ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮಲಗುವಾಗ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು ಯಾಕೆ ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಹಾಸಿಗೆಯ ಕೆಳಗೆ ಇಡಬಾರದು. ಇದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ. ಪೊರಕೆಯನ್ನು ಮನೆಯ ನಿರ್ದಿಷ್ಟವಾದ ಜಾಗದಲ್ಲೇ ಇಡಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಪೊರಕೆಯನ್ನು ಹಾಸಿಗೆಯ ಕೆಳಗೆ ಇಡುವುದರಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಪೊರಕೆಯನ್ನು ಹಾಸಿಗೆ ಕೆಳಗೆ ಇಡಬೇಡಿ

-

ಬೆಂಗಳೂರು: ಪೊರಕೆಯನ್ನು (Broom) ಮನೆಯಲ್ಲಿ ನಿಗದಿಪಡಿಸಿದ ಸ್ಥಳದಲ್ಲೇ ಇಡಬೇಕು. ಎಲ್ಲೆಂದರಲ್ಲಿ ಇಟ್ಟರೆ ತೊಂದರೆ ತಪ್ಪುವುದಿಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ (Vastu Shastra). ಪೊರಕೆಯನ್ನು (Vastu about broom) ಇಡಲು ಕೆಲವು ವಿಶೇಷ (Vastu rules) ನಿಯಮಗಳಿವೆ. ಇದನ್ನು ತಿಳಿದುಕೊಂಡಿರುವುದು ಬಹುಮುಖ್ಯ. ನಕಾರಾತ್ಮಕ (Negative) ಪರಿಣಾಮ ನಮ್ಮ ಜೀವನದ ಮೇಲೆ ಬೀರದೇ ಇರುವಂತೆ ಮಾಡಲು ಪೊರಕೆಯನ್ನು ಮನೆಯ ಸರಿಯಾದ ಸ್ಥಳ (vastu place for broom) ಮತ್ತು ರೀತಿಯಲ್ಲಿ ಇಡುವುದು ಬಹುಮುಖ್ಯ. ಯಾಕೆಂದರೆ ಪೊರಕೆಯು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮನೆಯ ಕೊಳಕು ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವ ಪೊರಕೆಯನ್ನು ಕೆಲವರು ಸಾಮಾನ್ಯವಾಗಿ ಯಾರಿಗೂ ಕಾಣದಿರಲಿ ಎಂದು ಹಾಸಿಗೆಯ ಕೆಳಗೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರಗಳ ಪ್ರಕಾರ ಇದು ಶುಭವಲ್ಲ. ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತದೆ ಎನ್ನುತ್ತಾರೆ ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ.

ಪೊರಕೆಯನ್ನು ಸ್ವಚ್ಛಗೊಳಿಸುವ ಸಾಧನವೆಂದು ಪರಿಗಣಿಸುವುದು ಮಾತ್ರವಲ್ಲ ಅದನ್ನು ಲಕ್ಷ್ಮೀ ದೇವಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಪೊರಕೆ ಮನೆಯಿಂದ ಕೊಳೆಯನ್ನು ತೆಗೆದುಹಾಕುತ್ತದೆ ಮತ್ತು ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಆಹ್ವಾನಿಸುತ್ತದೆ.

ಪೊರಕೆಯನ್ನು ಗೌರವಿಸದ ಮನೆಯಲ್ಲಿ ಬಡತನ ಉಂಟಾಗುತ್ತದೆ. ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತದೆ. ಪೊರಕೆಯನ್ನು ಕಾಲುಗಳಿಂದ ಮುಟ್ಟಬಾರದು, ಅದರ ಮೇಲೆ ಕುಳಿತುಕೊಳ್ಳಬಾರದು, ತಪ್ಪಾದ ಸ್ಥಳದಲ್ಲಿ ಅವುಗಳನ್ನು ಇದಕೂಡದು ಎನ್ನುತ್ತದೆ ವಾಸ್ತು ಶಾಸ್ತ್ರ.

ಹಾಸಿಗೆಯ ಕೆಳಗೆ ಏಕೆ ಇಡಬಾರದು?

ಹಾಸಿಗೆ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಮತ್ತು ಶಾಂತಿಯನ್ನು ನೀಡುವ ಸ್ಥಳ. ಪೊರಕೆಯನ್ನು ಹಾಸಿಗೆಯ ಕೆಳಗೆ ಇಟ್ಟರೆ ಅಲ್ಲಿಂದ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ. ಅದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಇದು ನಿದ್ರಾಹೀನತೆ, ಆಯಾಸ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ಪೊರಕೆಯನ್ನು ಹಾಸಿಗೆಯ ಕೆಳಗೆ ಇಡುವುದರಿಂದ ಮನೆಯಲ್ಲಿ ಬಡತನ ಉಂಟಾಗುತ್ತದೆ. ಹಾಸಿಗೆಯ ಕೆಳಗೆ ಪೂರಕೆ ಇಡುವುದು ಸಮೃದ್ಧಿಯನ್ನು ನಿಲ್ಲಿಸುತ್ತದೆ. ಇನ್ನು ದಂಪತಿಯ ಹಾಸಿಗೆಯ ಕೆಳಗೆ ಪೊರಕೆ ಇಡುವುದರಿಂದ ಕಲಹಗಳು ಹೆಚ್ಚಾಗುತ್ತವೆ. ಇದು ಹೊಂದಾಣಿಕೆ, ಪ್ರೀತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಸಿಗೆಯ ಕೆಳಗೆ ಪೊರಕೆ ಇಡುವುದರಿಂದ ಪೊರಕೆಯಲ್ಲಿ ಧೂಳು ಮತ್ತು ಕೊಳಕು ಸಂಗ್ರಹವಾಗುತ್ತದೆ. ಮನೆಯ ಇತರ ಭಾಗಗಳಲ್ಲಿ ಅದನ್ನು ಬಳಸಿದಾಗ ಕೊಳಕು ಮನೆಯಾದ್ಯಂತ ಹರಡುತ್ತದೆ. ಇದು ಮನೆಯ ಜನರಲ್ಲಿ ಉದ್ವಿಗ್ನತೆ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Vastu Tips: ಮಲಗುವಾಗ ಈ ವಸ್ತುಗಳನ್ನು ತಲೆಯ ಬಳಿ ಇಡಬೇಡಿ

ಪೊರಕೆ ಎಲ್ಲಿ ಇಡಬೇಕು?

ಪೊರಕೆಯನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಪೊರಕೆಯನ್ನು ಯಾವಾಗಲೂ ಮಲಗಿಸಿ ಇಡಬೇಕು. ಅದನ್ನು ಯಾರೂ ನೋಡದ ಸ್ಥಳದಲ್ಲಿ ಇರಿಸಬೇಕು. ಪೊರಕೆಯನ್ನು ತುಳಿಯಬಾರದು. ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ.