ಬೆಂಗಳೂರು: ಇಂದು ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾ ಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣೆ ಪಕ್ಷದ ಕೃತಿಕಾ ನಕ್ಷತ್ರದ ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಈ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಲಿದೆ. ನಿಮ್ಮ ಮುಖ್ಯವಾದ ಕೆಲಸ ಕಾರ್ಯದಲ್ಲಿ, ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಇನ್ನು ಒಂದು ತಿಂಗಳವರೆಗೆ ನೀವು ಸ್ವಲ್ಪ ಜಾಗೃತೆಯಿಂದ ಇರಬೇಕು. ಬೇರೆಯವರ ಸಹಕಾರ ದೊಂದಿಗೆ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣಬಹುದು.
ವೃಷಭ ರಾಶಿ: ವೃಷಭ ರಾಶಿಯಲ್ಲಿ ಇರುವವರಿಗೆ ಈ ಗೋಚರ ಅತ್ಯುತ್ತಮವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಆತ್ಮವಿಶ್ವಾಸ ಚೆನ್ನಾಗಿ ಇರಲಿದೆ. ಶತ್ರುಗಳನ್ನು ಸೋಲಿಸುವಂತಹ ಆತ್ಮ ವಿಶ್ವಾಸ ನಿಮಗೆ ಬರಲಿದೆ.ಆದರೆ ಹೆಚ್ಚಿನ ಆತ್ಮವಿಶ್ವಾಸ ದಿಂದ ವೈರಿಗಳನ್ನು ಕೆದುಕಲು ಹೋಗಬೇಡಿ. ನಿಮ್ಮ ಪಾಡಿಗೆ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಗಳಿಸಿ. ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೂ ಇಂದು ಸ್ವಲ್ಪ ಕಷ್ಟಕರವಾದ ದಿನ ಆಗಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಇಂದು ತಪ್ಪು ಭಾವನೆಗಳು ಮೂಡಬಹುದು. ದಾಂಪತ್ಯದಲ್ಲಿ ವೈ ಮನಸ್ಸು ಮೂಡಬಹುದು. ಬಿಸೆನೆಸ್ ,ವ್ಯವಹಾರದಲ್ಲಿ ಜಾಗೃತೆ ವಹಿಸಿ. ಹಣ ಕಳೆದು ಕೊಳ್ಳುವ ಸಾಧ್ಯತೆ ಕೂಡ ಹೆಚ್ಚು ಇರಲಿದೆ. ಒಂದು ತಿಂಗಳ ವರೆಗೆ ಕುಜ ಗೋಚರ ನಿಮಗೆ ಅಷ್ಟೊಂದು ಅನುಕೂಲ ವಾಗಿಲ್ಲ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಕಷ್ಟಕರವಾದ ಗೋಚರ ಆಗಲಿದೆ. ಮನೆ, ಆಸ್ತಿ ಪಾಸ್ತಿ ವಿಚಾರದಲ್ಲಿ ಅತೀ ಹೆಚ್ಚಿನ ಕ್ಷೇಷ ಉಂಟಾಗುತ್ತದೆ. ಮನೆಯವರಿಂದ ದೂರವಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಎಲ್ಲರ ಜೊತೆ ಅತೀ ಬಾಂಧವ್ಯದಿಂದ ಇರಲು ಪ್ರಯತ್ನಿಸಿ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಇದು ಅತ್ಯುತ್ತಮವಾದ ಸಮಯವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ನೀವು ಮಾಡಿದ ಕೆಲಸಗಳಿಗೆ ಜಯ ಪ್ರಾಪ್ತಿಯಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು, ಗೌರವ ಎಲ್ಲವೂ ಪ್ರಾಪ್ತಿ ಯಾಗುತ್ತದೆ. ರೇಡಿಯೋ, ಪತ್ರಿಕೋದ್ಯಮ, ಭಾಷಣಕಾರರು ಇತ್ಯಾದಿ ಕೆಲಸಗಾರರಿಗೆ ಅತೀ ಉತ್ತಮವಾದ ದಿನ ಆಗಲಿದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕುಜ ನಿಮ್ಮ ದ್ವೀತಿಯ ಭಾಗಕ್ಕೆ ಬರುವುದರಿಂದ ಸಂಸಾರದಲ್ಲಿ ಕಷ್ಟ ವಾಗಲಿದೆ. ಹಣಕಾಸಿನ ಖರ್ಚು,ವೆಚ್ಚಗಳು ಕೂಡ ಇಂದು ಜಾಸ್ತಿ ಯಾಗಬಹುದು. ಅದೇ ರೀತಿ ಮನಸ್ಸಿನಲ್ಲಿ ಬೇಸರ ಹೆಚ್ಚಾಗಬಹುದು, ಮನೆಯಲ್ಲಿ ವೈ ಮನಸ್ಸು ಉಂಟಾಗಬಹುದು. ಆದರೆ ಹೆಚ್ಚಿನ ಮಾತು, ವಾದಗಳನ್ನು ಇಂದು ಕಡಿಮೆ ಮಾಡಿಕೊಳ್ಳಬೇಕು.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ನಿಮ್ಮ ರಾಶಿಯಲ್ಲೆ ಕುಜ ಬರುವುದರಿಂದ ಮುಂಗೋಪ ಅತೀ ಹೆಚ್ಚು ಆಗುತ್ತದೆ. ಸಣ್ಣ ಸಣ್ಣ ವಿಚಾರಕ್ಕೂ ಬೇಸರ ಒಳಗಾಗಬಹುದು. ಯಾವುದೇ ವಿಚಾರ ದಲ್ಲಿ ಮನಸ್ಸಿಗೆ ನೆಮ್ಮದಿ ಸಿಗುವುದು ಇಲ್ಲ. ಧ್ಯಾನ ,ಶ್ಲೋಕ ಇತ್ಯಾದಿ ಪಠಣ ಮಾಡುವ ಮೂಲಕ ದಿನ ಕಳೆದರೆ ಉತ್ತಮ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕುಜ ವ್ಯಯ ಸ್ಥಾನಕ್ಕೆ ಬರುವುದರಿಂದ ಗೋಚರ ಅಷ್ಟು ಉತ್ತಮವಾಗಿಲ್ಲ. ಇಂದು ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಮಿತ್ರರು ದೂರವಾಗುವ ಸಾಧ್ಯತೆ ಇರುತ್ತದೆ. ಮನೆಯಲ್ಲಿ ವಾದ- ವಿವಾದಗಳು ಆಗುವ ಸಾಧ್ಯತೆ ಇರುತ್ತದೆ. ಬೇರೆಯವರ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಕಾರ್ಯಗಳನ್ನು ಮಾಡಿ..ಧಾನ್ಯದಿಗಳಿಂದ ಇಂದು ಎಲ್ಲಾ ಸಮಸ್ಯೆಗೆ ಮುಕ್ತಿ ಪಡೆಯಬಹುದು.
ಇದನ್ನು ಓದಿ:Vastu Tips: ಮಲಗುವಾಗ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು ಯಾಕೆ ಗೊತ್ತೆ?
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಅತೀ ಉತ್ತಮವಾದ ಗೋಚರ ಆಗಲಿದೆ. ಕುಜ ನಿಮ್ಮ ಲಾಭ ಸ್ಥಾನಕ್ಕೆ ಬರುತ್ತಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ನಿಮ್ಮ ಮಿತ್ರರಿಂದಲೂ ಉತ್ತಮವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ಸಂತೋಷ ಕೂಡ ಇರುತ್ತದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಅತೀ ಉತ್ತಮ ವಾಗಲಿದ್ದು ಅತೀ ಹೆಚ್ಚಿನ ಯಶಸ್ಸು ಅನ್ನು ಕಾಣುತ್ತೀರಿ. ಕಾರ್ಯ ಕ್ಷೇತ್ರದಲ್ಲಿ ಪ್ರಮೋಶನ್ ಇತ್ಯಾದಿ ಪ್ರಾಪ್ತಿಯಾಗುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಬಹಳ ಉತ್ತಮವಾದ ಹೆಗ್ಗಳಿಕೆಗೆ ನಿಮಗೆ ಪ್ರಾಪ್ತಿಯಾಗುತ್ತದೆ.
ಕುಂಭ ರಾಶಿ: ಕುಂಭ ರಾಶಿಗೆ ನಿಮ್ಮ ಭಾಗ್ಯ ಸ್ಥಾನಕ್ಕೆ ಕುಜ ಬರಲಿದ್ದು ನಿಮ್ಮ ಮನಸ್ಸಿಗೆ ಇದ್ದ ಕ್ಷೇಷ ಎಲ್ಲವೂ ಮಾಯವಾಗುತ್ತದೆ. ಮೂರು ತಿಂಗಳಿನಿಂದ ಮಿತೃತ್ವ, ದಾಂಪತ್ಯ ದಲ್ಲಿ ಒಡಕು ಇತ್ತು. ಅದೆಲ್ಲವೂ ಪರಿಹಾರವಾಗಲಿದ್ದು ಸೌಹಾರ್ದತೆಯಿಂದ ಮುಂದುವರಿಯುತ್ತೀರಿ.
ಮೀನರಾಶಿ: ಮೀನರಾಶಿಯವರಿಗೆ ಅಷ್ಟಮ ಸ್ಥಾನಕ್ಕೆ ಕುಜ ಬರಲಿದ್ದು ಮನಸ್ಸಿಗೆ ಸ್ವಲ್ಪ ಜಾಸ್ತಿ ಕ್ಷೇಷ ಉಂಟಾಗಲಿದೆ. ಮುಖ್ಯವಾದ ವಿಚಾರಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುವುದಿಲ್ಲ. ನಿಮ್ಮನ್ನು ಕೀಳಾಗಿ ಇತರರು ನೋಡಬಹುದು. ಅಷ್ಟೇ ಅಲ್ಲದೆ ಕಾರ್ಯ ಕ್ಷೇತ್ರದಲ್ಲೂ ತೊಂದರೆ ಉಂಟಾಗ ಬಹುದು. ಇದಕ್ಕಾಗಿ ಎಲ್ಲ ರಾಶಿಯವರು ನಿತ್ಯ ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು.