಬಜೆಟ್ ಫ್ರೆಂಡ್ಲಿ ಸ್ಟೇ ಮತ್ತು ಪ್ರೀಮಿಯಂ ಐಷಾರಾಮಿ ಪ್ರವಾಸ ಹೀಗೆ ಎಲ್ಲಾ ಪ್ರವಾಸಕ್ಕೂ ಬೇಕಾಗುವ ಅಗತ್ಯಗಳನ್ನು ಪೂರೈಸುತ್ತದೆ.

ಇದರ ಜೊತೆಗೆ, ಈ ಉತ್ಸವದ ಋತುವಿನಲ್ಲಿ ಮೂರು ಅಥವಾ ಹೆಚ್ಚು ಪ್ರಯಾಣಿಕರ ಬುಕಿಂಗ್‌ ಗಳಿಗೆ, ಕನಿಷ್ಠ ಒಬ್ಬ ಮಗು ಅಥವಾ ಶಿಶುವಿಗೆ ಚೈಲ್ಡ್ ಫ್ಲೈಸ್ ಫ್ರೀ ಆಫರ್ ಮರಳಿ ಪರಿಚಯಿಸ ಲಾಗಿದ್ದು, ಕುಟುಂಬಗಳಿಗೆ ದೇಶೀಯ ಪ್ರಯಾಣದಲ್ಲಿ ಹೆಚ್ಚಿನ ಉಳಿತಾಯವನ್ನು ಮಾಡಲು ಅನುವು ಮಾಡಿಕೊಡುತ್ತದೆ.