ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka monsoon session 2026: ಆ.13ರಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭ; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Karnataka Legislative Assembly Sessions: ಆಗಸ್ಟ್ 13ರಂದು ಗುರುವಾರ ಪೂರ್ವಾಹ್ನ 11:00 ಗಂಟೆಗೆ ವಿಧಾನಸೌಧದಲ್ಲಿ ಅಧಿವೇಶನ ಪ್ರಾರಂಭವಾಗಲಿದ್ದು, ಆಗಸ್ಟ್ 27 ರವರೆಗೆ ವಿವಿಧ ಕಾರ್ಯಕಲಾಪಗಳು ನಡೆಯಲಿವೆ. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.

ಬೆಂಗಳೂರು: ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ (Karnataka monsoon session 2026) ಅಧಿಕೃತವಾಗಿ ದಿನಾಂಕ ನಿಗದಿಪಡಿಸಲಾಗಿದ್ದು, ಆಗಸ್ಟ್ 13 ರಿಂದ ಅಧಿವೇಶನ ಆರಂಭವಾಗಲಿದೆ. ಈ ಕುರಿತು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರ ಸೂಚನೆ ಮೇರೆಗೆ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಜಿ. ಶ್ರೀಧರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಅಧಿವೇಶನದ ವೇಳಾಪಟ್ಟಿ:

ಆಗಸ್ಟ್ 13ರಂದು ಗುರುವಾರ ಪೂರ್ವಾಹ್ನ 11:00 ಗಂಟೆಗೆ ವಿಧಾನಸೌಧದಲ್ಲಿ ಅಧಿವೇಶನ ಪ್ರಾರಂಭವಾಗಲಿದ್ದು, ಆಗಸ್ಟ್ 27 ರವರೆಗೆ ವಿವಿಧ ಕಾರ್ಯಕಲಾಪಗಳು ನಡೆಯಲಿವೆ.

ವಿಧಾನಸಭೆಯ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ:

ಆಗಸ್ಟ್ 13 (ಗುರುವಾರ): ಖಾಸಗಿ - ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 14 (ಶುಕ್ರವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 15 (ಶನಿವಾರ): ಸಾರ್ವತ್ರಿಕ ರಜಾ ದಿನ (ಸ್ವಾತಂತ್ರ್ಯ ದಿನಾಚರಣೆ)

ಆಗಸ್ಟ್ 16 (ಭಾನುವಾರ): ಸಾರ್ವತ್ರಿಕ ರಜಾ ದಿನ

ಆಗಸ್ಟ್ 17 (ಸೋಮವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 18 (ಮಂಗಳವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 19 (ಬುಧವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 20 (ಗುರುವಾರ): ಖಾಸಗಿ - ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 21 (ಶುಕ್ರವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 22 (ಶನಿವಾರ): ಸಾರ್ವತ್ರಿಕ ರಜಾ ದಿನ

ಆಗಸ್ಟ್ 23 (ಭಾನುವಾರ): ಸಾರ್ವತ್ರಿಕ ರಜಾ ದಿನ

ಆಗಸ್ಟ್ 24 (ಸೋಮವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 25 (ಮಂಗಳವಾರ): ಸರ್ಕಾರಿ ಕಾರ್ಯಕಲಾಪಗಳು

ಆಗಸ್ಟ್ 26 (ಬುಧವಾರ): ಸಾರ್ವತ್ರಿಕ ರಜಾ ದಿನ

ಆಗಸ್ಟ್ 27 (ಗುರುವಾರ): ಖಾಸಗಿ - ಸರ್ಕಾರಿ ಕಾರ್ಯಕಲಾಪಗಳು

(ಆಗಸ್ಟ್ 13 ರಿಂದ 27 ರವರೆಗಿನ ಅವಧಿಯಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟು 10 ದಿನಗಳ ಕಾಲ ವಿಧಾನಸಭೆಯ ಕಲಾಪಗಳು ನಡೆಯಲಿವೆ)