ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nandini curd price: ನಂದಿನಿ ಮೊಸರಿನ ದರ 2 ರೂ.ಇಳಿಕೆ; ನ.29ರಿಂದ ಪರಿಷ್ಕೃತ ದರ ಜಾರಿ

ನಂದಿನಿ ಮೊಸರಿನ ದರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 14 ರೂ. ಮತ್ತು ಅರ್ಧ ಲೀಟರ್‌ಗೆ 6 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ 1 ಲೀಟರ್ ಮೊಸರು 54 ರಿಂದ 68 ರೂ.ಗೆ ಏರಿಕೆಯಾಗಿದ್ದರೆ, ಅರ್ಧ ಲೀಟರ್ ಮೊಸರಿನ ಬೆಲೆ 28 ರಿಂದ 34 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಮೊಸರಿನ ದರ ಇಳಿಕೆಗೆ ಕೆಎಂಎಫ್‌ ಕ್ರಮ ಕೈಗೊಂಡಿದೆ.

ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ನಂದಿನಿ ಮೊಸರಿನ ಮಾರಾಟ ದರವನ್ನು 1 ಲೀಟರ್‌ಗೆ 2 ರೂ.ಗಳಷ್ಟು ಕಡಿತಗೊಳಿಸಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಅವರು ಸೂಚನೆ ನೀಡಿದ ಸುಮಾರು 20 ದಿನಗಳ ಬಳಿಕ ಮೊಸರಿನ ದರ ಇಳಿಕೆಗೆ (Nandini curd price) ಕೆಎಂಎಫ್‌ ಕ್ರಮ ಕೈಗೊಂಡಿದೆ. ಈ ಪರಿಷ್ಕೃತ ದರವು ಇದೇ ನವೆಂಬರ್ 29 ಭಾನುವಾರದಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ.

ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1 ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರಗಳನ್ನು ಪರಿಷ್ಕರಿಸಿ ಏರಿಕೆ ಮಾಡಲಾಗಿತ್ತು. ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಇಳಿಕೆ ಮಾಡುವಂತೆ ಸಿಎಂ ಡಿಕೆ ಶಿವಕುಮಾರ್‌ ಕೆಎಂಎಫ್‌ಗೆ ಸೂಚನೆ ನೀಡಿದ್ದರು. ಸಿಎಂ ಈ ನಿರ್ದೇಶನದಂತೆ ಕೆಎಂಎಫ್ ಇದೀಗ ದರ ಕಡಿತಗೊಳಿಸಿದೆ.

ಮೊಸರಿನ ದರ ಎಷ್ಟು ಕಡಿಮೆಯಾಗಲಿದೆ?

  • ಅರ್ಧ ಲೀಟರ್‌ ಪ್ಯಾಕ್: ಪ್ರಸ್ತುತ 34 ರೂ. ಇದ್ದ ದರ 33 ರೂ.ಗೆ ಇಳಿಕೆ.
  • 1 ಲೀಟರ್‌ ಪ್ಯಾಕ್: ಪ್ರಸ್ತುತ 68 ರೂ. ಇದ್ದ ದರ 66 ರೂ.ಗೆ ಕಡಿತ.

ನಂದಿನಿ ಮೊಸರಿನ ದರವನ್ನು ನವೆಂಬರ್ 1ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್‌ಗೆ 14 ರೂ. ಮತ್ತು ಅರ್ಧ ಲೀಟರ್‌ಗೆ 6 ರೂ. ಏರಿಕೆ ಮಾಡಲಾಗಿತ್ತು. ಇದರಿಂದಾಗಿ 1 ಲೀಟರ್ ಮೊಸರು 54 ರಿಂದ 68 ರೂ.ಗೆ ಏರಿಕೆಯಾಗಿದ್ದರೆ, ಅರ್ಧ ಲೀಟರ್ ಮೊಸರಿನ ಬೆಲೆ 28 ರಿಂದ 34 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಬೆಲೆ ಏರಿಕೆ ವಿರುದ್ಧ ಗ್ರಾಹಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದರ ಇಳಿಕೆಗೆ ಸೂಚಿಸಿತ್ತು.