ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Cabinet Expansion: ಡಿಕೆಶಿ ಸಂಪುಟದ ಸಚಿವರಾಗಿ ಅಜಯ್ ಧರಮ್ ಸಿಂಗ್, ಬಾಲಕೃಷ್ಣ ಸೇರಿ 19 ಮಂದಿ ಪ್ರಮಾಣವಚನ ಸ್ವೀಕಾರ; ಇಲ್ಲಿದೆ ನೂತನ ಸಚಿವರ ಪಟ್ಟಿ

ಬೆಂಗಳೂರಿನ ರಾಜಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮತ್ತೊಂದೆಡೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹಲವು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಅಜಯ್‌ ಧರಮ್‌ ಸಿಂಗ್‌, ಎಚ್‌.ಸಿ.ಬಾಲಕೃಷ್ಣ, ರುದ್ರಪ್ಪ ಲಮಾಣಿ, ಕೆ.ಎಂ. ಶಿವಲಿಂಗೇಗೌಡ

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್‌ ಅವರ ಸಚಿವ ಸಂಪುಟ (Karnataka Cabinet Expansion) ಸೋಮವಾರ ವಿಸ್ತರಣೆ ಆಗಿದ್ದು, ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 19 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

Karnataka Cabinet Expansion

ನೂತನ ಸಚಿವರ ಪಟ್ಟಿ

  1. ಡಾ. ಅಜಯ್ ಧರಮ್ ಸಿಂಗ್ (ರಜಪೂತ)- ಜೇವರ್ಗಿ
  2. ಎಚ್.ಸಿ.ಬಾಲಕೃಷ್ಣ (ಒಕ್ಕಲಿಗ)- ಮಾಗಡಿ
  3. ಕೆ.ಎಸ್‌.ಬಸವಂತಪ್ಪ (ಎಸ್‌ಸಿ) -ಮಾಯಕೊಂಡ
  4. ಬಸವರಾಜ ರಾಯರೆಡ್ಡಿ (ಲಿಂಗಾಯತ)- ಯಲಬುರ್ಗಾ
  5. ಚಲುವರಾಯಸ್ವಾಮಿ- (ಒಕ್ಕಲಿಗ)- ಒಕ್ಕಲಿಗ
  6. ಲಕ್ಷ್ಮಣ ಸವದಿ (ಲಿಂಗಾಯತ)-ಅಥಣಿ
  7. ಮಧುಬಂಗಾರಪ್ಪ (ಈಡಿಗ)-ಸೊರಬ
  8. ಎಸ್‌.ಎಸ್‌.ಮಲ್ಲಿಕಾರ್ಜುನ (ಲಿಂಗಾಯತ) -ದಾವಣಗೆರೆ ಉತ್ತರ
  9. ಬಿ.ನಾಗೇಂದ್ರ (ಎಸ್‌ಟಿ)- ಬಳ್ಳಾರಿ ಗ್ರಾಮೀಣ
  10. ನರೇಂದ್ರಸ್ವಾಮಿ (ಎಸ್‌ಸಿ)- ಮಳವಳ್ಳಿ
  11. ಪುಟ್ಟರಂಗಶೆಟ್ಟಿ (ಉಪ್ಪಾರ)-ಚಾಮರಾಜನಗರ
  12. ಟಿ.ರಘುಮೂರ್ತಿ (ಎಸ್‌ಟಿ) - ಚಳ್ಳಕೆರೆ
  13. ರಿಜ್ವಾನ್‌ ಅರ್ಷದ್‌ (ಮುಸ್ಲಿಂ) ಶಿವಾಜಿನಗರ
  14. ರುದ್ರಪ್ಪ ಲಮಾಣಿ (ಎಸ್‌ಸಿ)- ಹಾವೇರಿ
  15. ಸಂತೋಷ್‌ ಲಾಡ್‌ (ಮರಾಠಿ)- ಕಲಘಟಗಿ
  16. ಶಿವಲಿಂಗೇಗೌಡ (ಒಕ್ಕಲಿಗ) - ಅರಸೀಕೆರೆ
  17. ಶಿವರಾಜ್‌ ತಂಗಡಗಿ (ಎಸ್‌ಸಿ) - ಕನಕಗಿರಿ
  18. ವಿಜಯಾನಂದ ಕಾಶಪ್ಪನವರ್‌ (ಲಿಂಗಾಯತ)- ಹುನಗುಂದ
  19. ಬಿ.ಝಡ್‌.ಜಮೀರ್‌ ಅಹ್ಮದ್‌ (ಮುಸ್ಲಿಂ)- ಚಾಮರಾಜಪೇಟೆ


ಒಂದು ಸಚಿವ ಸ್ಥಾನ ಖಾಲಿ

ಇಂದು 20 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬೇಕಿತ್ತು. ಅದರಂತೆ ಎಂಎಲ್‌ಸಿ ಗಾಯತ್ರಿ ಶಾಂತೇಗೌಡರ ಹೆಸರು ಸಚಿವರ ಪಟ್ಟಿಯಲ್ಲಿ ಬಂದಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬೋಸರಾಜು ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಪರಿಗಣಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಒಬ್ಬ ಸಚಿವರ ಪ್ರಮಾಣವಚನ ಸ್ವೀಕಾರ ಮುಂದೂಡಿಕೆಯಾಗಿದೆ.

ಹಲವು ಹಿರಿಯ ಶಾಸಕರಿಗೆ ಕೊಕ್‌

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಈ ಹಿಂದಿನ ಸಿಎಂ ಸಿದ್ದರಾಮಯ್ಯ ಸಂಪುಟದ ಹಲವು ಹಿರಿಯ ನಾಯಕರನ್ನು ಕೈಬಿಡಲಾಗಿದೆ. ಸಿದ್ದರಾಮಯ್ಯ ಸಂಪುಟದ ಒಟ್ಟು 12 ನಾಯಕರನ್ನು ಸಂಪುಟದಿಂದ ಕೈಬಿಡಲಾಗಿದ್ದು, ಸಚಿವ ಸ್ಥಾನ ಕಳೆದುಕೊಂಡವರ ಪಟ್ಟಿಯಲ್ಲಿ ಹಿರಿಯ ನಾಯಕರು ಹಾಗೂ ಹಲವು ಪ್ರಭಾವಿ ಸಚಿವರು ಸೇರಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಂಪುಟ ಪುನಾರಚನೆಯ ಮೂಲಕ ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಹಾಗೂ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂಪುಟ ಸಂಪುಟದಲ್ಲಿ ಡಾ. ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ಶಿವಾನಂದ ಪಾಟೀಲ್, ಕೆ. ವೆಂಕಟೇಶ್, ಡಾ. ಎಂ.ಸಿ. ಸುಧಾಕರ್, ಶರಣಬಸಪ್ಪ ದರ್ಶನಾಪುರ, ಆರ್.ಬಿ. ತಿಮ್ಮಾಪುರ, ರಹೀಮ್ ಖಾನ್, ಮಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್ ಸ್ಥಾನ ಕಳೆದುಕೊಂಡಿದ್ದಾರೆ.

ಇನ್ನು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಹಲವು ಶಾಸಕರು ತಮಗೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಹಲವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.