ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‍ಐಆರ್ ಫಾರ್ಮ್‌ 7 ವಿಚಾರದಲ್ಲಿ ಎಫ್‍ಐಆರ್ ದಾಖಲಿಸಿದರೆ ಹೋರಾಟ: ಬಿ.ವೈ. ವಿಜಯೇಂದ್ರ

BY Vijayendra: ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ದಾಖಲಿಸದಂತೆ ನಾವು ಡಿಜಿಪಿ ಅವರಿಗೆ ಒತ್ತಾಯ ಮಾಡಿದ್ದೇವೆ. ಹೀಗೆ ಕೇಸು ದಾಖಲಿಸಿದರೆ, ನಾವು ಕೈಕಟ್ಕೊಂಡು ಕೂರುವ ಪ್ರಶ್ನೆನೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರು, ಅ.03: ಎಸ್‍ಐಆರ್ ಫಾರಂ ಸಂಖ್ಯೆ 7ರ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಿದರೆ ನಾವು ಕೈಕಟ್ಟಿ ಕುಳಿತಿರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಎಚ್ಚರಿಸಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಶನಿವಾರ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹೀಗೆ ಎಫ್‍ಐಆರ್ ದಾಖಲಿಸಲು ಖಂಡಿತ ಕಾನೂನಿನಲ್ಲಿ ಅವಕಾಶ ಇಲ್ಲ. ಈ ರೀತಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್. ದಾಖಲಿಸದಂತೆ ನಾವು ಡಿಜಿಪಿ ಅವರಿಗೆ ಒತ್ತಾಯ ಮಾಡಿದ್ದೇವೆ. ಹೀಗೆ ಕೇಸು ದಾಖಲಿಸಿದರೆ, ನಾವು ಭಾರತೀಯ ಜನತಾ ಪಾರ್ಟಿ ಕೈಕಟ್ಕೊಂಡು ಕೂರುವ ಪ್ರಶ್ನೆನೇ ಇಲ್ಲ ಎಂದು ತಿಳಿಸಿದರು.

ಈ ವಿಷಯದಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ರಾಜಕೀಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದ್ದರೆ ಅದಕ್ಕೂ ನಾವು ತಯಾರಿದ್ದೇವೆ. ಇದೇ ರೀತಿ ಎಫ್.ಐ.ಆರ್. ದಾಖಲು ಮಾಡುವುದನ್ನು ಮುಂದುವರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಕೆಲಸವನ್ನೂ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಯಾವ ಹಂತಕ್ಕೂ ಕೂಡ ನಾವು ಹೋಗುವುದಕ್ಕೆ ತಯಾರಿದ್ದೇವೆ ಅನ್ನುವ ಸ್ಪಷ್ಟ ಸಂದೇಶವನ್ನು ಪೊಲೀಸ್ ಮಹಾನನಿರ್ದೇಶಕರಿಗೆ ನಾವು ನೀಡಿದ್ದೇವೆ. ಪೊಲೀಸ್ ಇಲಾಖೆ ಇವತ್ತು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಇವತ್ತು ಅವರು ಕೂಡ ಕಾನೂನು ಉಲ್ಲಂಘನೆ ಮಾಡುವ ಕೆಲಸ ನಿರ್ಮಾಣ ಆಗಿದೆ. ಹಾಗಾಗಿ ಇದಕ್ಕೆ ಅವಕಾಶವನ್ನು ಕೊಡಬಾರದು. ತಕ್ಷಣ ಏನು ಎಫ್.ಐ.ಆರ್. ಮಾಡುವುದನ್ನು ನಿಲ್ಲಿಸಬೇಕು. ಆ ನಿರ್ದೇಶನ ನೀಡಬೇಕು ಅಂತ ಹೇಳಿ ನಾವು ಪೊಲೀಸ್ ಮಹಾನಿರ್ದೇಶಕರಲ್ಲಿ ನಾವು ಒತ್ತಾಯವನ್ನು ಮಾಡಿದ್ದೇವೆ ಎಂದು ವಿವರಿಸಿದರು.

ಎಸ್.ಐ.ಆರ್. ಫಾರಂ 7 ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಆಯೋಗದ ಮುಂದೆ ಹೋಗಿ ಧರಣಿ ಮಾಡಿದ್ದರು. ತದನಂತರದಲ್ಲಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆಯು ಕೂಡ ಫಾರಂ 7 ಯಾರು ಅರ್ಜಿದಾರರಿದ್ದಾರೋ, ಅದರಲ್ಲೂ ವಿಶೇಷವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಮೇಲೆ ಬಿ.ಎನ್.ಎಸ್ ಕಾಯ್ದೆ ಪ್ರಕಾರ ಎಫ್.ಐ.ಆರ್. ದಾಖಲು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಡಿಜಿಪಿಯವರಿಗೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಫಾರಂ 7 ಎಂಬುದು ಚುನಾವಣಾ ಆಯೋಗ ನಮಗೆ ಕೊಟ್ಟಿರತಕ್ಕಂತ ಹಕ್ಕು. ಇದು ಕೇವಲ ಭಾರತೀಯ ಜನತಾ ಪಾರ್ಟಿಗೆ ಅಲ್ಲ. ಎಲ್ಲಾ ರಾಜಕೀಯ ಪಕ್ಷಗಳಿಗೂ ಕೂಡ ಫಾರಂ 7 ಮೂಲಕ ಯಾರು ಅನಧಿಕೃತವಾಗಿ ಅಥವಾ ಕಾನೂನುಬಾಹಿರವಾಗಿ ಮತದಾರರ ಪಟ್ಟಿಯಲ್ಲಿ ಹೆಸರಿದೆಯೋ ಅವರನ್ನು ಕೈಬಿಡತಕ್ಕಂತಹ ಪ್ರಕ್ರಿಯೆಯೇ ಫಾರಂ 7. ಆ ಫಾರಂ 7 ನಲ್ಲಿ ನಾವು ಕೊಟ್ಟಿರತಕ್ಕಂತದ್ದು ಸರಿ ಇದ್ದರೆ ರಿಟರ್ನಿಂಗ್ ಆಫೀಸರ್ ಅದನ್ನು ಒಪ್ಪುತ್ತಾರೆ. ತಪ್ಪಿದ್ದರೆ ಅದನ್ನ ತಿರಸ್ಕರಿಸುತ್ತಾರೆ. ಅದರಲ್ಲಿ ಸರಿ ಇಲ್ಲ ಅಂತ ಇದ್ದರೆ ಚುನಾವಣಾ ಆಯೋಗ ಜನಪ್ರತಿನಿಧಿ ಕಾಯ್ದೆ ಪ್ರಕಾರ ಕ್ರಮವನ್ನ ಕೈಗೊಳ್ಳಬಹುದೇ ವಿನಃ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಇಲಾಖೆ ಬಿ.ಎನ್.ಎಸ್ ಆಕ್ಟ್ ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಎಫ್.ಐ.ಆರ್.ಗಳನ್ನು ದಾಖಲಿಸಿದ್ದು ಸರಿಯಲ್ಲ ಎಂದು ಟೀಕಿಸಿದರು.

ಇವರು ಇವತ್ತು ಗೂಂಡಾಗರ್ದಿಗೆ ಇಳಿಯಲು ಹೊರಟಂತೆ ಕಾಣುತ್ತಿದೆ. ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂಬುದನ್ನು ರಾಜ್ಯದ ಜನತೆಗೆ ಮತ್ತೊಮ್ಮೆ ನೆನಪು ಮಾಡಿಕೊಡೋದಕ್ಕೆ ಡಿ.ಕೆ. ಶಿವಕುಮಾರ್ ಹೊರಟಂತಿದೆ ಎಂದು ಆಕ್ಷೇಪಿಸಿದರು. ಈ ರೀತಿ ದಾದಾಗಿರಿ, ಗೂಂಡಾಗಿರಿ, ಎಸ್‍ಐಟಿ- ಇದ್ಯಾವುದಕ್ಕೂ ಹೆದರಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಹೇಳಿದರು.‌

ರಾಹುಲ್ ಗಾಂಧಿ ಸಂಪ್ರೀತಗೊಳಿಸಲು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಧರಣಿ ಪ್ರಹಸನ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ವಾಗ್ದಾಳಿ

ಕಾನೂನಾತ್ಮಕವಾಗಿ ಇರುವ ಕ್ರಮ ತೆಗೆದುಕೊಳ್ಳಿ. ಅಧಿಕಾರ ನಿಮ್ಮಪ್ಪನ ಮನೆ ಆಸ್ತಿ ಅಲ್ಲ. ಈ ರೀತಿ ಎಫ್‍ಐಆರ್ ದಾಖಲು ಮಾಡಿ ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಗುಂಡಾಗಿರಿ ಮಾಡಲು ಬಂದಲ್ಲಿ ನಮಗೂ ಕೂಡ ಬೀದಿಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು, ಬೀದಿಗಳಲ್ಲಿ ಯಾವ ರೀತಿ ನಿಮಗೆ ಎಚ್ಚರಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದನ್ನು ಮಾಡಿ ತೋರಿಸುತ್ತೇವೆ ಎಂದುಶಾಸಕ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದರು.