ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼಪಿಎಂ ಸೂರ್ಯ ಸರೋವರ' ಯೋಜನೆಗೆ ಕೇಂದ್ರ ಅಸ್ತು: ಬಳಕೆಯಾಗದ ಜಲಮೂಲಗಳಲ್ಲಿ 5000 ಮೆ.ವ್ಯಾ ತೇಲುವ ಸೌರ PV ಅಳವಡಿಕೆ

Pralhad Joshi: ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ ದೇಶದಲ್ಲಿ ಜಲಾಶಯಗಳು ಮತ್ತು ಜಲಮೂಲಗಳನ್ನೂ ಬಳಸಿಕೊಂಡು ಸೌರ ಶಕ್ತಿ ಉತ್ಪಾದಿಸುವ ಒಂದು ಮಹತ್ತರ ಯೋಜನೆಯಾಗಿದ್ದು, ಬಳಕೆಯಾಗದ ಜಲಮೂಲಗಳ ಸದ್ಬಳಕೆಗೆ ಉತ್ತಮ ಅವಕಾಶವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ನವದೆಹಲಿ, ಜು.31: ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಶುದ್ಧ ಇಂಧನದ ಹೊಸ ಯುಗಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿರಿಸಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ ದೇಶದಲ್ಲಿ ಜಲಾಶಯಗಳು ಮತ್ತು ಜಲಮೂಲಗಳನ್ನೂ ಬಳಸಿಕೊಂಡು ಸೌರ ಶಕ್ತಿ ಉತ್ಪಾದಿಸುವ ಒಂದು ಮಹತ್ತರ ಯೋಜನೆಯಾಗಿದ್ದು, ಬಳಕೆಯಾಗದ ಜಲಮೂಲಗಳ ಸದ್ಬಳಕೆಗೆ ಉತ್ತಮ ಅವಕಾಶವಾಗಿದೆ ಎಂದು ಹೇಳಿದ್ದಾರೆ ಸಚಿವ ಜೋಶಿ.

5000 ಮೆಗಾವ್ಯಾಟ್ ಸಾಮರ್ಥ್ಯ

PM-SSY ಅಡಿ ಸದ್ಯಕ್ಕೆ 5,000 ಮೆಗಾವ್ಯಾಟ್ ಸಾಮರ್ಥ್ಯದ ತೇಲುವ ಸೌರ PV ಅಳವಡಿಕೆ ಮತ್ತು 10,000 MWh ಇಂಧನ ಸಂಗ್ರಹ ವ್ಯವಸ್ಥೆ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

₹28,500 ಕೋಟಿ ಹೂಡಿಕೆ ಗುರಿ

ಈ ಮಹತ್ವದ ಯೋಜನೆ ಸುಮಾರು ₹28500 ಕೋಟಿ ಹೂಡಿಕೆ ಗುರಿ ಹೊಂದಿದ್ದು, ಭಾರತದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.‌

ಪ್ರಶ್ನೆಪತ್ರಿಕೆ ಸೋರಿಕೆ ಜಾಲ ನಿರ್ಮೂಲನೆಗೆ ಸೂಕ್ತ ಮಸೂದೆ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

PM ಸೂರ್ಯಘರ್, ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯ ಸರೋವರ ಯೋಜನೆಗಳು ಇಂಧನ ವಲಯದಲ್ಲಿ ಭಾರತವನ್ನು ಸ್ವಾವಲಂಬಿ, ಸುಸ್ಥಿರ ಮತ್ತು ವಿಕಸಿತ ಭಾರತದತ್ತ ಕೊಂಡೊಯ್ಯುತ್ತದೆ ಎಂದು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದ್ದಾರೆ.