ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸರ್ಕಾರದ ಜಾಹೀರಾತಲ್ಲಿ ಡಿಸಿಎಂ ಪರಮೇಶ್ವರ್‌ ಫೋಟೊ ಮಾಯ; ಏನಾಯ್ತು ಕಾಂಗ್ರೆಸ್‌ನ ಅಹಿಂದ ಜಪ ಎಂದು ಜೋಶಿ ಟೀಕೆ

Pralhad Joshi: ಅಹಿಂದ ಸಿದ್ಧಾಂತದಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಪರ ಹೋರಾಡುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಸದಾ ಈ ಸಮುದಾಯಗಳ ನಾಯಕರನ್ನು ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ನವದೆಹಲಿ: 'ಅಹಿಂದ' ಮಂತ್ರ ಜಪಿಸುತ್ತಿದ್ದ ಕಾಂಗ್ರೆಸ್ ಇದೀಗ ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುವ ಮತ್ತದೇ ದಲಿತ 'ವಿರೋಧಿ ನೀತಿ' ಮುಂದುವರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕೃತ ಜಾಹೀರಾತುಗಳಲ್ಲಿ ಹಿರಿಯ ದಲಿತ ನಾಯಕ ಡಿಸಿಎಂ, ಡಾ.ಜಿ.ಪರಮೇಶ್ವರ ಅವರ ಹೆಸರು ಕೈ ಬಿಡುವ ಮೂಲಕ ಕಾಂಗ್ರೆಸ್ ಸರ್ಕಾರ ದಲಿತ ನಾಯಕರನ್ನು ಅಪಮಾನಿಸುವ ಸಂಸ್ಕೃತಿ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.

ಅಹಿಂದ ಸಿದ್ಧಾಂತದಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಪರ ಹೋರಾಡುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಸದಾ ಈ ಸಮುದಾಯಗಳ ನಾಯಕರನ್ನು ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರ ಮತ್ತು ನೂತನ ಸಿಎಂ ಡಿ.ಕೆ.ಶಿವಕುಮಾರ್ ಪದೇ ಪದೇ ದಲಿತ, ಅಹಿಂದ ನಾಯಕರನ್ನು ಕಡೆಗಣಿಸುತ್ತಿದ್ದಾರೆ. ಮಾಜಿ ಸಿಎಂ ಡಿ.ದೇವರಾಜ್ ಅರಸು ಅವರ ಪುನರುತ್ಥಾನ ವೇಳೆ ಸರ್ಕಾರಿ ಜಾಹೀರಾತಿನಲ್ಲಿ ಡಿಸಿಎಂ ಪರಮೇಶ್ವರ ಅವರ ಫೋಟೋ ಕೈ ಬಿಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ಪ್ರಲ್ಹಾದ ಜೋಶಿ ಚಾಟಿ ಬೀಸಿದ್ದಾರೆ.

"ಹಸಿರು ಬೆಂಗಳೂರು" ಉಪಕ್ರಮವನ್ನು ಉತ್ತೇಜಿಸುವ ಇತ್ತೀಚಿನ ಸರ್ಕಾರಿ ಜಾಹೀರಾತಿನಿಂದಲೂ ಉಪಮುಖ್ಯಮಂತ್ರಿ ಅವರನ್ನು ಹೊರಗಿಡಲಾಗಿದೆ. ಆದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣ ಭೈರೇಗೌಡ ಅವರಿನ್ನೂ ವಹಿಸಿಕೊಳ್ಳದೇ ಇದ್ದರೂ ಜಾಹೀರಾತುಗಳಲ್ಲಿ "ಬೆಂಗಳೂರು ಅಭಿವೃದ್ಧಿ ಸಚಿವ"ರಾಗಿ ತೋರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಈ ವ್ಯತಿರಿಕ್ತ ನಿಲುವುಗಳು ಅದೇನನ್ನು ತೋರುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಹಿಂದೆ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಮತ್ತು ಸೀತಾರಾಮ್ ಕೇಸರಿ ಅವರಂತಹ ನಾಯಕರಿಗೆ ಅಗೌರವ ತೋರಿದ್ದ ಕಾಂಗ್ರೆಸ್ ಇದೀಗ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮತ್ತು ಡಾ ಜಿ.ಪರಮೇಶ್ವರ ಅವರನ್ನು ಡಿಸಿಎಂ ಮಾಡಿತು ಸರ್ಕಾರಿ ಜಾಹೀರಾತಿನಲ್ಲಿ ಕಡೆಗಣಿಸುತ್ತಿದ್ದು, ಹಳೇ ರಾಜಕೀಯ ಚಳಿಯನ್ನೇ ಮುಂದುವರೆಸಿದೆ ಎಂದು ಸಚಿವ ಜೋಶಿ ಆರೋಪಿಸಿದ್ದಾರೆ.

ಕೇಂದ್ರದಿಂದ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಪೂರೈಕೆ; ರಾಜ್ಯ ಸರ್ಕಾರವೇ ಸರಿ ವಿತರಿಸಿಲ್ಲ ಎಂದ ಜೋಶಿ

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಡಿಸಿಎಂ ಫೋಟೋವನ್ನು ಸರ್ಕಾರಿ ಜಾಹೀರಾತುಗಳಲ್ಲಿ ನಿಯಮಿತವಾಗಿ ಸೇರಿಸಲಾಗುತ್ತಿತ್ತು. ಆದರೆ, ಡಿಕೆ ಶಿವಕುಮಾರ ಆಡಳಿತ ಅದಕ್ಕೆ ತದ್ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿ ಪರಮೇಶ್ವರ ಅವರನ್ನು ಹೊರಗಿಟ್ಟಂತಿದೆ. ಇದು ಸಮಗ್ರ ಪ್ರಾತಿನಿಧ್ಯವನ್ನು ಪ್ರಶ್ನಿಸುವಂತಿದೆ ಎಂದು ಹೇಳಿದ್ದಾರೆ.