ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ED Raid: ತಂದೆ-ತಾಯಿಗೆ ಒಬ್ಬ ಒಳ್ಳೆಯ ಮಗನಾಗಲು ಆಗಲೇ ಇಲ್ಲ: ನಲಪಾಡ್ ಹೀಗೆ ಹೇಳಿದ್ಯಾಕೆ?

Mohammed Haris Nalapad: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಬಗ್ಗೆ ಯುವ ಕಾಂಗ್ರೆಸ್‌ ನಾಯಕ ನಲಪಾಡ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಯುವ ಕಾಂಗ್ರೆಸ್‌ ನಾಯಕ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌

ಬೆಂಗಳೂರು, ಏ.21: ನಮ್ಮ ತಂದೆ-ತಾಯಿಗೆ ನಾನು ಒಬ್ಬ ಒಳ್ಳೆಯ ಮಗನಂತೂ ಆಗಕ್ಕೆ ಆಗಿಲ್ಲ. ಅವರಿಗೆ ಯಾವಾಗಲೂ ನನ್ನಿಂದ ಕೆಟ್ಟದ್ದೇ ಆಗಿರೋದು. ಹೇಗೋ ಕಷ್ಟಪಟ್ಟು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿ, ಉತ್ತಮ ಕೆಲಸ ಮಾಡಿ, ಪೋಷಕರಿಗೆ ಒಳ್ಳೆಯ ಹೆಸರು ತರಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಯಾವುದೋ ಒಂದು ಕೇಸ್‌ ಇಟ್ಟುಕೊಂಡು ನಮ್ಮನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಯುವ ಕಾಂಗ್ರೆಸ್‌ ನಾಯಕ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ (Mohammed Haris Nalapad) ಬೇಸರ ಹೊರಹಾಕಿದ್ದಾರೆ.

ಇಡಿ ದಾಳಿ (ED Raid) ಕುರಿತು ಸುದ್ದಿಗೋಷ್ಠಿ ನಡೆಸಿರುವ ಅವರು, ಈ ಇಡಿ ದಾಳಿ ನಮ್ಮ ತಂದೆ ಎನ್.ಎ. ಹ್ಯಾರಿಸ್ ಅವರಿಗೆ ಸಂಬಂಧಿಸಿದ್ದಲ್ಲ. ನನ್ನ ಮತ್ತು ಸಹೋದರ ಉಮರ್ ಹ್ಯಾರಿಸ್ ನಲಪಾಡ್‌ನ ಗುರಿಯಾಗಿಸಿಕೊಂಡಿದೆ. ನಮ್ಮ ತಂದೆ ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ರಾಜಕೀಯ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನಾವು ಅವರ ನಮ್ಮ ತಂದೆಯವರ ಮನೆಯಲ್ಲಿ ಇರುವುದರಿಂದ ಈ ಮನೆಗೆ ಇಡಿ ಅಧಿಕಾರಿಗಳು ಬಂದಿದ್ದಾರೆ. ಹೀಗಾಗಿ ಇದಕ್ಕೂ ಮತ್ತು ನಮ್ಮ ತಂದೆ ಎನ್‌.ಎ.ಹ್ಯಾರಿಸ್‌ ಅವರಿಗೆ ಯಾವುದೇ ಸಂಬಂಧ ಇಲ್ಲ. 2021 ರಲ್ಲಿ ಇಸಿಐಆರ್ (ECIR) ದಾಖಲಾಗಿತ್ತಾದರೂ, ದಾಳಿಯನ್ನು ಐದಾರು ವರ್ಷಗಳ ನಂತರ, ಈಗ ತನಿಖೆ ನಡೆಸಲು ಅಧಿಕಾರಿಗಳು ಬಂದಿರುವುದು ಯಾಕೆ? ಎಂದು ನಲಪಾಡ್‌ ಪ್ರಶ್ನಿಸಿದ್ದಾರೆ.

ಯಾರಾದರೂ ಅಪರಾಧ ಮಾಡಿದರೆ, ಆರು ವರ್ಷಗಳ ಕಾಲ ಸಾಕ್ಷ್ಯಗಳನ್ನು ಇಟ್ಟುಕೊಂಡು ಮನೆ ಶೋಧ ಮಾಡಲು ಕಾಯುತ್ತಾರಾ?” ಎಂದಿರುವ ಅವರು, ಈ ದಾಳಿಯು ನಮ್ಮ ತಂದೆಗೆ ಮಂತ್ರಿ ಸ್ಥಾನ ಸಿಗದಂತೆ ತಡೆಯಲು ಮತ್ತು ಅವರ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಇಡಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಆಡಳಿತರೂಢ ಬಿಜೆಪಿಯವರು ತಮ್ಮ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಟ್‌ಕಾಯಿನ್ ಪ್ರಕರಣದ ಕುರಿತು 2020 ರಲ್ಲಿ ಸದನದಲ್ಲಿ ಬಿಜೆಪಿಯೇ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಅಲ್ಲದೆ, ಎಸ್ಐಟಿ ತನಿಖೆಯಲ್ಲೂ ಯಾವುದೇ ರೀತಿಯ ಅಕ್ರಮಗಳು ಪತ್ತೆಯಾಗಿಲ್ಲ. ಆದರೂ ಈಗ ನನ್ನ ಮತ್ತು ಸಹೋದರನ ಮೇಲೆ ದಾಳಿ ನಡೆಸಲಾಗಿದೆ ಎಂದು ನಲಪಾಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ED Raid: ಹ್ಯಾರಿಸ್‌- ನಲಪಾಡ್‌ ಮೇಲಿನ ಇಡಿ ದಾಳಿಗೆ ಮೃತ ಸಿಜೆ ರಾಯ್‌ ಜೊತೆಗಿನ ನಂಟು ಕಾರಣ?

ಸುಮಾರು 21 ಗಂಟೆಗಳ ಕಾಲ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಮ್ಮ ಮನೆಯಿಂದ ಕೇವಲ ಎರಡು ಮೊಬೈಲ್ ಫೋನ್‌ಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದು, ಒಂದು ನಯಾ ಪೈಸೆ ಕೂಡ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.