ಪಾಟ್ನಾ, ನ. 14: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ (Bihar Assembly Election Results 2025) ಎನ್‌ಡಿಗೆ ಬಹುಮತ ಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ತಿಳಿಸಿದ್ದವು. ಟ್ರೆಂಡ್ ಎನ್‌ಡಿಎ ಕಡೆಗೆ ಇದೆ ಎಂಬುದನ್ನು ಹೇಳಿದ್ದವು. ಇದೀಗ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ-ಜೆಡಿಯು ನೇತೃತ್ವದಲ್ಲಿ ಎನ್‌ಡಿಎ ಒಟ್ಟು 202 ಸ್ಥಾನಗಳಲ್ಲಿ ಜಯ ಗಳಿಸಿ. ಕಾಮಾಖ್ಯಾ ಅನಾಲಿಟಿಕ್ಸ್ 167-187 ಸೀಟುಗಳನ್ನು ಎನ್‌ಡಿಎ ಗೆಲ್ಲಲಿದೆ ಎಂದು ತಿಳಿಸಿತ್ತು. ಇದರೊಂದಿಗೆ ಹೆಚ್ಚು ನಿಖರವಾಗಿ ಸಮೀಕ್ಷೆಯನ್ನು ಕೊಟ್ಟಿತ್ತು. ಮ್ಯಾಟ್ರಿಜ್ (147-167) ಮತ್ತು ಟುಡೇಸ್ ಚಾಣಕ್ಯ (148-172) ಕ್ಷೇತ್ರಗಳಲ್ಲಿ ಎನ್‌ಡಿಎ ಗೆದ್ದು ಸ್ಪಷ್ಟ ಬಹುಮತ ಗಳಿಸಲಿದೆ ಎಂದು ತಿಳಿಸಿತ್ತು. ಮಹಾ ಘಟಬಂಧನಕ್ಕೆ ಕಾಮಾಖ್ಯಾ 54-74 ಸೀಟುಗಳನ್ನು ನೀಡಿತ್ತು. ಮ್ಯಾಟ್ರಿಜ್ (70-90) ಮತ್ತು ಟುಡೇಸ್ ಚಾಣಕ್ಯ (65-89) ಕ್ಷೇತ್ರಗಳನ್ನು ಕೊಟ್ಟಿತ್ತು.
ಸಣ್ಣ ಪಕ್ಷಗಳಿಗೆ ಎಷ್ಟು ಸೀಟು ಬರಬಹುದು ಎಂಬ ವಿಚಾರದಲ್ಲಿ ಕೆಲವು ಸಮೀಕ್ಷೆಗಳು ಬಹುತೇಕ ನಿಜವಾಗಿದೆ. ಮ್ಯಾಟ್ರಿಜ್ ಜೆಎಸ್‌ಪಿ/ಜೆಎಸ್‌ಯುಪಿಗೆ 5 ಸೀಟುಗಳನ್ನು ಕೊಟ್ಟಿದ್ದರೆ, ಎಕ್ಸಿಸ್ ಮೈ ಇಂಡಿಯಾ 0-2 ಸೀಟುಗಳನ್ನು ನೀಡಿತ್ತು.
ಈ ಸುದ್ದಿಯನ್ನೂ ಓದಿ: ಕಾಂಗ್ರೆಸ್ ಎಂದರೆ ಎಂಎಂಸಿ-ಮುಸ್ಲಿಂ ಲೀಗ್ ಮಾವೋಯಿಸ್ಟ್ ಕಾಂಗ್ರೆಸ್: ಬಿಹಾರ ವಿಧಾನಸಭೆ ಫಲಿತಾಂಶ ಬೆನ್ನಲ್ಲೇ ಮೋದಿ ಹೊಸ ವ್ಯಾಖ್ಯಾನ
ಪೀಪಲ್ಸ್ ಪಲ್ಸ್ ಎನ್‌ಡಿಎಗೆ 133-159 ಮತ್ತು ಎಂಜಿಬಿಗೆ 75-101 ಸೀಟುಗಳನ್ನು ನೀಡಿತ್ತು. ಭಾಸ್ಕರ್ ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ 145-160 ಮತ್ತು ಮಹಾ ಘಟಬಂಧನಕ್ಕೆ 73-91 ಕ್ಷೇತ್ರಗಳನ್ನು ಅಂದಾಜಿಸಲಾಗಿತ್ತು. ಈ ಸಲದ ಬಿಹಾರ ಚುನಾವಣೆಯಲ್ಲಿ ಪಿ-ಮಾರ್ಕ್, ಪೋಲ್ ಸ್ಟಾರ್ಟ್, ಪೀಪಲ್ಸ್ ಇನ್ ಸೈಟ್ ಮೊದಲದ ಸಮೀಕ್ಷೆಗಳು ಚುನಾವಣೆಯ ಟ್ರೆಂಡ್ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಸರಿಯಾಗಿ ಗುರುತಿಸಿವೆ. ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೂ, ಎನ್‌ಡಿಎ ಬಹುಮತ ಗಳಿಸಲಿದೆ ಎಂದು ತಿಳಿಸಿತ್ತು.
ಸಮೀಕ್ಷೆ ನಡೆಸುವ ಸಂಸ್ಥೆಗಳು ಸ್ಯಾಂಪಲ್ ಮಾದರಿ, ಮತಗಟ್ಟೆ ಕವರೇಜ್, ಡೆಮಾಗ್ರಫಕಿಕ್ ಮ್ಯಾಪಿಂಗ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಿತ್ತು. ಇದರಿಂದಾಗಿ ಚುನಾವಣೆಯ ಟ್ರೆಂಡ್ ಅನ್ನು ಸರಿಯಾಗಿ ಗ್ರಹಿಸಿದ್ದವು. ಈ ಹಿಂದೆ ಕೆಲವು ರಾಜಕೀಯ ಪಕ್ಷಗಳು ಸಮೀಕ್ಷೆಗಳನ್ನು ನಕಲಿ ಎಂದು ಆಕ್ಷೇಪಿಸಿದ್ದವು. ಈ ಆರೋಪಗಳಿಗೆ ಬಿಹಾರ ಚುನಾವಣೆಯಲ್ಲಿ ಸಮೀಕ್ಷೆಗಳು ಸರಿಯಾದ ಟ್ರೆಂಡ್ ಗುರುತಿಸುವ ಮೂಲಕ ಉತ್ತರಿಸಿವೆ.