ಶಿಕಾರಿಪುರ, ಫೆ.27: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರಿಗೆ ನಾಡಿನ ಗಣ್ಯರೆಲ್ಲಾ ಸೇರಿ ಮೇ ತಿಂಗಳಲ್ಲಿ ಅಭಿನಂದನಾ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ (Govind Karjol) ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಶುಕ್ರವಾರ ಮಾತನಾಡಿದ್ದಾರೆ.
ಇಂದು ಯಡಿಯೂರಪ್ಪ ಅವರ ಜನ್ಮದಿನ. ಡಿಸಿಎಂ ಆಗಿ, ಮುಖ್ಯಮಂತ್ರಿ ಆಗಿ 50 ವರ್ಷ ರಾಜಕೀಯದಲ್ಲಿ ತೊಡಗಿಸಿಕೊಂಡು ನಾಡನ್ನು ಕಟ್ಟಿ ಬೆಳೆಸಿದವರು. ರೈತರ ಬಗ್ಗೆ ಅಪಾರ ಪ್ರೀತಿ. ಹೆಣ್ಣು ಮಕ್ಕಳು ಓದಲು ಪ್ರೋತ್ಸಾಹ ನೀಡಿದವರು. ಹೆಣ್ಣು ಮಕ್ಕಳಿಗಾಗಿ ವಸತಿ ಶಾಲೆ ಮಾಡಿದವರು ಯಡಿಯೂರಪ್ಪನವರು. ಹೆಣ್ಣು ಮಕ್ಕಳು ಕುಟುಂಬಕ್ಕೆ ಭಾರ ಆಗಬಾರದು ಎಂಬ ಕಾರಣಕ್ಕೆ ಭಾಗ್ಯಲಕ್ಷ್ಮಿ ಬಾಂಡ್ ಕೊಟ್ಟವರು. ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸೇರಿದಂತೆ ಅನೇಕ ಕಾರ್ಯಕ್ರಮ ಮಾಡಿದವರು. ಅವರಿಗೆ 84 ವರ್ಷ ಇಂದು. 100 ವರ್ಷಗಳ ಕಾಲ ಅವರು ಬಾಳಲಿ ಎಂದು ನಾನು ಆ ಭಗವಂತನ ಹತ್ತಿರ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.
ಅವರು 50 ವರ್ಷ ರಾಜಕಾರಣದಲ್ಲಿ ತೊಡಗಿಸಿಕೊಂಡು ಕೆಲಸ ಮಾಡಿದವರು ಎಂದ ಅವರು, ಪ್ರಭಾಕರ್ ಕೋರೆ ಅವರು ಅಧ್ಯಕ್ಷರು, ನಾನು ಹಾಗೂ ಬಿ. ಶ್ರೀರಾಮುಲು ಜತೆಗಿದ್ದು ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ರೂಪುರೇಷೆ ಮುಂದೆ ಹೇಳುತ್ತೇವೆ. ಮೇ ತಿಂಗಳಲ್ಲಿ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ನಾಡಿನ 30 ಜಿಲ್ಲೆಗಳಿಂದ ಬರುವ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಇಂಥ ಕೆಟ್ಟ ಆಡಳಿತ ನೋಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ದೇವೇಗೌಡ ಕಿಡಿ
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಭಿಕ್ಷೆ ಬೇಡಬಾರದು. ನನಗೆ ಕೊಡಿ, ನನಗೆ ಕೊಡಿ ಎಂದು ಕೇಳಬಾರದು. ಇದೊಂದು ಅವಮಾನದ ಸಂಗತಿ. ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಆಗಬೇಕು. ಭೀಮೆಯಿಂದ ಕೋಲಾರದವರೆಗೂ, ಚಾಮರಾಜನಗರದಿಂದ ಔರಾದ್ ತನಕ ಮುಖ್ಯಮಂತ್ರಿ ಆಗಬೇಕು. ಮೂರು ಗುಂಪಾಗಿ ಒಡೆದು ಹೋಗಿ ದಲಿತರಿಗೆ ಕೊಡಿ ಅಂತಾರೆ. ಡಿ.ಕೆ. ಶಿವಕುಮಾರ್ ನಮಗೆ ಕೊಡಿ ಅಂತಾರೆ. ಎಚ್.ಸಿ. ಮಹದೇವಪ್ಪ ನಮಗೆ ಕೊಡಿ ಅಂತಾರೆ. ಇನ್ನೊಂದು ಕಡೆ ಕೆ.ಎಚ್. ಮುನಿಯಪ್ಪ ನಮಗೆ ಅಂತಾರೆ. ಮತ್ತೊಂದೆಡೆ ಜಾರಕಿಹೊಳಿ ನಮಗೆ ಅಂತಾರೆ. ಕೆಟ್ಟ ಪರಿಸ್ಥಿತಿ ರಾಜ್ಯದಲ್ಲಿ ಇದೆ. ದಲಿತರಿಗೆ 25 ವರ್ಷಗಳಿಂದ ಒಳ ಮೀಸಲಾತಿ ಕೊಡುತ್ತೇವೆ ಎಂದು ತಿಳಿಸಿ, ಈಗ ಕೊಡಲು ಆಗುವುದಿಲ್ಲ ಅನ್ನುತ್ತಾರೆ. ಇದು ಕೆಟ್ಟ ಸರ್ಕಾರ. ಈ ಸರ್ಕಾರ ಇರಬಾರದು ಎಂದು ಜನ ಆಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಯಡಿಯೂರಪ್ಪ ಅವರು 50 ವರ್ಷ ಸಮಾಜ ಸೇವೆ, ರಾಜಕೀಯ ಸೇವೆ ಮಾಡಿದ್ದಾರೆ. ಅವರಿಗೆ ಸನ್ಮಾನ ಮಾಡಬೇಕು ಎಂದು ಗೋವಿಂದ ಕಾರಜೋಳ ತಿಳಿಸಿದರು. ಅವರು ತೀರ್ಮಾನ ಮಾಡಿದ ನಂತರ ನಮ್ಮ ಹತ್ತಿರ ಚರ್ಚೆ ಮಾಡಿದರು. ನಿಮ್ಮ ತೀರ್ಮಾನ ಸರಿಯಾಗಿದೆ ಎಂದು ತಿಳಿಸಿದೆವು. ಇಂದಿನ ಅಭಿನಂದನಾ ಸಮಾರಂಭದ ಅಧ್ಯಕ್ಷ ಪ್ರಭಾಕರ್ ಕೋರೆ, ಗೌರವಾಧ್ಯಕ್ಷರು ಗೋವಿಂದ ಕಾರಜೋಳ ಹಾಗೂ ನಾನು ಕಾರ್ಯಾಧ್ಯಕ್ಷ ಆಗಿದ್ದೇನೆ ಎಂದು ಹೇಳಿದರು.
ಇಂದು ಯಡಿಯೂರಪ್ಪನವರ 84ನೇ ಹುಟ್ಟುಹಬ್ಬ. ಹೀಗಾಗಿ, ಇಂದು ಅದನ್ನು ಘೋಷಿಸಲಾಗಿದೆ. ಮೇ ತಿಂಗಳಲ್ಲಿ ಅಭಿನಂದನಾ ಕಾರ್ಯಕ್ರಮ ಮಾಡುತ್ತೇವೆ. ಮುಂದೆ ಯಾರೆಲ್ಲ ರಾಷ್ಟ್ರೀಯ ನಾಯಕರನ್ನು ಕರೆಸಬೇಕು? ಎಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ: ಛಲವಾದಿ ನಾರಾಯಣಸ್ವಾಮಿ
ಪ್ರಮುಖರಾದ ಮಹಾಂತೇಶ್ ಕವಟಗಿಮಠ ಮಾತನಾಡಿ, 50 ವರ್ಷಗಳ ರಾಜಕೀಯ ಪಯಣದ ಕಾರ್ಯಕ್ರಮ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಯಡಿಯೂರಪ್ಪ ಅವರು ಒಬ್ಬ ಧೀಮಂತ ನಾಯಕ. 4 ಬಾರಿ ಮುಖ್ಯಮಂತ್ರಿ ಆಗಿ ರಾಜ್ಯವನ್ನು ಮುನ್ನಡೆಸಿದವರು. ಅವರು ಮಾಡಿದ ಕೆಲಸವನ್ನು ರಾಜ್ಯಕ್ಕೆ ಪರಿಚಯ ಮಾಡಬೇಕು ಎಂಬ ನಿಟ್ಟಿನಲ್ಲಿ ಇಂದು ಸಭೆ ನಡೆಸಲಾಗಿದೆ. ಪದ್ಮಶ್ರೀ ಪ್ರಭಾಕರ್ ಕೋರೆ ಅವರನ್ನು ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಶ್ರೀರಾಮುಲು ಅವರನ್ನು ಕಾರ್ಯಾಧ್ಯಕ್ಷ ಮಾಡಲಾಗಿದೆ. ಅಭಿನಂದನಾ ಸಮಾರಂಭದಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಜನರು ಆಗಮಿಸಲಿದ್ದಾರೆ. ಪಂಚ ಪೀಠಾಧಿಪತಿಗಳು ಭಾಗವಹಿಸಲಿದ್ದು, ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.