ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ವಯಂ ರಕ್ತದಾನ; ಯುವ ಸಮುದಾಯಕ್ಕೆ ಪ್ರೇರಣೆಯಾದ ಶಿಕ್ಷಣ ಸಚಿವ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ "ಸೇವಾ ಸಂಕಲ್ಪ ಅಭಿಯಾನ"ದ ಭಾಗವಾಗಿ ಬಿಜೆಪಿ ಯುವ ಮೋರ್ಚಾವು ಮಹಾಮನೆ ಮನಗುಂಡಿಯಲ್ಲಿ ಗುರುವಾರ ಆಯೋಜಿಸಿದ್ಧ ರಕ್ತದಾನ ಶಿಬಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸ್ವತಃ ರಕ್ತದಾನ ಮಾಡುವ ಮೂಲಕವೇ ಚಾಲನೆ ನೀಡಿದ್ದಾರೆ.

ನರೇಂದ್ರ ಮೋದಿ ಜನುಮ ನಿಮಿತ್ತ ರಕ್ತದಾನ ಮಾಡಿದ ಪ್ರಹ್ಲಾದ್‌ ಜೋಶಿ.

ಹುಬ್ಬಳ್ಳಿ, ಸೆ.17: ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಅವರು (Pralhad Joshi) ಹುಬ್ಬಳ್ಳಿಯಲ್ಲಿ ಗುರುವಾರ ಸ್ವಯಂ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಪ್ರೇರಣೆ ಮತ್ತು ಮಾದರಿ ಎನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ "ಸೇವಾ ಸಂಕಲ್ಪ ಅಭಿಯಾನ"ದ ಭಾಗವಾಗಿ ಬಿಜೆಪಿ ಯುವ ಮೋರ್ಚಾವು ಮಹಾಮನೆ ಮನಗುಂಡಿಯಲ್ಲಿ ಇಂದು ಆಯೋಜಿಸಿದ್ಧ ರಕ್ತದಾನ ಶಿಬಿರದಲ್ಲಿ ಸಚಿವರು ಸ್ವತಃ ರಕ್ತದಾನ ಮಾಡುವ ಮೂಲಕವೇ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಸಾಮಾಜಿಕ ಹೋರಾಟ, ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಒಂದು ಹೆಜ್ಜೆ ಮುಂದಿರುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ರಕ್ತದಾನ, ಆರೋಗ್ಯ ಶಿಬಿರ, ಅಶಕ್ತರಿಗೆ ನೆರವು, ಮಹಿಳೆಯರ ಸಬಲೀಕರಣದಂತಹ ಸಾಮಾಜಿಕ ಕಾರ್ಯಗಳಲ್ಲೂ ಮತ್ತೊಂದು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ಇಂದಿನ ರಕ್ತದಾನ ಶಿಬಿರ ಮತ್ತು ಸಾಧನ ಸಲಕರಣೆ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆಯಂತಹ ಮಹತ್ತರ ಕಾರ್ಯಕ್ರಮವೇ ನಿದರ್ಶನ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ತಮ್ಮ ಜೀವನದಲ್ಲಿ ಸಾಕಷ್ಟು ಬಾರಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ರವಾನೆ ಮಾಡಿದ್ದಾರೆ. ಯುವ ಜನತೆ ರಕ್ತ ದಾನದಂತಹ ಮಹತ್ಕಾರ್ಯದಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿದ್ದಾರೆ.‌

ರಾಜಕಾರಣಿಯಲ್ಲ 'ಗ್ಲೋಬಲ್ ಐಕಾನ್': Gen Zಗಳ ಮನಗೆದ್ದು, ಮೋದಿ ಸೋಶಿಯಲ್ ಮೀಡಿಯಾದಲ್ಲಿ 'ನಂಬರ್ 1' ಆಗಿದ್ದು ಹೇಗೆ?

ರಕ್ತದಾನದಂತಹ ಪುಣ್ಯದ ಕಾರ್ಯ ಮತ್ತೊಂದಿಲ್ಲ. ಒಬ್ಬರ ಜೀವ ಉಳಿಸುವ ಈ ಮಾನವೀಯ ಕಾರ್ಯಕ್ಕೆ ಯುವ ಸಮುದಾಯ ಮುಂದಾಗಬೇಕು. ‎ದೇಶಸೇವೆ, ಜನಸೇವೆಯನ್ನೇ ಜೀವನದ ಪರಮೋಚ್ಚ ಧ್ಯೇಯವಾಗಿ ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಅರ್ಥಪೂರ್ಣಗೊಳಿಸಬೇಕು. ಪ್ರಧಾನಿ ಅವರ ರಾಷ್ಟ್ರ ನಿರ್ಮಾಣ ಹಾಗೂ ‘ವಿಕಸಿತ ಭಾರತ’ದ ಸಂಕಲ್ಪವನ್ನು ಸಾಕಾರಗೊಳಿಸಬೇಕು ಎಂದು ಇದೇ ವೇಳೆ ಕರೆಯಿತ್ತ ಸಚಿವ ಜೋಶಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದಿಸಿದರು.

115ನೇ ಬಾರಿ ಬಸವಾನಂದ ಶ್ರೀ ರಕ್ತದಾನ

ಪ್ರತಿ ವರ್ಷ ರಕ್ತದಾನ ಮಾಡುತ್ತಾ ಬಂದಿರುವ ಬಸವಾನಂದ ಸ್ವಾಮೀಜಿ ಅವರೂ ಇಂದು ಪ್ರಧಾನಿ ಮೋದಿ ಅವರ ಜನ್ಮದಿನ ಪ್ರಯುಕ್ತ 115ನೇ ಬಾರಿ ರಕ್ತದಾನ ಮಾಡಿದ್ದು, ಅಂಧರಾಗಿದ್ದರೂ ಸಾಮಾಜಿಕ ಕೈಂಕರ್ಯದಲ್ಲಿ ಯುವ ಜನತೆಯ ಕಣ್ತೆರೆಸಿದರು.

ಹೊಲಿಗೆ ಯಂತ್ರ ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಮ್ಮಿಕೊಂಡಿದ್ದ ‘ಸೇವಾ ಸಂಕಲ್ಪ ಅಭಿಯಾನʼದಲ್ಲಿ ಇಂದು ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಸಂಸದರ ಕಾರ್ಯಾಲಯದಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸಹ ವಿತರಿಸಲಾಯಿತು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಕೌಶಲ್ಯ ತರಬೇತಿ, ಸ್ವಾವಲಂಬನೆ ಹಾಗೂ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸುವ ಕಾರ್ಯಕ್ಕೆ ಸದಾ ಉತ್ತೇಜನ ನೀಡುತ್ತಿರುವ ಸಚಿವ ಪ್ರಲ್ಹಾದ ಜೋಶಿ, ಇಂದು 959 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿದ್ದು, ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀಮನ್ ನಿರಂಜನ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸಹಸ್ರಾರು ಮಹಿಳೆಯರಿಗೆ ಉದ್ಯೋಗಾಧಾರ

ಧಾರವಾಡ ಕ್ಷೇತ್ರದಾದ್ಯಂತ ಸಚಿವರ ಈ ಸಾಮಾಜಿಕ ನೆರವಿನ ಕಾರ್ಯಕ್ರಮಗಳಿಂದಾಗಿ ಈವರೆಗೆ 14,838 ಮಹಿಳೆಯರಿಗೆ ನೇರ ಉದ್ಯೋಗ ಹಾಗೂ 99,333 ಮಹಿಳೆಯರಿಗೆ ಪರೋಕ್ಷವಾಗಿ ಉದ್ಯೋಗ ಲಭಿಸಿದೆ. 8,362 ಮಹಿಳೆಯರಿಗೆ ಉದ್ಯೋಗಾವಕಾಶ ದೊರೆತಿದೆ.

ಪ್ರಾಥಮಿಕ ಶಾಲೆ ಶಿಕ್ಷಕರಿಗಿನ್ನು 6 ತಿಂಗಳ ವಿಶೇಷ ಬ್ರಿಡ್ಜ್ ಕೋರ್ಸ್; ತಳಮಟ್ಟದಿಂದಲೇ ಶೈಕ್ಷಣಿಕ ಗುಣಮಟ್ಟ ವೃದ್ಧಿಗೆ ಸಚಿವ ಪ್ರಲ್ಹಾದ್‌ ಜೋಶಿ ಮಹತ್ತರ ಹೆಜ್ಜೆ

ತರಬೇತಿ ಪಡೆದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿ 39,981 ಸಿದ್ಧ ಉಡುಪುಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದೂ ಒಂದು ಮಾದರಿ ಕಾರ್ಯವಾಗಿ ಗುರುತರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ 'ನಾರಿಶಕ್ತಿ' ಆಶಯವನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಸ್ವಕ್ಷೇತ್ರದಲ್ಲಿ ತುಂಬಾ ಅರ್ಥಪೂರ್ಣವಾಗಿ ಸಾಕಾರಗೊಳಿಸಿದ್ದಾರೆ.