ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನವೋದ್ಯಮ ಬಲವರ್ಧನೆ: ಐಎನ್‌ಕ್ಯೂ ಇನ್ನೊವೇಷನ್‌ ಗ್ಲೋಬಲ್‌ ಜತೆ ರಾಜ್ಯ ಸರ್ಕಾರದ ಒಪ್ಪಂದ

Priyank Kharge: ರಾಜ್ಯದಲ್ಲಿನ ನವೋದ್ಯಮ ವ್ಯವಸ್ಥೆಯು ದೇಶದಲ್ಲೇ ಅತ್ಯುತ್ತಮವಾದವುಗಳಲ್ಲಿ ಒಂದಾಗಿರುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಪ್ರಮುಖ ನವೋದ್ಯಮ ಪರಿಸರ ವ್ಯವಸ್ಥೆಗಳ ಜತೆಗೆ ಗಾಢ ಸಂಪರ್ಕ ಹೊಂದಿರಬೇಕು ಎಂಬುದು ನಮ್ಮ ಉದ್ದೇಶ. ಈ ಸಹಭಾಗಿತ್ವಗಳು ನಮ್ಮ ಸ್ಟಾರ್ಟ್‌ಅಪ್‌ಗಳಿಗೆ ವಾಸ್ತವಿಕ ಅವಕಾಶಗಳನ್ನು ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವಂತಾಗಬೇಕು ಎಂದು ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು, ಸೆ.4: ತಂತ್ರಜ್ಞಾನ, ನವೋದ್ಯಮ, ಸಂಶೋಧನೆ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಸಹಕಾರ ಬಲಪಡಿಸಲು ಕರ್ನಾಟಕ ರಾಜ್ಯ ಸರ್ಕಾರದ (Karnataka Government) ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಆಸ್ಟ್ರೇಲಿಯಾದ ಐಎನ್‌ಕ್ಯೂ ಇನ್ನೊವೇಷನ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ಜತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕರ್ನಾಟಕ ಮತ್ತು ನ್ಯೂ ಸೌತ್‌ ವೇಲ್ಸ್‌ನ ನವೋದ್ಯಮ ವ್ಯವಸ್ಥೆಗಳ ನಡುವಣ ಸಂಪರ್ಕ ಮತ್ತಷ್ಟು ಗಟ್ಟಿಗೊಳಿಸಲು ಈ ಒಪ್ಪಂದವು ವಿಶೇಷವಾಗಿ ಗಮನಹರಿಸಲಿದೆ. ಈ ಸಹಭಾಗಿತ್ವದ ಮೂಲಕ ರಾಜ್ಯದ ನವೋದ್ಯಮಗಳು ಮತ್ತು ತಂತ್ರಜ್ಞಾನ ಕಂಪನಿಗಳಿಗೆ ಆಸ್ಟ್ರೇಲಿಯಾದ ಜಾಗತಿಕ ಮಾರುಕಟ್ಟೆಗಳು, ಹೂಡಿಕೆದಾರರು, ಉದ್ಯಮ ಜಾಲಗಳು ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ಪ್ರವೇಶಿಸಲು ಅಗತ್ಯವಾದ ಅವಕಾಶಗಳನ್ನು ಕಲ್ಪಿಸಲಾಗುವುದು. ನವೋದ್ಯಮ ಪರಿಸರ ವ್ಯವಸ್ಥೆಗಳ ನಡುವಣ ಪರಸ್ಪರ ಸಹಭಾಗಿತ್ವಕ್ಕೂ ಹೆಚ್ಚಿನ ಅವಕಾಶ ದೊರೆಯಲಿದೆ. ಈ ಒಪ್ಪಂದವು ಕರ್ನಾಟಕ ಮತ್ತು ನ್ಯೂ ಸೌತ್‌ ವೇಲ್ಸ್‌ ನಡುವಣ ತಂತ್ರಜ್ಞಾನ ಮತ್ತು ನವೋದ್ಯಮ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ.

ಐಎನ್‌ಕ್ಯೂ ಇನ್ನೋವೇಷನ್‌ ಗ್ಲೋಬಲ್‌ ಪ್ರೈವೇಟ್‌ ಲಿಮಿಟೆಡ್‌ ಆಸ್ಟ್ರೇಲಿಯಾ ಮೂಲದ ನವೋದ್ಯಮಗಳಿಗೆ ನೆರವು ನೀಡುವ ಸಂಸ್ಥೆಯಾಗಿದೆ. ನವೋದ್ಯಮ, ತಂತ್ರಜ್ಞಾನ, ಹೂಡಿಕೆದಾರರು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ, ಉದ್ಯಮ ಮತ್ತು ಸರ್ಕಾರದ ವಿವಿಧ ಪರಿಸರ ವ್ಯವಸ್ಥೆಗಳ ನಡುವೆ ಸಂಪರ್ಕ ಕಲ್ಪಿಸುವುದರ ಜತೆಗೆ ಬೆಳವಣಿಗೆ ಹಂತದ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದೆ. ಉದ್ದೇಶಿತ ಆಸ್ಟ್ರೇಲಿಯಾ-ಭಾರತ ಟೆಕ್‌ ಇನ್ನೊವೇಷನ್‌ ಬ್ರಿಡ್ಜ್‌ ಉಪಕ್ರಮದ ಮೂಲಕವೂ ಈ ಸಂಸ್ಥೆ ಸಹಕಾರ ನೀಡುತ್ತಿದೆ.

ಈ ಸಹಭಾಗಿತ್ವದ ಕುರಿತು ಪ್ರತಿಕ್ರಿಯಿಸಿರುವ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ‘ರಾಜ್ಯದಲ್ಲಿನ ನವೋದ್ಯಮಗಳು, ನವೋದ್ಯಮಿಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಜಾಗತಿಕ ಮಾರುಕಟ್ಟೆಗಳು ಮತ್ತು ಬಂಡವಾಳದ ಜತೆ ಎಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸುತ್ತೇವೆ ಎಂಬುದರ ಮೇಲೆ ರಾಜ್ಯದ ಮುಂದಿನ ಹಂತದ ಬೆಳವಣಿಗೆಯು ಅವಲಂಬಿತವಾಗಿದೆ. ಐಎನ್‌ಕ್ಯೂ ಇನ್ನೊವೇಷನ್‌ ಗ್ಲೋಬಲ್‌ ಜತೆಗಿನ ಈ ಸಹಭಾಗಿತ್ವವು ಕರ್ನಾಟಕ ಮತ್ತು ನ್ಯೂ ಸೌತ್‌ ವೇಲ್ಸ್‌ ನಡುವೆ ಮಹತ್ವದ ಸೇತುವೆ ನಿರ್ಮಿಸಲಿದೆ.

‘ರಾಜ್ಯದಲ್ಲಿನ ನವೋದ್ಯಮ ವ್ಯವಸ್ಥೆಯು ದೇಶದಲ್ಲೇ ಅತ್ಯುತ್ತಮವಾದವುಗಳಲ್ಲಿ ಒಂದಾಗಿರುವುದಷ್ಟೇ ಅಲ್ಲದೆ, ಜಾಗತಿಕ ಮಟ್ಟದ ಪ್ರಮುಖ ನವೋದ್ಯಮ ಪರಿಸರ ವ್ಯವಸ್ಥೆಗಳ ಜತೆಗೆ ಗಾಢ ಸಂಪರ್ಕ ಹೊಂದಿರಬೇಕು ಎಂಬುದು ನಮ್ಮ ಉದ್ದೇಶ. ಈ ಸಹಭಾಗಿತ್ವಗಳು ನಮ್ಮ ಸ್ಟಾರ್ಟಪ್‌ಗಳಿಗೆ ವಾಸ್ತವಿಕ ಅವಕಾಶಗಳನ್ನು ಮತ್ತು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವಂತಾಗಬೇಕು’ ಎಂದರು.

ಕರ್ನಾಟಕದ ಸ್ಟಾರ್ಟಪ್‌ಗಳಿಗೆ ಜಾಗತಿಕ ಅವಕಾಶಗಳ ಸೃಷ್ಟಿ

ಕರ್ನಾಟಕ ಮತ್ತು ನ್ಯೂ ಸೌತ್‌ ವೇಲ್ಸ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲು ಅಥವಾ ತಮ್ಮ ವಹಿವಾಟನ್ನು ಮತ್ತಷ್ಟು ವಿಸ್ತರಿಸಲು ಬಯಸುವ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವುದು ಈ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ.

ಈ ಸಹಕಾರದ ಪ್ರಯೋಜನಗಳು

  • ನವೋದ್ಯಮಗಳಿಗೆ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸಲು ಮತ್ತು ಪ್ರವೇಶಿಸಲು ನೆರವು ನೀಡುವುದು
  • ಮಾರ್ಗದರ್ಶನ, ಪರಿಣತರ ಸಲಹೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಬಗ್ಗೆ ಅಗತ್ಯ ಮಾಹಿತಿ ಒದಗಿಸುವುದು
  • ಉದ್ಯಮಗಳು, ಹೂಡಿಕೆದಾರರು, ಸಂಸ್ಥೆಗಳು ಮತ್ತು ಸರ್ಕಾರಗಳ ಜೊತೆಗೆ ಸಂಪರ್ಕ ಕಲ್ಪಿಸುವುದು
  • ಸಭೆಗಳು, ಕಾರ್ಯಾಗಾರಗಳು, ಸಮ್ಮೇಳನಗಳು ಮತ್ತು ನವೋದ್ಯಮ ಕಾರ್ಯಕ್ರಮಗಳ ಮೂಲಕ ಅವಕಾಶಗಳನ್ನು ಸೃಷ್ಟಿಸುವುದು
  • ಇನ್‌ಕ್ಯುಬೇಟರ್‌ಗಳು, ಆ್ಯಕ್ಸಿಲರೇಟರ್‌ಗಳು ಮತ್ತು ಇನ್ನೋವೇಷನ್‌ ಹಬ್‌ಗಳ ನಡುವೆ ಸಹಕಾರಕ್ಕೆ ಅವಕಾಶ ಕಲ್ಪಿಸುವುದು

ಸಾಲ ಮನ್ನಾಕ್ಕೆ ನೆರವು ಕೋರಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಡಿ.ಕೆ. ಶಿವಕುಮಾರ್

ಈ ಸಹಭಾಗಿತ್ವದ ಮೂಲಕ ಡೀಪ್‌ಟೆಕ್‌ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಿಗೆ ಆದ್ಯತೆ ನೀಡಲು, ಶೈಕ್ಷಣಿಕ, ಸಂಶೋಧನಾ ಮತ್ತು ಉದ್ಯಮ ಕ್ಷೇತ್ರಗಳ ಸಂಪರ್ಕ ಬಲಪಡಿಸಲು ಹಾಗೂ ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಬಂಡವಾಳದ ನೆರವು ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ. ನಿರ್ದಿಷ್ಟ ಕಾರ್ಯಕ್ರಮಗಳ ಮೂಲಕ ಒಪ್ಪಂದದ ಆಶಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.