ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಚಿತ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭಕ್ಕೆ ಡಿ.ಕೆ. ಶಿವಕುಮಾರ್‌ ಸೂಚನೆ

ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಏಕೆಂದರೆ ಕಳೆದ 50 ವರ್ಷಗಳಿಂದಲೂ ಇದು ಮುನ್ನೆಲೆಗೆ ಬಂದಿರಲಿಲ್ಲ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ – ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಫೆ.9: ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್, ಖಾತೆ ಪರಿವರ್ತನೆ ಮಾಡಿಸಿಕೊಂಡವರಿಗೆ ಸೋಮವಾರ ಖಾತಾ ಪತ್ರ ವಿತರಣೆ ಮಾಡಿ ಮಾಧ್ಯಮಗಳ ಜತೆ ಮಾತನಾಡಿದರು.

ಆಸ್ತಿ ದಾಖಲೆಗಳ ಡಿಜಿಟಲೀಕರಣ ಈ ವರ್ಷದ ಪ್ರಮುಖ ತೀರ್ಮಾನ. ಏಕೆಂದರೆ ಕಳೆದ 50 ವರ್ಷಗಳಿಂದಲೂ ಇದು ಮುನ್ನೆಲೆಗೆ ಬಂದಿರಲಿಲ್ಲ. ಈ ಹಿಂದೆ ಕೃಷಿ ಭೂಮಿ ಡಿಜಿಟಲೀಕರಣಕ್ಕೆ ಭೂಮಿ ಯೋಜನೆ ತರಲಾಗಿತ್ತು. ನಮ್ಮ ಬೆಂಗಳೂರಿನ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಇ – ಖಾತೆ ವ್ಯವಸ್ಥೆ ತರಬೇಕು ಎಂದು ಹೊರಟಿದ್ದೇವೆ. ಈ ಮೂಲಕ ತೆರಿಗೆ ಸೋರಿಕೆ ತಡೆಯಬೇಕು ಎಂಬುದು ನಮ್ಮ ಉದ್ದೇಶ. ಸಬ್‌ ರಿಜಿಸ್ಟಾರ್‌ ಕಚೇರಿಗಳಲ್ಲಿ ಕಾವೇರಿ ಸಾಫ್ಟ್‌ ವೇರ್‌ ತಂದು ಇದನ್ನು ಪರಶೀಲನೆ ಮಾಡಲು ಅವಕಾಶ ನೀಡಿದ್ದೇವೆ. ಇದರ ಜತೆಗೆ ಪ್ರತಿಯೊಂದು ದಾಖಲೆಗಳು ಆಧಾರ್‌ ಜತೆ ಲಿಂಕ್‌ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಯಾರು ಸಹ ಒಂದೇ ಒಂದು ರೂಪಾಯಿ ಲಂಚ ನೀಡದೆ ಇ ಖಾತೆ ಪಡೆಯಬಹುದು. ಮನೆ ಬಾಗಿಲಿಗೆ ಖಾತೆ ತಲುಪಿಸಬೇಕು ಎಂದು ತಿಳಿಸಿದ್ದೇನೆ. ನನಗೆ ನನ್ನ ಜೀವನದಲ್ಲಿ ಸಮಾಧಾನ ನೀಡಿದ ದೊಡ್ಡ ತೀರ್ಮಾನ. ಎಷ್ಟೋ ಜನಕ್ಕೆ ಅವರ ಆಸ್ತಿಗಳು ಯಾರ ಹೆಸರಿನಲ್ಲಿ ಇದೆ ಎಂದು ಗೊತ್ತಿರಲಿಲ್ಲ. ಈ ಕೆಲಸ ನೋಡಿ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿದೆ ಎಂದು ಹೇಳಿದರು.‌

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಮ್ಮ ಸರ್ಕಾರವೇ ಎಂದ ಡಿ.ಕೆ. ಶಿವಕುಮಾರ್‌

15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ

ಯೂನಿಫಾರ್ಮ್‌ ಲ್ಯಾಂಡ್‌ ರೆಕಾರ್ಡ್‌ ಮ್ಯಾನೇಜ್‌ ಮೆಂಟ್‌ ಸಿಸ್ಟಮ್‌ ಮೂಲಕ ಬಿ ಖಾತೆ ಮೂಲಕ ಎ ಖಾತೆ ನೀಡುವ ಯೋಜನೆ ಇದಾಗಿದೆ. ಈಗಾಗಲೇ 7 ಸಾವಿರ ಅರ್ಜಿಗಳು ಇದಕ್ಕೆ ಬಂದಿವೆ. ಇದಕ್ಕೆ ಇನ್ನೂ ಲಕ್ಷಗಟ್ಟಲೆ ಅರ್ಜಿಗಳು ಬರಬೇಕಿದೆ. ಈಗಾಗಲೇ ಅರ್ಜಿ ಹಾಕಿರುವವರಿಗೆ 15 ದಿನದಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಮಾಡಲು ಸಮಯ ನಿಗದಿ ಮಾಡಿದ್ದೇವೆ. ಅಧಿಕಾರಿಗಳು ಖಾತೆ ನೀಡುವಾಗ ಸ್ಥಳ ಪರಿಶೀಲನೆ ಮಾಡಲಿದ್ದಾರೆ ಎಂದರು.

ಇನ್ನೂ ಅನೇಕರು ಸೇಲ್‌ ಡೀಡ್‌ ಇಟ್ಟುಕೊಂಡು ಖಾತೆಯನ್ನೇ ಹೊಂದಿಲ್ಲ. 1.20 ಲಕ್ಷ ಜನ ಈ ಬಗ್ಗೆ ಅರ್ಜಿ ನೀಡಿದ್ದಾರೆ. 60 ಸಾವಿರ ಜನರ ಅರ್ಜಿ ಒಪ್ಪಿತವಾಗಿದೆ. 40 ಸಾವಿರ ಅರ್ಜಿ ರದ್ದಾಗಿದೆ. 15 ಸಾವಿರ ಅರ್ಜಿಗಳು ವಿವಿಧ ಹಂತದಲ್ಲಿವೆ. ಅರ್ಜಿಗಳು ಏಕೆ ತಿರಸ್ಕೃತವಾಗಿವೆ ಎಂದು ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ನಂಬಿಕೆ ನಕ್ಷೆ ಯೋಜನೆ; 12 ಸಾವಿರ ನಕ್ಷೆ ಹಂಚಿಕೆ

ನಂಬಿಕೆ ನಕ್ಷೆ ಯೋಜನೆಯಡಿ 12 ಸಾವಿರ ನಕ್ಷೆಗಳನ್ನು ನೀಡಲಾಗಿದೆ. ಇದರಿಂದ ಭ್ರಷ್ಟಾಚಾರ ನಿಂತಿದೆ. ಕೆಲಸದ ವೇಗ ಹೆಚ್ಚಿದೆ. ನಾಗರಿಕ ಸ್ನೇಹಿ ವಾತಾವರಣ ಉಂಟಾಗಿದೆ. ಓಟಿಎಸ್‌ ಯೋಜನೆಯ ಅಡಿ ದಂಡ ಹಾಗೂ ಬಡ್ಡಿಯನ್ನು ರದ್ದು ಮಾಡಲಾಯಿತು. ಇದರಿಂದ 2 ಲಕ್ಷ ಜನರಿಗೆ ಅನುಕೂಲವಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ 1,200 ಕೋಟಿ ಹಣ ಸಂಗ್ರಹವಾಗಿದೆ. ಟಿಡಿಆರ್‌ ಅಡಿ ಬೆಂಗಳೂರು ಬಿಜಿನೆಸ್‌ ಕಾರಿಡಾರ್‌ ಯೋಜನೆಗೆ ಎಂದು ಭೂಮಿ ಕಳೆದುಕೊಂಡವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ನಾವು ಜಾರಿಗೆ ತಂದಿದ್ದ ಪ್ರಿಮೀಯಂ ಎಫ್‌ಎಆರ್‌ ಅನ್ನು ರಾಜ್ಯಪಾಲರು ತಡೆ ನೀಡಿದರು. ಬಿಜೆಪಿ ಸಮಯದಲ್ಲಿ ತಂದಿದ್ದ ಕಾನೂನನ್ನೇ ನಾನು ಜಾರಿಗೆ ತಂದಿದ್ದೇವೆ. ಒಂದಷ್ಟು ಜನ ಇದರ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈಗ ಅಲ್ಲಿಂದಲೂ ವಾಪಸ್‌ ಕಳುಹಿಸಿದ್ದಾರೆ. ಒಂದಷ್ಟು ಜನ ಪ್ರಿಮೀಯಂ ಎಫ್‌ಎಆರ್‌ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ 1 ಸಾವಿರ ಕೋಟಿ ಬರುವ ನಿರೀಕ್ಷೆಯಿದೆ ಎಂದರು.

ಬಿ ಸ್ಮೈಲ್‌ ಎನ್ನುವ ಕಂಪೆನಿಯನ್ನು ಕಳೆದ ವರ್ಷ ಪ್ರಾರಂಭ ಮಾಡಲಾಯಿತು. ಒಟ್ಟು 1.47 ಲಕ್ಷ ಕೋಟಿಯಷ್ಟು ಹೂಡಿಕೆಯನ್ನು ಬಿ ಸ್ಮೈಲ್‌ ಅಲ್ಲಿ ಮಾಡಲಾಗಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಬಿಡಿಎಗೂ ಸಹ ಒಂದಷ್ಟು ಜವಾಬ್ದಾರಿ ನೀಡಲಾಗಿದೆ. 1.5 ಕಿಮೀ ಉದ್ದದ ಕಟ್‌ ಅಂಡ್‌ ಕವರ್‌ ಟನಲ್‌, ಮೇಖ್ರಿ ವೃತ್ತದ ಬಳಿ ವಾಹನ ದಟ್ಟಣೆ ತಪ್ಪಿಸಲು ಯೋಜನೆ ಮಾಡಲಾಗುವುದು. ಬ್ರಾಂಡ್‌ ಬೆಂಗಳೂರು ಅಡಿ ಬೀದಿ ದೀಪ, ನಗರ ಸೌಂದರ್ಯೀಕರಣವನ್ನು ಯಾವ ರೀತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗುವುದು. ವೈಟ್‌ ಟಾಪಿಂಗ್ ಕಾಮಗಾರಿಯನ್ನು ನಾನೇ ಖುದ್ದಾಗಿ ಪರಿಶೀಲನೆ ಮಾಡಿದ್ದೇನೆ. 1,700 ಕೋಟಿ ರೂ. ವೆಚ್ಚದ 150 ಕಿಲೋ ಮೀಟರ್‌ ಉದ್ದದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಎರಡನೇ ಹಂತದಲ್ಲಿ 7,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. 690 ಕೋಟಿ ವೆಚ್ಚದಲ್ಲಿ ಬ್ಲಾಕ್‌ ಟಾಪಿಂಗ್‌ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

110 ಹಳ್ಳಿಗಳಿಗೆ ಕಾವೇರಿ ನೀರನ್ನು 2007 ರಿಂದ ನೀಡಲು ಆಗಿರಲಿಲ್ಲ. ಈ ಕೆಲಸವನ್ನು ನಾವು ಮಾಡಿದ್ದೇವೆ. 775 ಎಂಎಲ್‌ಡಿ ನೀರನ್ನು ಈಗಾಗಲೇ ನೀಡಿದ್ದೇವೆ. ಇದಕ್ಕೆ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಮನೆ ಮನೆಗೆ ಟ್ಯಾಂಕರ್‌ ಮೂಲಕ ಕಾವೇರಿ ನೀರು ನೀಡಲಾಗಿದೆ. ಸರಳ ಕಾವೇರಿ ಯೋಜನೆ ಮೂಲಕ ರಿಯಾಯಿತಿ ದರ ಹಾಗೂ ಕಂತುಗಳ ಮೂಲಕ ಹಣ ಪಾವತಿಗೆ ಅವಕಾಶ ನೀಡಿ ಕಾವೇರಿ ನೀರು ನೀಡಲಾಗಿದೆ ಎಂದರು.

9 ಸಾವಿರ ಕೋಟಿ ವೆಚ್ಚದ 44 ಕಿ.ಮೀ. ಉದ್ದದ ಡಬಲ್‌ ಡೆಕ್ಕರ್‌ ಯೋಜನೆಯ ಡಿಪಿಆರ್‌ ಸಿದ್ಧವಿದೆ. ಇದಕ್ಕೆ ಸದ್ಯದಲ್ಲೇ ಟೆಂಡರ್‌ ಕರೆಯಲಾಗುವುದು. ರಾಜಕಾಲುವೆಗಳ ಬಫರ್‌ ಜೋನ್‌ಗಳ ಪಕ್ಕ ರಸ್ತೆ ನಿರ್ಮಾಣ ಕಾರ್ಯ ಮೂರು ಕಡೆ ಪ್ರಾರಂಭವಾಗಿದೆ. ಮಿಲಿಟರಿಯವರು ನೀಡಿದ ಜಾಗಕ್ಕೆ ಒಂದಷ್ಟು ಮೂಲಸೌಕರ್ಯಗಳನು ಒದಗಿಸಿಕೊಡಬೇಕು ಎಂದು ಹೇಳಿದ್ದಾರೆ ನಾವು ಮಾಡುತ್ತಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ 50 ಕೋಟಿ ಹಣ ರೂ. ಮೀಸಲು ಇಡಲಾಗಿದೆ ಎಂದರು.

17 ಸಾವಿರ ನಿವೇಶನ ಭೂ ಮಾಲೀಕರಿಗೆ ಹಂಚಿಕೆ

ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿ ಎಂದು ನ್ಯಾಯಲಯ ತಿಳಿಸಿದೆ. 34,977 ನಿವೇಶನ ಮಾಡಲಾಗಿದೆ. 17 ಸಾವಿರ ನಿವೇಶನಗಳನ್ನು ಭೂ ಮಾಲೀಕರಿಗೆ ನೀಡಬೇಕು. ಶೇ. 75 ಭಾಗ ಮಾಲೀಕರು ಇದಕ್ಕೆ ತಯಾರಿದ್ದಾರೆ. ಮಿಕ್ಕ ಮಾಲೀಕರ ಬಳಿ ನಾನು ಮನವಿ ಮಾಡುತ್ತಿದ್ದೇನೆ. ಬಿಡಿಎಗೆ 50 ವರ್ಷ ತುಂಬುತ್ತಿದ್ದು 17 ಸಾವಿರ ಜನರಿಗೂ ಒಂದೇ ದಿನ ಹಂಚಿಕೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು. ಮಿಕ್ಕ ನಿವೇಶನಗಳಿಗೆ ಅರ್ಜಿ ಕರೆದು ನೀಡಲಾಗವುದು. ಸ್ಕೈ ಡೆಕ್‌ ಬಗ್ಗೆ ಬಿಡಿಎಗೆ ಜವಾಬ್ದಾರಿ ನೀಡಿದ್ದೇನೆ. ಕೆಂಪೇಗೌಡ ಲೇಔಟ್‌ ಬಳಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ಜಿಬಿಎ ಐದು ಪಾಲಿಕೆಗಳ ಚುನಾವಣೆ ಮಾಡಬೇಕು ಎಂದು ನಾವು ಮುಂದಾಗಿದ್ದೇವೆ. ವಾರ್ಡ್‌ಗಳ ವಿಂಗಡಣೆಯಾಗಿದೆ, ಮೀಸಲಾತಿ ಕೂಡ ಮುಗಿದಿದೆ. ಇದಕ್ಕೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಿ ಎಂದೂ ತಿಳಿಸಲಾಗಿದೆ. ನ್ಯಾಯಲಯಕ್ಕೂ ಅಫಿಡವಿಟ್‌ ಸಲ್ಲಿಕೆ ಮಾಡಲಾಗಿದೆ. ನ್ಯಾಯಲಯವೂ ನಮಗೆ ಮಾಗದರ್ಶನ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.