ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka SIR: ಎಸ್​ಐಆರ್ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ರೆ ಏನು ಮಾಡಬೇಕು?

2026ರ ಜೂನ್ 30ರಂದು ಆರಂಭವಾದ ಎಸ್​ಐಆರ್ ಪ್ರಕ್ರಿಯೆಯು, ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ನಿಖರಗೊಳಿಸುವ ಉದ್ದೇಶವನ್ನು ಹೊಂದಿತ್ತು. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಈಗ ಒಟ್ಟು ಮತದಾರರ ಸಂಖ್ಯೆ 4,55,00,011ಗೆ ಇಳಿಕೆಯಾಗಿದೆ.

ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿ ಮಂಗಳವಾರ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 4.55 ಕೋಟಿ ಅರ್ಹ ಮತದಾರರು ಇದ್ದು, 99.32 ಲಕ್ಷ ಮತದಾರರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲಾಗಿದೆ. ಹೀಗಾಗಿ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ?, ಇಲ್ಲದಿದ್ದರೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಏನು ಮಾಡಬೇಕು ಎಂಬ ಮಾಹಿತಿ ಇಲ್ಲಿದೆ.

2026ರ ಜೂನ್ 30ರಂದು ಆರಂಭವಾದ ಎಸ್​ಐಆರ್ ಪ್ರಕ್ರಿಯೆಯು, ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಮತ್ತು ನಿಖರಗೊಳಿಸುವ ಉದ್ದೇಶವನ್ನು ಹೊಂದಿತ್ತು. ಪರಿಷ್ಕರಣೆಗೆ ಮುನ್ನ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಈಗ ಒಟ್ಟು ಮತದಾರರ ಸಂಖ್ಯೆ 4,55,00,011ಗೆ ಇಳಿಕೆಯಾಗಿದೆ. ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 2.29 ಕೋಟಿ ಮಹಿಳೆಯರು ಹಾಗೂ 2.25 ಕೋಟಿ ಪುರುಷ ಮತದಾರರಿದ್ದು, ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ.

ಜೂನ್ 16 ರಿಂದ ಅಕ್ಟೋಬರ್ 23ರವರೆಗೆ, ಚುನಾವಣಾ ಆಯೋಗಕ್ಕೆ ಒಟ್ಟು 25.87 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ ಹೊಸ ಸೇರ್ಪಡೆಗಾಗಿ ಫಾರ್ಮ್ 6 ಅಡಿಯಲ್ಲಿ 10.42 ಲಕ್ಷ ಅರ್ಜಿಗಳು, ತಿದ್ದುಪಡಿಗಾಗಿ ಫಾರ್ಮ್ 8 ಅಡಿಯಲ್ಲಿ 13.10 ಲಕ್ಷ ಅರ್ಜಿಗಳು, ಮತ್ತು ಹೆಸರು ತೆಗೆದುಹಾಕಲು ಫಾರ್ಮ್ 7 ಅಡಿಯಲ್ಲಿ 2.28 ಲಕ್ಷ ಅರ್ಜಿಗಳು ಸೇರಿವೆ.

ಮತಪಟ್ಟಿಯಲ್ಲಿ ನಿಮ್ಮ ಹೆಸರು ನೋಡುವುದು ಹೇಗೆ?

  • ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ voters.eci.gov.in ಗೆ ಭೇಟಿ ನೀಡಿ.
  • ಹೋಮ್‌ ಪೇಜ್‌ನಲ್ಲಿರುವ ‘Search your name in voter list’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಅಲ್ಲಿ ‘Search by EPIC’ ಆಯ್ಕೆಯನ್ನು ಆರಿಸಿ.
  • ನಿಮ್ಮ ಭಾಷೆ, ವೋಟರ್ ಐಡಿ ಕಾರ್ಡ್ ಸಂಖ್ಯೆ, ರಾಜ್ಯ ಹಾಗೂ ಕ್ಯಾಪ್ಚಾ ಕೋಡ್ ನಮೂದಿಸಿ ಸರ್ಚ್‌ ಮಾಡಿ.
  • ನಿಮ್ಮ ಹೆಸರು ಪಟ್ಟಿಯಲ್ಲಿದ್ದರೆ, ನಿಮ್ಮ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಮತಗಟ್ಟೆಯ ವಿವರ ಪರದೆಯ ಮೇಲೆ ಕಾಣಿಸುತ್ತದೆ.

ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಒಂದು ವೇಳೆ ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದರೆ ಆತಂಕಪಡಬೇಕಾಗಿಲ್ಲ. ಭಾರತೀಯ ಚುನಾವಣಾ ಆಯೋಗವು ‘ನಿರಂತರ ನವೀಕರಣ (Continuous Updation)’ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಬಹುದು.

Karnataka SIR: ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 99.32 ಲಕ್ಷ ಮತದಾರರು ಡಿಲೀಟ್!

ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಆನ್‌ಲೈನ್ ಮೂಲಕ voters.eci.gov.in ವೆಬ್‌ಸೈಟ್‌ನಲ್ಲಿ ಫಾರ್ಮ್ 6 ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
  • ಆಫ್‌ಲೈನ್ ವಿಧಾನವಾದರೆ, ನಿಮ್ಮ ಪ್ರದೇಶದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅಥವಾ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಫಾರ್ಮ್ 6 ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.
  • ಅಗತ್ಯ ದಾಖಲೆಗಳನ್ನು ಒದಗಿಸಿದರೆ, ಮುಂದಿನ ಪರಿಶೀಲನೆ ಪ್ರಕ್ರಿಯೆಗಳ ನಂತರ ನಿಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರು ಸೇರ್ಪಡೆ ಮಾಡಲಾಗುತ್ತದೆ.