ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಶ್ರಾವಣ ಶನಿವಾರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ನವಮಿ ತಿಥಿ, ವಿಶಾಖ ನಕ್ಷತ್ರ, ಆಗಸ್ಟ್ 2 ನೇ ತಾರೀಖಿನ ಶ್ರಾವಣ ಶನಿವಾರದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಶ್ರಾವಣ ಶನಿವಾರದಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ?

Profile Pushpa Kumari Aug 2, 2025 6:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿ, ವಿಶಾಖ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ(Daily Horoscope) ಹೇಗಿದೆ ಎಂದು ತಿಳಿಯಿರಿ. ಶ್ರಾವಣ ಶನಿವಾರ ಈ ದಿನ ಬಹಳ ಶುಭಕರವಾಗಿದ್ದು ಬ್ರಹ್ಮಚಾರಿಗಳಿಗೆ ಭೋಜನ ಕಾರ್ಯಕ್ರಮ ಏರ್ಪಡಿಸಿದರೆ ಇಂದು ಬಹಳ ಉತ್ತಮ. ಅದೇ ರೀತಿ ಇಂದು ಲಕ್ಷ್ಮೀ ಪೂಜೆಯನ್ನು ಮಾಡುವುದ ರಿಂದಲೂ ಬಹಳಷ್ಟು ಅದೃಷ್ಟವನ್ನು ಪಡೆಯಲಿದ್ದೀರಿ.

ಮೇಷ ರಾಶಿ: ಇಂದು ವಿಶಾಖ ನಕ್ಷತ್ರ ಇದ್ದು ಮೇಷ ರಾಶಿಯವರಿಗೆ ಅತ್ಯುತ್ತಮ ದಿನ‌ವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆದರೆ ನೀವು ಅಂದುಕೊಂಡ ರೀತಿಯಲ್ಲಿ ನೇರವಾಗಿ ಯಾವುದೇ ಕೆಲಸ ಕಾರ್ಯಗಳು ಆಗದೇ ಇರಬಹುದು. ಆದರೆ ಈ ಬಗ್ಗೆ ಗಮನವನ್ನು ವಹಿಸಬೇಕಾಗುತ್ತದೆ.

ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಬಹಳ ಉತ್ತಮ ವಾದ ದಿನವಾಗಿದೆ. ಅದೇ ರೀತಿ ಮನಸ್ಸಿಗೆ ನೆಮ್ಮದಿಯೂ ಇರಲಿದೆ. ಬೇರೆಯವರಿಂದ ನಿಮಗೆ ಸಹಕಾರ ಕೂಡ ಪ್ರಾಪ್ತಿಯಾಗಲಿದೆ. ಸಾಮಾಜಿಕ ಮವಾಗಿಯೂ ಜಯ ಉಂಟಾಗಲಿದ್ದು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಇಂದು ಸ್ವಲ್ಪ ಕಷ್ಟಕರವಾದ ದಿನ ವಾಗಲಿದೆ. ನಿಮ್ಮ ಗುರು, ಅಥವಾ ಹಿರಿ ಯರಿಂದ ನಿಮಗೆ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಬಹಳ ಉಷಾರಾಗಿರಿ‌.ಹಾಗೆಯೇ ಮಕ್ಕಳು ಕೂಡ ಇಂದು ಹೆಚ್ಚಿನ ಗಮನದಲ್ಲಿರುವುದು ಮುಖ್ಯ ವಾಗುತ್ತದೆ

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮನಸ್ಸಿಗೆ ಸ್ವಲ್ಪ ಖೇದ ಉಂಟಾಗಲಿದೆ. ಅಮ್ಮನ ಆರೋಗ್ಯದ ಬಗ್ಗೆ ಯಾವುದೋ ಒಂದು ಅಸಮಾಧಾನ ನಿಮಗೆ ಉಂಟಾಗಬಹುದು.ಇದನ್ನು ನಿಮ್ಮ ತಾಯಿಯೊಂದಿಗೆ ಹಂಚಿಕೊಳ್ಳದೆ‌ ಇರುವುದು ಉತ್ತಮ. ಅದೇ ರೀತಿ ನೀವು ಇಂದು ಜವಾಬ್ದಾರಿ ಯುತವಾಗಿ ಕೆಲಸ ಮಾಡಬೇಕಾಗಿತ್ತದೆ. ಬ್ಯುಸಿನೆಸ್‌ ಮಾಡುವವರಿಗೆ ಇಂದು ಸುಖಕರವಾದ ದಿನವಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಅತ್ಯುತ್ತಮ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇಂದು ಅಂದು ಕೊಂಡದೆಲ್ಲವೂ ಸಿದ್ದಿಯಾಗಲಿದೆ. ಬಂಧು ಭಾಂಧವರಿಂದ ಮನಸ್ಸಿಗೆ ನೆಮ್ಮದಿ ಇದ್ದರೂ ಅವರು ವಿಶೇಷ ವಾದ ವಿಚಾರ ವೊಂದನ್ನು ನಿಮ್ಮ ಬಳಿ ಹೇಳಲಿದ್ದು ನಿಮನ್ನು ಈ ಸುದ್ದಿ ಹೆಚ್ಚು ಕಾಡಬಹುದು.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಸುಖಕರವಾದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ .ಸಂಸಾರದಲ್ಲಿಯೂ ಸುಖ ಕಾಣಲಿದ್ದೀರಿ.ನೀವು ಇಂದು ವಿಶೇಷವಾಗಿ ಈಶ್ವರನ ಆರಾಧನೆಯನ್ನು ಮಾಡಬೇಕಾಗುತ್ತದೆ.ಅದೇ ರೀತಿ ಸಂಸಾರದ ಆರ್ಥಿಕ ಸುಭದ್ರತೆಯ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಈ ದಿನ ಬಹಳ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಕೂಡ ಸಿಗಲಿದೆ.ನೀವು ಹೇಳಿದ್ದೆಲ್ಲ ಇಂದು ನಡೆಯುತ್ತದೆ.ಆದರೂ ಕೂಡ ಯಾವುದೇ ವಿಚಾರವನ್ನು ನೀವು ಸರಿಯಾಗಿ ತಿಳಿದು ಕೊಳ್ಳ ಬೇಕಾಗುತ್ತದೆ. ಅದು ವೈಯಕ್ತಿಕ ವಿಚಾರ ಆಗಿರಲಿ ಅಥವಾ ಉದ್ಯೋಗವೇ ಆಗಿರಲಿ ಈ ಬಗ್ಗೆ ಸರಿಯಾಗಿ ಅರ್ಥೈಸಿಕೊಳ್ಳಲು ಪ್ರಯತ್ನ ಮಾಡಿ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಮಿಶ್ರವಾದ ದಿನವಾಗಲಿದೆ. ಮಧ್ಯಾಹ್ನ ವರೆಗೂ ನೆಮ್ಮದಿ ಸಿಗಲಿದ್ದು ಮಧ್ಯಾಹ್ನ ಬಳಿಕ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇದೆ. ಮಿತೃತ್ವ ಗಳಲ್ಲಿ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಬಿಸಿನೆಸ್ ,ಪಾರ್ಟ್ ನರ್ ಶೀಪ್ ವ್ಯವಹಾರ ಇತ್ಯಾದಿಗಳಿಗೆ ಕೈ ಹಾಕಲು ಇಂದು ಹೋಗಬೇಡಿ.

ಇದನ್ನು ಓದಿ:Daily Horoscope: ಚಿತ್ತ ನಕ್ಷತ್ರದ ಈ ದಿನ ಯಾವ ರಾಶಿಗೆ ಉತ್ತಮ ಫಲವಿದೆ?

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಈ ದಿನ ಬಹಳ ಪ್ರಶಸ್ತವಾದ ದಿನವಾಗಿದೆ.ಮನಸ್ಸಿಗೆ ನೆಮ್ಮದಿ ಇರಲಿದೆ. ಆದರೆ ಮಧ್ಯಾಹ್ನ ಬಳಿಕ ಸ್ವಲ್ಪ ಕಿರಿ ಕಿರಿ ಉಂಟಾಗಲಿದೆ.ಯಾವುದೇ ವಿಚಾರ ವಾಗಿ ಮುಖ್ಯ ನಿರ್ಧಾರ ಬೇಡ. ಎರಡು ಮೂರು ದಿನಗಳ ವರೆಗೆ ಸ್ವಲ್ಪ ಕಾಯುವುದು ಒಳ್ಳೆಯದು. ಆದರೆ ಮಿತ್ರರಿಂದ ಉತ್ತಮ ಸೌಹಾರ್ದ ನಿಮಗೆ ಸಿಗಲಿದೆ.

ಮಕರ ರಾಶಿ: ಮಕರ ರಾಶಿ ಅವರಿಗೆ ಈ ದಿನ ಉತ್ತಮ ದಿನ ವಾಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಇದ್ದು ಇಷ್ಟಾರ್ಥ ಸಿದ್ಧಿಯಾಗಲಿದೆ. ಮಿತ್ರರಿಂದ, ಗುಂಪು ಗಳಿಂದ ಧನ ಲಾಭ ಕೂಡ ಆಗಲಿದೆ.

ಕುಂಭರಾಶಿ: ಕುಂಭ ರಾಶಿ ಅವರಿಗೆ ಈ ದಿನ ಉತ್ತಮ ದಿನವಾಗಲಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಮನಸ್ಸಿಗೂ ನೆಮ್ಮದಿ ಪ್ರಾಪ್ತಿ ಯಾಗಲಿದೆ .ಎಲ್ಲರೂ ನಿಮ್ಮನ್ನು ಗುರುಸ್ಥಾನ ದಲ್ಲಿ ನೋಡಲಿದ್ದು ಹೆಚ್ಚಿನವರು ನಿಮ್ಮಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ.

ಮೀನ ರಾಶಿ: ಮೀನ ರಾಶಿ ಅವರಿಗೆ ಈ ದಿನ ಬಾಗ್ಯೋದಯ ವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ. ಆದರೆ ತಕ್ಷಣದಲ್ಲೆ ಅಂದು ಕೊಂಡಂತೆ ನೆರವೆರುವುದಿಲ್ಲ. ಹಾಗಾಗಿ ಧಾನ್ಯದಿಗಳನ್ನು ಹೆಚ್ಚು ಮಾಡಬೇಕು‌.ಆಧ್ಯಾತ್ಮಿಕತೆಯ ಬಗ್ಗೆ ಗಮನ ವಹಿಸಿ. ಭಗವಂತನ ಅನುಗ್ರಹ ದಿಂದ ಉತ್ತಮ ವಾಗಲಿದೆ. ದಿನ ನಿತ್ಯ ಶ್ಲೋಕ ಪಠಣಗಳನ್ನು ಅಭ್ಯಾಸ ಮಾಡಿಕೊಳ್ಳಿ.