ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ವಿಬಿ ಜಿ ರಾಮ್ ಜಿ ಜಾಗೃತಿಗಾಗಿ ಎಲ್ಲ ಕಡೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಡೀ ದೇಶವ್ಯಾಪಿ ಬೆಂಬಲವೂ ಅದಕ್ಕೆ ವ್ಯಕ್ತವಾಗಿದೆ. ಅದನ್ನು ವಾಪಸ್ ಪಡೆಯುವ ಸಂದರ್ಭ ಒದಗಿಬರಲಾರದು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ಸಂಗ್ರಹ ಚಿತ್ರ)

ಬೆಂಗಳೂರು, ಫೆ.23: ಕಾಂಗ್ರೆಸ್ಸಿನವರು ಎಷ್ಟು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತವಾಗಲಿದೆ. ಆದ್ದರಿಂದ ವ್ಯರ್ಥ ಪ್ರಯತ್ನ ಮಾಡಬೇಡಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ. ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಬಿ ಜಿ ರಾಮ್ ಜಿ ಜಾಗೃತಿಗಾಗಿ ಎಲ್ಲ ಕಡೆ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಡೀ ದೇಶವ್ಯಾಪಿ ಬೆಂಬಲವೂ ಅದಕ್ಕೆ ವ್ಯಕ್ತವಾಗಿದೆ. ಅದನ್ನು ವಾಪಸ್ ಪಡೆಯುವ ಸಂದರ್ಭ ಒದಗಿಬರಲಾರದು ಎಂದು ತಿಳಿಸಿದರು.

ಕಾಂಗ್ರೆಸ್ಸಿನವರು ದೇಶವಿರೋಧಿ ಚಟುವಟಿಕೆ ಮಾಡುತ್ತಾರೆ. ದೇಶಕ್ಕೇ ಅಪಮಾನ ಮಾಡುತ್ತಾರೆ ಎಂದು ಟೀಕಿಸಿದರು. ಇವತ್ತು ಚಿಕ್ಕಬಳ್ಳಾಪುರದಲ್ಲಿ ಮತ್ತೆ ಮನ್‍ರೇಗಾ ಬೇಕೆಂದು ಹೋರಾಟ ಮಾಡಿದ್ದಾರೆ. ನಿನ್ನೆ ಶೃಂಗಸಭೆ ವಿರೋಧಿಸಲು ಎಷ್ಟು ಬಟ್ಟೆ ಬಿಚ್ಚಿಕೊಂಡಿದ್ದೀರೋ ಅದಕ್ಕಿಂತ ಹೆಚ್ಚು ಬಟ್ಟೆ ಬಿಚ್ಚಿಕೊಂಡರೂ ವಿಬಿ ಜಿ ರಾಮ್ ಜಿ ಯೇ ಊರ್ಜಿತವಾಗಲಿದೆ. ಇದರಿಂದ ಜನರಿಗೆ ಬಹಳ ಅನುಕೂಲ ಆಗುತ್ತಿದೆ ಎಂದರು.

ಕಾನೂನುಬಾಹಿರವಾಗಿ 31 ನಿವೇಶನ ಪಡೆದುಕೊಂಡ ಕಾಂಗ್ರೆಸ್ ಪಕ್ಷ: ಛಲವಾದಿ ನಾರಾಯಣಸ್ವಾಮಿ ಆರೋಪ

ಅಭಿವೃದ್ಧಿ, ಅನ್ಯಾಯ ಸರಿಪಡಿಸುವ ಕೆಲಸ ಮಾಡಿ

ವಿಬಿ ಜಿ ರಾಮ್ ಜಿ ಏನೆಂಬುದು ಜನರಿಗೆ ಗೊತ್ತಾಗಿದೆ. ನೀವು ಮಾಡಬೇಕಾದುದು ಅಭಿವೃದ್ಧಿ ಕೆಲಸಗಳು ಎಂದು ಹೇಳಿದ ಅವರು, ಜನರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕಾದ ಕೆಲಸ ಮಾಡಿ ಎಂದು ಆಗ್ರಹಿಸಿದರು. ಒಳ ಮೀಸಲಾತಿ ಸೃಷ್ಟಿ ಮಾಡಿದ್ದೀರಿ. ಆದರೆ, ಬೀದಿ ಬೀದಿಯಲ್ಲಿ ಜನರು ಹೋರಾಟಕ್ಕೆ ಇಳಿಯುವ, ಅವರವರ ಮಧ್ಯದಲ್ಲಿ ಜಗಳ ಹಚ್ಚುವ ಕೆಲಸ ಮಾಡಿದ್ದೀರಿ. ಇಂಥವುಗಳಿಗೆ ತೆರೆ ಎಳೆದು ಎಲ್ಲರೂ ಸಂತೋಷದಿಂದ ಒಪ್ಪಿಕೊಳ್ಳುವ ರೀತಿಯಲ್ಲಿ ನೀವು ಮಾಡಿ. ಇದೆಲ್ಲ ಬಿಟ್ಟು ಮನ್‍ರೇಗಾ ಹೋರಾಟ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಅದು ಗಮನ ಬೇರೆಡೆ ಸೆಳೆಯುವ ತಂತ್ರ ಅಷ್ಟೇ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.