Daily Horoscope: ಬುಧನ ವಕ್ರಸ್ಥಾನದಿಂದ ಈ ರಾಶಿಯವರಿಗೆಲ್ಲ ಗಂಡಾಂತರ
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಪ್ರತಿಪದ ತಿಥಿ, ಧನಿಷ್ಠ ನಕ್ಷತ್ರದ ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Horoscope

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಶ್ರಾವಣ ಮಾಸದ ಶುಕ್ಲಪಕ್ಷದ ಪ್ರತಿಪದ ತಿಥಿ ದನಿಷ್ಠ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಭವಿಷ್ಯ (Daily Horoscope) ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಬುಧ ಕಟಕ ರಾಶಿಯಲ್ಲಿ ವಕ್ರ ತ್ಯಾಗ ಮಾಡಲಿದ್ದು ಮೇಷ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನೆಯಲ್ಲಿ ನೆಮ್ಮದಿಯ ಜತೆಗೆ ಮನಸ್ಸಿಗೂ ನೆಮ್ಮದಿ ಇರಲಿದೆ. ಅದೇ ರೀತಿ ಸಂಸಾರದಲ್ಲಿ ಸುಖ ಪ್ರಾಪ್ತಿಯಾಗಲಿದೆ. ವ್ಯವಹಾರಗಳಲ್ಲಿ ಇರುವವರಿಗೆ ಶುಭ ಫಲ ಇರಲಿದೆ. ಧನಾಗಮನವಾಗುವ ಸಾಧ್ಯತೆ ಕೂಡ ಇರುತ್ತದೆ. ಕೋರ್ಟ್ ಕೇಸ್‌ಗಳಲ್ಲಿ ಹೊರಾಡುತ್ತಿರುವವರಿಗೆ ಇಂದು ಪರಿಹಾರ ಸಿಗಲಿದೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಇಂದು ಮಿಶ್ರ ಫಲ ಸಿಗಲಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಕೆಲವರಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಭಾವನೆಗಳ ಮೇಲೆ ಕೆಲವರು ತೊಂದರೆಯನ್ನು ಹೇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಾತು ಕಡಿಮೆ ಮಾಡಿ ಬಹಳ ಜವಾಬ್ದಾರಿಯಾಗಿ ಕೆಲಸ ಮಾಡುವುದು ಉತ್ತಮ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ. ನಿಮಗೆ ಲಾಭ ತಂದು ಕೊಡುವ ದಿನ ಇದಾಗಲಿದ್ದು, ಮನಸ್ಸಿಗೆ ನೆಮ್ಮದಿ ಕೂಡ ಸಿಗಲಿದೆ. ಸಂಸಾರದಲ್ಲಿ ನೆಮ್ಮದಿಯ ಜತೆಗೆ ಧನಾಗಮನವಾಗುವ ಸಾಧ್ಯತೆ ಇದೆ. ಸಂಸಾರದಲ್ಲೂ ಶುಭ ಕಾರ್ಯ ಗಳು ನಡೆಯುವ ಸಾಧ್ಯತೆ ಇದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಮಿಶ್ರ ಫಲ ಇರಲಿದೆ. ಕಟಕ ಸ್ಥಾನದಲ್ಲಿ ಬುಧ ವಕ್ರ ಮಾಡುವುದರಿಂದ ಕೆಲವರಿಗೆ ಒಳ್ಳೆಯದು. ಆದರೆ ಇನ್ನು ಕೆಲವರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಮಾತಿನಲ್ಲಿ ಗಮನ ಇದ್ದು ವಿವೇಚನೆಯಿಂದ ಕೆಲಸ ಮಾಡಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ವಕ್ರ ತ್ಯಾಗದಿಂದ ವಿಷಮ ಫಲ ಪ್ರಾಪ್ತಿ ಆಗಲಿದೆ. ಮಾತುಗಳಲ್ಲಿ ತೊಂದರೆ ಉಂಟಾಗಲಿದ್ದು ಮಿತ್ರತ್ವಗಳಲ್ಲಿ ಒಡಕು ಉಂಟಾ ಗುವ ಸಾಧ್ಯತೆ ಇರುತ್ತದೆ. ವ್ಯವಹಾರದಲ್ಲಿ ಕುಸಿತ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವ್ಯವಹಾರ ಉದ್ಯಮ ಮಾಡುವವರು ಈ ಬಗ್ಗೆ ಹುಷಾರಾಗಿ ಇರುವುದು ಅಗತ್ಯ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಶುಭ ಫಲ ಸಿಗಲಿದ್ದು, ಮನಸ್ಸಿಗೆ ನೆಮ್ಮದಿ ಇರಲಿದೆ. ಇಷ್ಟಾರ್ಥ ಸಿದ್ದಿಯಾಗಲಿದ್ದು, ಧನಾಗಮನ ಆಗುವ ಸಾದ್ಯತೆ ಕೂಡ ಇರುತ್ತದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ಜವಾಬ್ದಾರಿ ಹೆಚ್ಚಾಗಲಿದ್ದು, ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮಗೆ ಬೇಕಾದವರಿಂದ ಯಾವುದೇ ರೀತಿಯ ಸಹಕಾರ ಇಂದು ಸಿಗುವುದಿಲ್ಲ. ಆದ್ದರಿಂದ ಮನಸ್ಸಿನಲ್ಲಿ ಬಹಳಷ್ಟು ನೋವು ಉಂಟು ಮಾಡುವಂತಹ ಸಂದರ್ಭ ನಿಮಗೆ ಬರಬಹುದು.
ಇದನ್ನು ಓದಿ:Daily Horoscope: ಪೂರ್ವಾಷಾಡ ನಕ್ಷತ್ರದಿಂದ ಇಂದು ಯಾವ ರಾಶಿಗೆ ಉತ್ತಮ ಫಲವಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಶುಭ ಫಲ ಇದ್ದು, ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಇತರರು ನಿಮಗೆ ಮನಸ್ಸಿಗೆ ಸಮಾಧಾನಕಾರ ವಿಚಾರಗಳನ್ನು ತಂದು ಕೊಡಲಿದ್ದಾರೆ. ಅದೇ ರೀತಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಇದ್ದ ಅಡೆತಡೆಗಳು ಮಾಯವಾಗಲಿದೆ. ಮುಂದಿನ ಯಾವುದೇ ಕೆಲಸಕ್ಕೂ ನಿಮಗೆ ಉತ್ತಮ ಮಾರ್ಗದರ್ಶನ ಕೂಡ ಸಿಗಲಿದೆ.
ಮಕರ ರಾಶಿ: ಮಕರ ರಾಶಿಯವರಿಗೆ ಮನಸ್ಸಿಗೆ ಸ್ವಲ್ಪ ಕ್ಷೇಶ ಉಂಟಾಗುವ ಸಾಧ್ಯತೆ ಇರುತ್ತದೆ. ಮುಖ್ಯವಾದ ಕೆಲವು ವಿಚಾರಗಳಲ್ಲಿ ನಿಮಗೆ ಫಲಗಳು ಪ್ರಾಪ್ತಿಯಾಗುವುದಿಲ್ಲ. ನಿಮ್ಮ ಪ್ರೀತಿ ಪಾತ್ರರು ಆಡಿದ ಮಾತಿನಿಂದ ವೈಮನಸ್ಸು ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಅತ್ಯುತ್ತಮವಾದ ಫಲವಾಗಿದ್ದು ಉತ್ತಮ ದಿನವಾಗಲಿದೆ. ಅದೇ ರೀತಿ ಸಾಮಾಜಿಕ ವಿಚಾರಗಳಲ್ಲಿ ನಿಮಗೆ ಗೆಲುವು ಪ್ರಾಪ್ತಿಯಾಗಲಿದೆ. ನಿಮ್ಮ ಮಾತಿನಿಂದಲೇ ಇಂದು ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಮನಸ್ಸಿಗೆ ಕ್ಷೇಶ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಬುದ್ದಿ ಅಥವಾ ಕ್ರಿಯಾತ್ಮಕತೆ ಈ ವಿಚಾರದಲ್ಲಿ ಸ್ವಲ್ಪ ತೊಂದರೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದರೂ ಕಾರ್ಯ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಿದ್ದು ಕೆಲಸಗಳನ್ನು ಮುಂದುವರಿಸಿ ಕೊಂಡು ಹೋಗಬೇಕಾಗುತ್ತದೆ. ನಿತ್ಯ ಭಗವಂತನ ಧ್ಯಾನ ಹಾಗೂ ಶ್ಲೋಕ ಪಠಣವನ್ನು ಓದುವ ಅಭ್ಯಾಸ ಮಾಡಿಕೊಳ್ಳಿ.