ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ರವಿವಾರದ ಈ ದಿನ ಅನುರಾಧಾ ನಕ್ಷತ್ರದಿಂದ‌ ಯಾವ ರಾಶಿಗೆ ಉತ್ತಮ ಫಲವಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ನವಮಿ ತಿಥಿ, ಅನುರಾಧಾ ನಕ್ಷತ್ರದ ಈ ದಿನ ಆಗಸ್ಟ್ 3ನೇ ತಾರೀಖಿನ ರವಿ ವಾರದಂದು ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಅನುರಾಧಾ ನಕ್ಷತ್ರದಿಂದ‌ ಯಾವ ರಾಶಿಗೆ ಶುಭ ಫಲ ಇದೆ?

Horoscope

Profile Pushpa Kumari Aug 3, 2025 6:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿ, ಅನುರಾಧಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ (Daily Horoscope) ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿ ಅವರಿಗೆ ಇಂದು ಅನುರಾಧಾ ನಕ್ಷತ್ರದಿಂದಾಗಿ ಮನಸ್ಸಿಗೆ ಕ್ಲೇಶ ಉಂಟಾಗಲಿದೆ. ಇಂದು ನಿಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರಿಂದ ಮನಸ್ಸಿಗೆ ನೋವುಂ ಟಾಗಲಿದೆ. ಇಂದಿನ ದಿನ ಯಾವುದೇ ಮುಖ್ಯ ನಿರ್ಧಾರ ಕೈಗೊಳ್ಳಬೇಡಿ. ತಾಳ್ಮೆ ವಹಿಸಿದರೆ ಕಷ್ಟಗಳು ದೂರಾಗಲಿದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಬಹಳ ಅತ್ಯುತ್ತಮವಾದ ದಿನವಾಗಿದೆ. ಸಾಮಾಜಿಕ ರಂಗದಲ್ಲಿ ಗುರುತಿಸಿಕೊಳ್ಳಲಿದ್ದು ಗೌರವ ಪ್ರಾಪ್ತಿಯಾಗುವುದು. ಮಾನಸಿಕ ನೆಮ್ಮದಿ ಇರಲಿದೆ. ಸಾಕಷ್ಟು ಸಮಸ್ಯೆ ಇಂದು ಪರಿಹಾರ ವಾಗಲಿದೆ. ದೊಡ್ಡ ಕೆಲಸ ಕಾರ್ಯಗಳು ಬಗೆಹರಿಯಲಿದೆ. ನಿಮಗೆ ಬೇಕಾದ ಸಹಕಾರ ಮಿತ್ರರಿಂದ ದೊರೆಯಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಅತ್ಯುತ್ತಮ ದಿನವಾಗಿದೆ. ಸಾಮಾಜಿಕ ವ್ಯವಹಾರದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು. ಶತ್ರುಗಳು ಇಂದು ಹಿಮ್ಮೆಟ್ಟಲಿದ್ದು ತುಂಬಾ ದಿನದಿಂದ ಬಾಕಿ ಇದ್ದ ಕೆಲಸ ಕಾರ್ಯಗಳು ಅಂದುಕೊಂಡಂತೆ ನಡೆಯಲಿದೆ. ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಪ್ರೇಮ ಪ್ರೀತಿ ಹಾಗೂ ದಾಂಪತ್ಯ ವಿಚಾರದಲ್ಲಿ ವೈಮನಸ್ಸು ಮೂಡಲಿದೆ. ಆದ್ದರಿಂದ ಯಾವುದೇ ಮುಖ್ಯ ವಿಚಾರಗಳ ಕುರಿತು ಈಗಲೇ ನಿರ್ಧಾರ ಕೈಗೊಳ್ಳದಿರುವುದು ಉತ್ತಮ. ವ್ಯಾಪಾರ ವ್ಯವಹಾರದಲ್ಲಿ ತೊಡಗಿರುವವರು ಹೆಚ್ಚು ಜಾಗೃತ ರಾಗಿರಬೇಕು.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಸಂಸಾರದ ವಿಚಾರದಲ್ಲಿ ಬಹಳ ಕ್ಲೇಶ ಉಂಟಾ ಗಲಿದೆ. ತಾಯಿಯ ಆರೋಗ್ಯ ವಿಚಾರದ ಬಗ್ಗೆ ಕಾಳಜಿ ವಹಿಸಬೇಕು. ಅನಗತ್ಯ ವಿಚಾರಕ್ಕೆ ತಲೆ ಕೆಡಸಿ ಕೊಳ್ಳದೆ ನಿಶ್ಚಿಂತೆಯಿಂದ ಇದ್ದರೆ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಈ ದಿನ ಮನೆಯಲ್ಲಿ ಸಾಕಷ್ಟು ಪ್ರತಿಕೂಲ ವಾತಾವರಣ ಸೃಷ್ಟಿಆಗಲಿದೆ. ಮನಸ್ಸಿಗೆ ನೆಮ್ಮದಿ ಇರಲಿದ್ದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಾಧ್ಯಮ ರಂಗದಲ್ಲಿ ಇರುವವರಿಗೆ ಬಹಳ ಉತ್ತಮವಾದ ದಿನವಾಗಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಬಹಳ ಕಿರಿ ಕಿರಿ ಇರುವ ದಿನವಾಗಿದೆ. ಸಂಸಾರ ಮಿತ್ರತ್ವದ ಸಂಬಂಧಗಳಿಗೆ ಮಾನ್ಯತೆ ನೀಡಬೇಕು. ಕೆಲವು ಹೆಚ್ಚುವರಿ ಜವಾಬ್ದಾರಿ ವಹಿಸಿ ಕೊಳ್ಳಬೇಕು. ಧನಾಗಮ ಆಗಲಾರದು ನಿಮ್ಮ ಹಣ ಇಂದು ನಿಮಗೆ ವಾಪಾಸಾಗದೆ ಇರುವ ಸಾಧ್ಯತೆ ಇದೆ. ಖರ್ಚು ವೆಚ್ಚ ಜಾಸ್ತಿ ಇರಲಿದೆ.

ಇದನ್ನು ಓದಿ:Daily Horoscope: ಶ್ರಾವಣ ಶುಕ್ರವಾರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇರಲಿದೆ. ಹಿಂದಿನ ದಿನಗಳಲ್ಲಿ ಇದ್ದ ಮನಸ್ಸಿನ ಬೇಸರ ಇತರೆ ಸಮಸ್ಯೆ ಬಗೆಹರಿಯಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಎಲ್ಲ ವಿಚಾರದಲ್ಲಿಯೂ ಜಯ ಸಿಗಲಿದೆ. ಕೆಲವೊಂದು ಗೊಂದಲ ಇಂದು ಪರಿಹಾರವಾಗಲಿದ್ದು ಕೆಲವು ವಿಚಾರದ ಬಗ್ಗೆ ನಿಮಗೆ ಸ್ಪಷ್ಟತೆ ಸಿಗಲಿದೆ.

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಕ್ಲೇಶಕರವಾದ ದಿನವಾಗಿದೆ. ಇಂದು ಯಾವುದೇ ಮುಖ್ಯವಾದ ವಿಚಾರದ ಕುರಿತು ನಿರ್ಧಾರ ಕೈಗೊಳ್ಳುವುದು ಬೇಡ. ದೊಡ್ಡ ಬೋರ್ಡ್ ಮೀಟಿಂಗ್ ಇತ್ಯಾದಿಗಳಲ್ಲಿ ನಿಮ್ಮ ಮಾತು ಯಾವುದು ಕೂಡ ನಡೆಯುವುದಿಲ್ಲ. ಹಾಗಾಗಿ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುನ್ನಡೆದರೆ ಉತ್ತಮ.

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಬಹಳ ಉತ್ತಮವಾಗಿ ಇದೆ. ಇಷ್ಟಾರ್ಥ ಸಿದ್ಧಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಈ ದಿನ ಬಹಳ ಪ್ರಶಸ್ತವಾಗಿ ಇರಲಿದೆ. ಸ್ನೇಹಿತರಿಂದ ಬೇಕಾದ ಸಹಕಾರ ಸಿಗಲಿದೆ ಅನೇಕ ವಿಚಾರದಲ್ಲಿ ಸಂತೋಷ ಸಿಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಯಶಸ್ಸು ಪ್ರಾಪ್ತಿಯಾಗಲಿದೆ. ಅನೇಕ ದಿನಗಳಿಂದ ನೀವು ಅಂದುಕೊಂಡ ಕೆಲಸ ಕಾರ್ಯಗಳು ಕೈಗೂಡಿ ಗುರುಹಿರಿಯರ ಗೌರವಕ್ಕೆ ನೀವು ಪಾತ್ರರಾಗುವಿರಿ‌. ಕ್ಷುಲಕ ಕಾರಣಕ್ಕೆ ಕೋಪಿಸಿಕೊಳ್ಳದೆ ತಾಳ್ಮೆ ವಹಿಸಿದರೆ ಅನಗತ್ಯ ವೈಮನಸ್ಸು ಬರಲಾರದು.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಹಳ ಭಾಗ್ಯೋದಯದ ದಿನವಾಗಿದೆ. ಹಳೆ ಎಲ್ಲ ಸಮಸ್ಯೆ ಪರಿಹಾರ ಆಗಲಿದೆ. ಮನೆಯ ಗುರು ಹಿರಿಯದ ಆಶೀರ್ವಾದ ವಿದ್ದರೆ ಅಂದು ಕೊಂಡ ಕೆಲಸದಲ್ಲಿ ಯಶಸ್ಸು ಸಿದ್ಧಿಯಾಗಲಿದೆ. ನಿಮ್ಮ ಕೆಲ ಅನಿರೀಕ್ಷಿತ ಸಮಸ್ಯೆ ಪರಿಹಾರ ಕಾಣಲಿದೆ.