ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯ ಮೊದಲ ಸುತ್ತು ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ 1,529 ಮತಗಳ ಮುನ್ನಡೆ ಸಾಧಿಸಿದ್ದಾರೆ. ನಮೋಶಿ 7,243 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ 5,714 ಮತ ಗಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಒಟ್ಟು 14,001 ಮತಗಳನ್ನು ಎಣಿಕೆ ಮಾಡಲಾಗಿದ್ದು, ಈ ಪೈಕಿ 13,183 ಮತಗಳು ಸಿಂಧುವಾಗಿವೆ. 818 ಮತಗಳು ತಿರಸ್ಕೃತಗೊಂಡಿವೆ. ಹೀಗಾಗಿ ಎಣಿಕೆಯಾದ ಒಟ್ಟು ಮತಗಳಲ್ಲಿ ಗಮನಾರ್ಹ ಸಂಖ್ಯೆಯ ಮತಗಳು ತಿರಸ್ಕೃತವಾಗಿವೆ.
ಇತರ ಅಭ್ಯರ್ಥಿಗಳ ಪೈಕಿ ಆಮ್ ಆದ್ಮಿ ಪಕ್ಷದ ಸಾಯಬಣ್ಣ ಜಮಾದಾರ 18, ಜೆಡಿಎಸ್(ಯು) ಅಭ್ಯರ್ಥಿ ಶಂಕರೆಡ್ಡಿ ಪಾಟೀಲ 21 ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ನಾಗಣ್ಣ ಮೋತಕಪಲ್ಲಿ 34, ಟಿ.ಕೆ. ದಾಸರ 1, ಮಹಬೂಬ್ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ 3, ರಾಜಕುಮಾರ ಕೆ. ಕಲಬುರಗಿ 75, ರಾಜು ದೇವಪ್ಪ ಸೊನ್ನ 55, ಶರಣು ಪಿ. ಸುಗೂರು 5, ಶಶಿಧರ ಬಸವರಾಜ 4, ಶಿವಶಂಕರ ಅಣ್ಣಪ್ಪ ತರನಳ್ಳಿ 5 ಹಾಗೂ ಡಾ. ಸುರೇಶ ದಾವೀದಪ್ಪ 5 ಮತ ಪಡೆದಿದ್ದಾರೆ.
Karnataka SIR: ಎಸ್ಐಆರ್ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ರೆ ಏನು ಮಾಡಬೇಕು?
ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, 30,250 ಮಂದಿ ಮತ ಚಲಾಯಿಸಿದ್ದರು. ಮೊದಲ ಸುತ್ತಿನಲ್ಲಿ ನಮೋಶಿ ಮತ್ತು ಮಟ್ಟೂರ ನಡುವಿನ ಅಂತರ 1,529 ಮತಗಳಾಗಿದ್ದು, ಮುಂದಿನ ಸುತ್ತುಗಳ ಮತ ಎಣಿಕೆಯಿಂದ ಫಲಿತಾಂಶದ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆ.