ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ದಿನ ಭವಿಷ್ಯ- ಶತಭಿಷಾ ನಕ್ಷತ್ರದ ಈ ರಾಶಿಗೆ ಇಂದು ಭಾರೀ ಯಶಸ್ಸು!

ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ದ್ವಿತೀಯ ತಿಥಿ, ಶತಭಿಷಾ ನಕ್ಷತ್ರದ ಈ ದಿನ ಆಗಸ್ಟ್ 11ನೇ ತಾರೀಖಿನ ಸೋಮವಾರ‌ದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೀಗಿದೆ..

ಇಂದು ಈ ರಾಶಿಗೆ ಭಾರೀ ಯಶಸ್ಸು!

Horoscope

Profile Pushpa Kumari Aug 11, 2025 7:00 AM

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ, ದ್ವೀತಿಯ ತಿಥಿ ಶತಭಿಷಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ: ಇಂದು ಶತಭಿಷಾ ನಕ್ಷತ್ರ ಇದ್ದು ಮೇಷ ರಾಶಿ ಅವರಿಗೆ‌ ‌ಸುಖಕರವಾದ ದಿನವಾಗಲಿದೆ. ಮನಸ್ಸಿಗೂ ನೆಮ್ಮದಿ ಇದ್ದು ಮಿತ್ರರಿಂದ ಎಲ್ಲ ರೀತಿಯ ಸಹಕಾರ ಸಿಗಲಿದೆ. ಅದೇ ರೀತಿ ಮಿತ್ರರಿಂದಲೇ ಸಂತೋಷದ ದಿನವಾಗಲಿದ್ದು ಧನ ಆಗಮನ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಗುಂಪು ಕೆಲಸಗಳಲ್ಲಿ ವ್ಯಾಪಾರ, ವ್ಯವಹಾರ ಮಾಡುವವರಿಗೆ ಶುಭ ದಿನವಾಗಲಿದೆ

ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಆದರೂ ಕೂಡ ಮುಖ್ಯವಾದ ವಿಚಾರಗಳಲ್ಲಿ ಭಾವುಕತೆಯನ್ನು ಬಿಟ್ಟು ಕೆಲಸ ಮಾಡ ಬೇಕಾಗುತ್ತದೆ. ‌ಹಾಗಾಗಿ ಮಾತು ಕಡಿಮೆ ಮಾಡಿ ಬಹಳ ಜವಾಬ್ದಾರಿಯಾಗಿ ಕೆಲಸ ಮಾಡುವುದು ಉತ್ತಮವಾಗಿರುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇದ್ದವರಿಗೆ ಅತ್ಯುತ್ತಮ ಭಾಗ್ಯೋದಯವಾದ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದ್ದು ಹಿಂದಿನ ಮೂರು ದಿನಗಳಲ್ಲಿ ಮನಸ್ಸಿಗೆ ಬಹಳಷ್ಟು ಕ್ಷೇಷ ಇದ್ದು ಅದೆಲ್ಲವೂ ಮಾಯವಾಗಲಿದೆ. ಹಿರಿಯರ ಆಶೀರ್ವಾದದಿಂದ ಎಲ್ಲವೂ ಅಂದು ಕೊಂಡ ಕೆಲಸಗಳು ನೆರವೇರಲಿದೆ.

ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಮನಸ್ಸಿಗೆ ಸ್ವಲ್ಪ ಹಿಂಸೆ ಉಂಟಾಗುವ ದಿನ ಆಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ಬೇಕಾದಂತಹ ಸಲಹೆಗಳು ನಿಮಗೆ ಸಿಗುವುದಿಲ್ಲ. ಮನಸ್ಸಿಗೆ ಬೇಸರ ವಾಗುವಂತಹ ದಿನ ನಿಮಗೆ ಆಗಲಿದೆ. ಇವತ್ತು ಯಾವುದೇ ಒಂದು ಮುಖ್ಯ ನಿರ್ಧಾರಗಳನ್ನು ಕೈಗೊಳ್ಳಲು ಹೋಗಬೇಡಿ.

ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇಂದು ಉತ್ತಮವಾದ ದಿನ ಆಗಲಿದೆ. ಎಲ್ಲ ಕೆಲಸ ವಿಚಾರದಲ್ಲೂ ಜಯ ಪ್ರಾಪ್ತಿಯಾಗಲಿದೆ.‌ ದಾಂಪತ್ಯದಲ್ಲೂ ನೆಮ್ಮದಿ ಸಿಗಲಿದೆ. ನಿಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಇಂದು ಬಹಳ ಖುಷಿಯಿಂದ ದಿನ ಕಳೆಯುತ್ತೀರಿ.

ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೂ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಮನಸ್ಸಿಗೆ ತೃಪ್ತಿ ಸಿಗಲಿದೆ. ನೀವು ಇಂದು ಯಾವುದೇ ಕೆಲಸ ಮಾಡಿದರೂ ಅದು ನಿಮ್ಮ ಪರವಾಗಿ ಇರಲಿದೆ. ಇಂದು ಯಾವುದೇ ಕೆಲಸ ಕಾರ್ಯಗಳಿಗೆ ಶುಭ ಫಲ ಉಂಟಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ.

ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಸ್ವಲ್ಪ ಕ್ಷೇಷ ಕರವಾದ ದಿನವಾಗಲಿದೆ. ಪ್ರೇಮ ಪ್ರಕರಣ ಗಳು ದಾಂಪತ್ಯದಲ್ಲಿ ವಿರಸ ಉಂಟಾಗುವ ಸಾಧ್ಯತೆ ಇರುತ್ತದೆ. ಮಕ್ಕಳಿಂದ ಪೋಷಕರಿಗೆ ಸ್ವಲ್ಪ ಕಿರಿ ಕಿರಿ ಉಂಟಾಗುವ ಸಾಧ್ಯತೆ ಇರುತ್ತದೆ. ಬಿಸಿನೆಸ್ ವ್ಯವಹಾರಗಳಲ್ಲೂ ಅಷ್ಟು ಲಾಭ ದಾಯಕ ಉಂಟಾಗುವುದಿಲ್ಲ. ಹಣ ಕಳೆದುಕೊಳ್ಳುವ ಸಾಧ್ಯತೆ ಕೂಡ ಹೆಚ್ಚು ಇರಲಿದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಬಿಸಿನೆಸ್ ವ್ಯಾಪರ ಮಾಡೋರಿಗೆ ಕ್ಷೇಷ ಉಂಟಾಗುವ ಸಾಧ್ಯತೆ ಇರುತ್ತದೆ. ಯಾವುದೇ ಡೀಲ್ ವ್ಯವಹಾರದಲ್ಲಿ ತೊಂದರೆ ಇರಬಹುದು. ಹಾಗಾಗಿ ಬಹಳ ಜಾಗೂರಕ ರಾಗಿ ಇರಬೇಕು.

ಇದನ್ನು ಓದಿ:Daily Horoscope: ಬುಧನ ವಕ್ರಸ್ಥಾನದಿಂದ ಈ ರಾಶಿಯವರಿಗೆಲ್ಲ ಗಂಡಾಂತರ

ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನ ಆಗಲಿದೆ. ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಉತ್ತಮ ದಿನ ಅಗಲಿದೆ. ಬಹಳ ಮುಖ್ಯವಾದುದ್ದನ್ನು ಸಾಧಿಸಲು ಇಂದು ಯೋಗ್ಯ ರಾಗಿದ್ದೀರಿ. ಅದೇ ರೀತಿ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ ಯಾಗಲಿದೆ.

ಮಕರ ರಾಶಿ: ಮಕರ ರಾಶಿ ಅವರು ಸಂಸಾರದ ವಿಚಾರವಾಗಿ ಹೆಚ್ಚಿನ ಗಮನ‌ ನೀಡ ಬೇಕಾಗುತ್ತದೆ. ಹಣಕಾಸಿನ ವೆಚ್ಚ ವಾಗುವಂತಹ ಯಾವುದೊ ಒಂದು ಕೆಲಸ ಅಥವಾ ನಿರ್ಧಾರ ಕೈಗೊಳ್ಳುವ ಸಂದರ್ಭ ಬರಬಹುದು. ಯಾವುದೇ ಒಂದು ಟ್ರಿಪ್ ಇತ್ಯಾದಿ ಕೈಗೊಳ್ಳುವ ಸಾದ್ಯತೆ ಇದೆ. ಮನೆ ಯಲ್ಲೂ ಐಷಾರಾಮಿ ವಸ್ತುಗಳಿಗೆ ಖರ್ಚು ಮಾಡಬಹುದು.

ಕುಂಭರಾಶಿ: ಕುಂಭ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಲಿದೆ‌. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ಬಹಳ ನೆಮ್ಮದಿ ಪ್ರಾಪ್ತಿಯಾಗಲಿದೆ. ಎರಡು ಮೂರು ದಿನಗಳಿಂದ ಇದ್ದ ನೋವುಗಳು ಎಲ್ಲವೂ ಮಯವಾಗಲಿದೆ. ಮುಂದಿನ ಕೆಲಸ ಕಾರ್ಯಗಳಿಗೆ ಮಾರ್ಗದರ್ಶನ ಕೂಡ ಇಂದು ಸಿಗಬಹುದು.

ಮೀನ ರಾಶಿ: ಮೀನ ರಾಶಿ ಅವರಿಗೆ ಮನಸ್ಸಿಗೆ ಕ್ಲೇಷ ಉಂಟಾಗುವ ಸಾಧ್ಯತೆ ಇರುತ್ತದೆ‌. ಯಾವುದೇ ಮುಖ್ಯ ನಿರ್ಧಾರಗಳು ಇಂದು ಬೇಡ. ಕೆಲವು ಮಿತ್ರತ್ವ ಗಳಲ್ಲೂ ಒಡಕು ಕಾಣುವ ಸಾಧ್ಯತೆ ಇರುತ್ತದೆ. ಇದರಿಂದ ಮನಸ್ಸಿಗೂ ಬೇಸರವಾಗಬಹುದು..ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.