Vastu Tips: ಮನೆಗೆ ಮನಿ ಪ್ಲಾಂಟ್ ತರಬೇಕೆಂದಿದ್ದೀರಾ? ಇದು ತಿಳಿದಿರಲಿ
ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಸಮೃದ್ಧಿಯಾಗುತ್ತದೆ ಎಂದು ಹೇಳುವುದನ್ನು ಕೇಳಿ ಮನಿ ಪ್ಲಾಂಟ್ ತರಲು ಹೋಗಬೇಡಿ. ಯಾಕೆಂದರೆ ಇದನ್ನು ಮುನ್ನ ತಿಳಿದುಕೊಂಡಿರಬೇಕಾದ ಕೆಲವು ಸಂಗತಿಗಳಿವೆ. ಅವು ಯಾವುದು, ವಾಸ್ತು ನಿಯಮಗಳು ಈ ಬಗ್ಗೆ ಏನು ಹೇಳುತ್ತವೆ ಇಲ್ಲಿದೆ ಮಾಹಿತಿ.

-

ಬೆಂಗಳೂರು: ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಮನಿ ಪ್ಲಾಂಟ್ (Money plant) ಗಿಡವನ್ನು ನೆಟ್ಟಿರುತ್ತಾರೆ. ಇದು ಕೇವಲ ಸೌಂದರ್ಯದ ಪ್ರತೀಕವಲ್ಲ. ವಾಸ್ತು ಶಾಸ್ತ್ರದ (Vastu shastra) ಪ್ರಕಾರ ಇದು ಸಮೃದ್ಧಿ, ಸಾಮರಸ್ಯ ಮತ್ತು ಸಕಾರಾತ್ಮಕ ಕಂಪನಗಳನ್ನು ಆಕರ್ಷಿಸುವ ಸಸ್ಯ. ಇದನ್ನು ಮನೆಗೆ ತರುವ ಮೊದಲು ವಾಸ್ತು (Vastu tips) ಮಾರ್ಗಸೂಚಿಗಳನ್ನು ಪಾಲಿಸುವುದು ಬಹುಮುಖ್ಯ ಎನ್ನುತ್ತಾರೆ ತಜ್ಞ ಅಶುತೋಷ್. ಮನೆಯ ಮೂಲೆಯಲ್ಲಿ ನೆಡುವ ಈ ಸಸ್ಯ ಮನೆಗೆ ಹೆಚ್ಚಿನ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಎನ್ನುತ್ತಾರೆ ಅವರು.
ಮನಿ ಪ್ಲಾಂಟ್ ಸಂಪೂರ್ಣ ಜಾಗದ ಶಕ್ತಿಯನ್ನು ಬದಲಾಯಿಸುತ್ತದೆ. ಆದರೆ ಇದಕ್ಕಾಗಿ ಕೆಲವು ವಾಸ್ತು ನಿಯಮಗಳನ್ನು ಅನುಸರಿಸಬೇಕು.
ಮನಿ ಪ್ಲಾಂಟ್ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದು ಸಂಪತ್ತು ಮತ್ತು ಯಶಸ್ಸನ್ನು ಆಹ್ವಾನಿಸುತ್ತದೆ. ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಇಡಕೂಡದು.
ಮನಿ ಪ್ಲಾಂಟ್ ಅನ್ನು ಶುದ್ಧ ನೀರಿನಿಂದ ತುಂಬಿದ ಗಾಜಿನ ಬಾಟಲಿ ಅಥವಾ ಜಾರ್‌ನಲ್ಲಿ ಬೆಳೆಸಬಹುದು. ನಿಯಮಿತವಾಗಿ ಈ ನೀರನ್ನು ಬದಲಾಯಿಸಬೇಕು. ಇದರ ಬೇರುಗಳು ನೀರಿನಲ್ಲಿ ಮುಳುಗಿರಬೇಕು.
ಈ ಸುದ್ದಿಯನ್ನೂ ಓದಿ: Vastu Tips: ಮನೆಯ ಸುಖ, ಶಾಂತಿ ಮೇಲೆ ಪ್ರಭಾವ ಬೀರುವ ಗಿಡಗಳ ಬಗ್ಗೆ ತಿಳಿದಿರಲಿ
ಅಡುಗೆಮನೆಯಲ್ಲಿ ಮನಿ ಪ್ಲಾಂಟ್‌ಗಳನ್ನು ಒಲೆಯ ಬಳಿ ಇಡಕೂಡದು. ಅಡುಗೆಮನೆಯ ಕಿಟಕಿ ಅಥವಾ ಸಿಂಕ್ ಬಳಿ ಇಡಬಹುದು. ಸ್ನಾನಗೃಹಗಳು ಮನಿ ಪ್ಲಾಂಟ್ ಇಡಲು ಸೂಕ್ತ ಸ್ಥಳವಲ್ಲ.
ಮನಿ ಪ್ಲಾಂಟ್ ಇಡಲು ಉತ್ತರ ದಿಕ್ಕು ಸೂಕ್ತ. ಇದು ವೃತ್ತಿಯಲ್ಲಿ ಬೆಳವಣಿಗೆ ಮತ್ತು ಹಣದ ಹರಿವಿಗೆ ಸಹಾಯ ಮಾಡುತ್ತದೆ. ಆದರೆ ಸಸ್ಯವು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು.
ಮನಿ ಪ್ಲಾಂಟ್ ಅನ್ನು ಮನೆಯೊಳಗೆ ಇಡಿ. ಮುಖ್ಯ ಬಾಗಿಲಿನ ಹೊರಗೆ ಇಡಕೂಡದು. ಇದರಲ್ಲಿ ಹೆಚ್ಚು ಹಳದಿ ಅಥವಾ ಒಣಗಿದ ಎಲೆಗಳಿದ್ದರೆ ತೆಗೆದುಹಾಕಿ. ಮನಿ ಪ್ಲಾಂಟ್ ಕೆಳಮುಖವಾಗಿ ಅಲ್ಲ, ಮೇಲಕ್ಕೆ ಬೆಳೆಯಬೇಕು. ಇದು ಆರ್ಥಿಕ ಬೆಳವಣಿಗೆಯನ್ನು ಸೂಚಿಸುತ್ತದೆ. ಅಗತ್ಯವಿದ್ದರೆ ಕೋಲನ್ನು ಬಳಸಿ.
ಮನಿ ಪ್ಲಾಂಟ್ ಅನ್ನು ಯಾರಿಗೂ ಉಡುಗೊರೆಯಾಗಿ ಕೊಡಬಾರದು. ಇದರಿಂದ ಅದೃಷ್ಟ ಹೊರಹೋಗುತ್ತದೆ. ಮನಿ ಪ್ಲಾಂಟ್ ಅನ್ನು ವಾಸದ ಕೋಣೆಯಲ್ಲಿ, ಕಿಟಕಿಯ ಬಳಿ ಅಥವಾ ಕೆಲಸದ ಸ್ಥಳದಲ್ಲಿ ಇಡುವುದು ಉತ್ತಮ ಆಯ್ಕೆ.