ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karnataka Lokayukta: ಆಸ್ತಿ ವಿವರ ಸಲ್ಲಿಸದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ ಮಾಡಿದ ಲೋಕಾಯುಕ್ತ

Minister and MLA asset data: ಕರ್ನಾಟಕ ಲೋಕಾಯುಕ್ತ ಕಾಯಿದೆ ಅನ್ವಯ ಶಾಸಕರು, ಸಚಿವರು ಪ್ರತಿ ವರ್ಷ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಹಲವು ಶಾಸಕರು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪಟ್ಟಿ ಬಿಡುಗಡೆ ಮಾಡಿದೆ.

ಬೆಂಗಳೂರು, ನ.6: 2024-25ನೇ ಸಾಲಿನಲ್ಲಿ ಆಸ್ತಿ ವಿವರ ಸಲ್ಲಿಸದ ರಾಜ್ಯದ ಸಚಿವರು, ಶಾಸಕರ ಪಟ್ಟಿ ಬಿಡುಗಡೆ ಮಾಡಿದ ಕರ್ನಾಟಕ ಲೋಕಾಯುಕ್ತ (Karnataka Lokayukta) ಬಿಡುಗಡೆ ಮಾಡಿದೆ. ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ (ಅಧಿನಿಯಮ) ಕಲಂ 22(1), ಕಲಂ 7ರ ಉಪ ಕಲಂ (1) ರಲ್ಲಿ ಉಲ್ಲೇಖಿಸಿರುವಂತೆ ಸರ್ಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನು ಜೂನ್‌ 30ಕ್ಕಿಂತ ಮುಂಚಿತವಾಗಿ ಪ್ರತಿ ವರ್ಷವೂ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕು. ಆದರೆ, ಹಲವು ಶಾಸಕರು ಆಸ್ತಿ ವಿವರ ಸಲ್ಲಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪಟ್ಟಿ ಬಿಡುಗಡೆ ಮಾಡಿದೆ.

ಅಸ್ತಿ ವಿವರಣಾ ಪಟ್ಟಿಯನ್ನು ಸಲ್ಲಿಸುವಲ್ಲಿ ವಿಫಲರಾದರೆ ಲೋಕಾಯುಕ್ತ ಕಾಯ್ದೆಯಡಿ ನಿಗದಿಪಡಿಸಿರುವಂತೆ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯ ಸಲ್ಲಿಸದಿರುವಿಕೆಯ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಲೋಕಾಯುಕ್ತರು ವರದಿ ಮಾಡಬೇಕೆಂದು ಅಧಿನಿಯಮದ ಕಲಂ 22(2)ರಲ್ಲಿ ಅಧ್ಯಾದೇಶಿಸಲಾಗಿದೆ. ಅದರಂತೆ ಸಂಬಂಧಪಟ್ಟ ಸಾರ್ವಜನಿಕ ನೌಕರನಿಗೆ ಆ ವರದಿಯ ಪ್ರತಿಯನ್ನು ಕಳುಹಿಸುವುದೂ ಕೂಡ ಅವಶ್ಯಕವಾಗಿರುತ್ತದೆ.

ಲೋಕಾಯುಕ್ತ ಕಾಯ್ದೆ ಅಧಿನಿಯಮದ ಕಲಂ 22(1) ರಲ್ಲಿರುವಂತೆ ಮೇಲ್ಕಂಡ ವರದಿಯನ್ನು ಕಳುಹಿಸಿದ್ದಾಗಿಯೂ ಅಂತಹ ವರದಿಯನ್ನು ಕಳುಹಿಸಿದ ಎರಡು ತಿಂಗಳೊಳಗೆ ಸಂಬಂಧಪಟ್ಟ ಸಾರ್ವಜನಿಕ ನೌಕರರು ಅಧಿನಿಯಮದ ಕಲಂ 22(2) ಅನ್ನು ಪಾಲಿಸುವಲ್ಲಿ ವಿಫಲನಾದಲ್ಲಿ, ಲೋಕಾಯುಕ್ತರು ಅಂತಹ ತಪ್ಪಿತಸ್ಥ ಸಾರ್ವಜನಿಕ ನೌಕರರ ಹೆಸರುಗಳನ್ನು ರಾಜ್ಯದಲ್ಲಿ ಪ್ರಚಲಿತವಾಗಿರುವ ಮೂರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಬಹುದು ಅಥವಾ ಪ್ರಕಟಿಸುವಂತೆ ಮಾಡಬಹುದು.

ಈ ಸುದ್ದಿಯನ್ನೂ ಓದಿ | CM Siddaramaiah: ಹೈಕಮಾಂಡ್ ನಿರ್ಧಾರವೇ ಅಂತಿಮ; ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ಅಧಿನಿಯಮದ ಕಲಂ 22ರಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ನೌಕರ ಎಂಬ ವ್ಯಾಖ್ಯಾನದ ಅಡಿಯಲ್ಲಿ ವಿಧಾನ ಸಭಾ ಮತ್ತು ವಿಧಾನ ಪರಿಷತ್ ಎಲ್ಲಾ ಸದಸ್ಯರೂ ಸೇರಿರುತ್ತಾರೆ. ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿರುವ ದಿನಾಂಕ 28/08/2025 ರ ವರದಿಯ ಪ್ರತಿ ಈ ಕೆಳಕಂಡ ಸಾರ್ವಜನಿಕ ನೌಕರರಿಗೆ ಜಾರಿಯಾಗಿದ್ದಾಗ್ಯೂ, ಸಕ್ಷಮ ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸಿದ ಎರಡು ತಿಂಗಳುಗಳೊಳಗಾಗಿ ಸದರಿ ಸಾರ್ವಜನಿಕ ನೌಕರರು 2024-25ನೇ ಸಾಲಿನ ತಮ್ಮ ಆಸ್ತಿ ಮತ್ತು ದಾಯಿತ್ವಗಳ ವಿವರಣಾ ಪಟ್ಟಿಯನ್ನು ಸಲ್ಲಿಸಲು ವಿಫಲರಾಗಿರುವುದರಿಂದ ಅವರ ಹೆಸರುಗಳನ್ನು ಅಧಿನಿಯಮದ ಕಲಂ 22ರ ಉಪ ಕಲಂ (2) ರಂತೆ ಈ ಮೂಲಕ ಮೂರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.

ಯಾರೆಲ್ಲಾ ಆಸ್ತಿ ವಿವರ ಸಲ್ಲಿಸಿಲ್ಲಾ?

ಸಚಿವರ ಪಟ್ಟಿ

  1. ಕೆ.ಎಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ
  2. ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  3. ಬಿ.ಜಡ್. ಜಮೀರ್ ಅಹ್ಮದ್ ಖಾನ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ
  4. ರಹೀಮ್ ಖಾನ್, ಹಜ್, ಪೌರಾಡಳಿತ
  5. ಕೆ. ವೆಂಕಟೇಶ್, ಪಶು ಸಂಗೋಪನೆ ಮತ್ತು ರೇಷ್ಮೆ
  6. ಕ್ಯಾತ್ಸಂದ್ರ ಎನ್ ರಾಜಣ್ಣ, ಮಾಜಿ ಸಹಕಾರ ಸಚಿವ

ಶಾಸಕರ ಪಟ್ಟಿ

  1. ಲಕ್ಷ್ಮಣ ಸಂಗಪ್ಪ ಸವದಿ, ಅಥಣಿ
  2. ಅಶೋಕ ಮಹಾದೇವಪ್ಪ ಪಟ್ಟಣ್, ರಾಮದುರ್ಗ
  3. ಮೇಟಿ ಹುಲ್ಲಪ್ಪ ಯಮನಪ್ಪ, ಬಾಗಲಕೋಟೆ
  4. ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ, ಹುನಗುಂದ
  5. ಕಟಕದೊಂಡ ವಿಠ್ಠಲ ದೊಂಡಿಬಾ, ನಾಗಠಾಣ (ಪ.ಜಾ.)
  6. ಎಂ. ವೈ. ಪಾಟೀಲ್, ಅಫಜಲಪುರ
  7. ಅಲ್ಲಮಪ್ರಭು ಪಾಟೀಲ್, ಕಲಬುರಗಿ ದಕ್ಷಿಣ
  8. ಕನೀಜ್‌ ಫಾತಿಮಾ, ಕಲಬುರಗಿ (ಉತ್ತರ)
  9. ಶರಣು ಸಲಗರ, ಬಸವಕಲ್ಯಾಣ
  10. ಸಿದ್ದು ಪಾಟೀಲ್, ಹುಮನಾಬಾದ್
  11. ಬಸನಗೌಡ ತುರುವಿಹಾಳ, ಮಸ್ಕಿ (ಪ.ಜಾ.)
  12. ಜಿ. ಜನಾರ್ದನ ರೆಡ್ಡಿ, ಗಂಗಾವತಿ
  13. ಬಸವರಾಜ್‌ ರಾಯರೆಡ್ಡಿ, ಯಲಬುರ್ಗಾ
  14. ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ್, ಕೊಪ್ಪಳ
  15. ಗುರುಪಾದಗೌಡ ಸಂಗನಗೌಡ ಪಾಟೀಲ್, ರೋಣ
  16. ಎನ್.‌ ಎಚ್.‌ ಕೋನರೆಡ್ಡಿ, ನವಲಗುಂದ
  17. ವಿನಯ ಕುಲಕರ್ಣಿ, ಧಾರವಾಡ
  18. ಸತೀಶ್‌ ಕೃಷ್ಣ ಸೈಲ್, ಕಾರವಾರ
  19. ದಿನಕರ್‌ ಕೇಶವ ಶೆಟ್ಟಿ, ಕುಮಟಾ
  20. ಬಸವರಾಜ ನೀಲಪ್ಪ ಶಿವಣ್ಣನವರ್, ಬ್ಯಾಡಗಿ
  21. ಜೆ ಎನ್‌ ಗಣೇಶ್, ಕಂಪ್ಲಿ (ಪ.ಪಂ.)
  22. ಎನ್‌ ವೈ ಗೋಪಾಲಕೃಷ್ಣ, ಮೊಳಕಾಲ್ಮೂರು (ಪ.ಪಂ.)
  23. ಎಂ. ಚಂದ್ರಪ್ಪ, ಹೊಳಲ್ಕೆರೆ
  24. ಲತಾ ಮಲ್ಲಿಕಾರ್ಜುನ, ಹರಪನಹಳ್ಳಿ (ವಿಜಯನಗರ ಜಿಲ್ಲೆ)
  25. ಕೆ ಎಸ್‌ ಬಸವಂತಪ್ಪ, ಮಾಯಕೊಂಡ (ಪ.ಜಾ.)
  26. ಶಾರದಾ ಪೂರ‍್ಯಾ ನಾಯ್ಕ, ಶಿವಮೊಗ್ಗ ಗ್ರಾಮಾಂತರ (ಪ.ಜಾ.)
  27. ಬಿ ಕೆ ಸಂಗಮೇಶ್ವರ್, ಭದ್ರಾವತಿ
  28. ಟಿ ಡಿ ರಾಜೇಗೌಡ, ಶೃಂಗೇರಿ
  29. ನಯನಾ ಮೊಟಮ್ಮ, ಮೂಡಿಗೆರೆ (ಪ.ಜಾ.)
  30. ಜಿ. ಎಚ್‌. ಶ್ರೀನಿವಾಸ, ತರೀಕೆರೆ
  31. ಆನಂದ ಕೆ. ಎಸ್. ಕಡೂರು
  32. ಸಿ. ಬಿ. ಸುರೇಶ್‌ ‍ಬಾಬು, ಚಿಕ್ಕನಾಯಕನಹಳ್ಳಿ
  33. ಡಾ. ಹೆಚ್.‌ ಡಿ. ರಂಗನಾಥ್, ಕುಣಿಗಲ್
  34. ಬಿ. ಸುರೇಶ್‌ ಗೌಡ, ತುಮಕೂರು ಗ್ರಾಮಾಂತರ
  35. ಎಚ್.ವಿ. ವೆಂಕಟೇಶ್, ಪಾವಗಡ(ಪ.ಜಾ)
  36. ಕೆ.ಎಚ್ ಪುಟ್ಟಸ್ವಾಮಿ ಗೌಡ, ಗೌರಿಬಿದನೂರು
  37. ಎಸ್.ಎನ್.ಸುಬ್ಬಾರೆಡ್ಡಿ, (ಚಿನ್ನಕಾಯಲಪಲ್ಲಿ) ಬಾಗೇಪಲ್ಲಿ
  38. ಬಿ.ಎನ್.ರವಿಕುಮಾರ್, ಶಿಡ್ಲಘಟ್ಟ
  39. ಜಿ.ಕೆ.ವೆಂಕಟಶಿವ ರೆಡ್ಡಿ, ಶ್ರೀನಿವಾಸಪುರ
  40. ಸಮೃದ್ದಿ ವಿ ಮಂಜುನಾಥ್, ಮುಳಬಾಗಿಲು(ಪ.ಜಾ)
  41. ರೂಪಕಲಾ ಎಂ., ಕೆಜಿಎಫ್‌ (ಪ.ಜಾ)
  42. ಕೆ.ವೈ.ನಂಜೇಗೌಡ, ಮಾಲೂರು
  43. ಕೆ. ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್
  44. ಎ.ಸಿ.ಶ್ರೀನಿವಾಸ, ಪುಲಕೇಶಿ ನಗರ (ಪ.ಜಾ)
  45. ಎನ್.ಎ.ಹ್ಯಾರಿಸ್, ಶಾಂತಿನಗರ
  46. ಬಿ. ಶಿವಣ್ಣ, ಆನೇಕಲ್(ಪ.ಜಾ)
  47. ಶ್ರೀನಿವಾಸಯ್ಯ ಎನ್, ನೆಲಮಂಗಲ(ಪ.ಜಾ)
  48. ಹೆಚ್.ಸಿ.ಬಾಲಕೃಷ್ಣ, ಮಾಗಡಿ
  49. ಸಿ.ಪಿ.ಯೋಗೇಶ್ವರ, ಚನ್ನಪಟ್ಟಣ
  50. ಉದಯ ಕೆ.ಎಂ, ಮದ್ದೂರು
  51. ದರ್ಶನ್‌ ಪುಟ್ಟಣ್ಣಯ್ಯ, ಮೇಲುಕೋಟೆ
  52. ರವಿಕುಮಾರ್‌ ಗೌಡ(ಗಣಿಗ), ಮಂಡ್ಯ
  53. ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ, ಶ್ರೀರಂಗಪಟ್ಟಣ
  54. ಸಿ.ಎನ್.ಬಾಲಕೃಷ್ಣ, ಶ್ರವಣಬೆಳಗೊಳ
  55. ಎಚ್‌ ಕೆ ಸುರೇಶ್ (ಹುಲ್ಲಹಳ್ಳಿ‌ ಸುರೇಶ್), ಬೇಲೂರು
  56. ಹೆಚ್.ಡಿ ರೇವಣ್ಣ, ಹೊಳೆನರಸೀಪುರ
  57. ಎ. ಮಂಜು, ಅರಕಲಗೂಡು
  58. ಸಿಮೆಂಟ್‌ ಮಂಜು, ಸಕಲೇಶಪುರ(ಪ.ಜಾ)
  59. ಡಾ. ಭರತ್‌ ಶೆಟ್ಟಿ ವೈ, ಮಂಗಳೂರು ನಗರ ಉತ್ತರ
  60. ಭಾಗೀರಥಿ ಮುರುಳ್ಯ, ಸುಳ್ಯ(ಪ.ಜಾ)
  61. ರವಿಶಂಕರ್‌ ಡಿ, ಕೃಷ್ಣರಾಜನಗರ
  62. ಅನಿಲ್‌ ಚಿಕ್ಕಮಾದು, ಹೆಗ್ಗಡದೇವನಕೋಟೆ (ಪ.ಪಂ)
  63. ಕೆ.ಹರೀಶ್‌ ಗೌಡ, ಚಾಮರಾಜ
  64. ಎಂ.ಆರ್‌ ಮಂಜುನಾಥ್, ಹನೂರು
  65. ಎ .ಆರ್‌. ಕೃಷ್ಣ ಮೂರ್ತಿ, ಕೊಳ್ಳೇಗಾಲ (ಪ.ಜಾ)
  66. ಸಿ. ಪುಟ್ಟರಂಗಶೆಟ್ಟಿ, ಚಾಮರಾಜನಗರ

ವಿಧಾನ ಪರಿಷತ್ ಸದಸ್ಯರ ಪಟ್ಟಿ:

  1. ಸಲೀಂ ಅಹಮದ್
  2. ಅಡಗೂರು ಹೆಚ್‌ ವಿಶ್ವನಾಥ್
  3. ಕೆ. ಅಬ್ದುಲ್‌ ಜಬ್ಬರ್
  4. ‌ ಎಂ. ಎಲ್.‌ ಅನೀಲ್‌ ಕುಮಾರ್
  5. ಬಸನಗೌಡ ಬಾದರ್ಲಿ
  6. ಗೋವಿಂದರಾಜು
  7. ಐವನ್‌ ಡಿʼಸೋಜಾ
  8. ಟಿ. ಎನ್.‌ ಜವರಾಯಿ ಗೌಡ
  9. ಸಿ. ಎನ್.‌ ಮಂಜೇಗೌಡ
  10. ಡಾ. ಎಂ.ಜಿ. ಮುಳೆ
  11. ಎನ್‌ . ನಾಗರಾಜು (ಎಂ.ಟಿ.ಬಿ.)
  12. ನಸೀರ್‌ ಅಹ್ಮದ್
  13. ಕೆ. ಎಸ್.‌ ನವೀನ್‌
  14. ಪ್ರದೀಪ್‌ ಶೆಟ್ಟರ್
  15. ಪಿ.ಹೆಚ್.‌ ಪೂಜಾರ್
  16. ರಾಜೇಂದ್ರ ರಾಜಣ್ಣ
  17. ರಾಮೋಜಿ ಗೌಡ
  18. ಶಶೀಲ್‌ ಜಿ ನಮೋಶಿ
  19. ಎಸ್.ವ್ಹಿ. ಸಂಕನೂರ
  20. ಸುನೀಲ್‌ ವಲ್ಯಾಪುರ್
  21. ಸುನೀಲ್‌ ಗೌಡ ಪಾಟೀಲ್
  22. ಶರವಣ ಟಿ.ಎ
  23. ವೈ. ಎಂ. ಸತೀಶ್
  24. ಸೂರಜ ರೇವಣ್ಣ
  25. ಎಚ್.‌ ಪಿ.ಸುಧಾಮ್‌ ದಾಸ್
  26. ತಿಪ್ಪಣ್ಣಪ್ಪ ಕಮಕನೂರ
  27. ಡಾ. ಡಿ. ತಿಮ್ಮಯ್ಯ
  28. ಕೆ. ವಿವೇಕಾನಂದ

ನಿಗದಿತ ಕಾಲಾವಧಿ ಮುಗಿದ ನಂತರ ಆಸ್ತಿ ವಿವರ ಸಲ್ಲಿಸಿದವರು

  1. ಡಿ. ಸುಧಾಕರ್, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ
  2. ಬಿ.ಎಂ.ನಾಗರಾಜು, ಸಿರಗುಪ್ಪ (ಪ.ಪಂ.) ಶಾಸಕ
  3. ಎಂ. ಟಿ. ಕೃಷ್ಣಪ್ಪ, ತುರುವೇಕೆರೆ ಶಾಸಕ
  4. ಪಠಾಣ್‌ ಯಾಸೀರ್‌ ಅಹ್ಮದ್‌ ಖಾನ್, ಶಿಗ್ಗಾಂವ್ ಶಾಸಕ
  5. ಚಿದಾನಂದ್‌ ಎಂ. ಗೌಡ, ಎಂಎಲ್‌ಸಿ