ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಎಪ್ರಿಲ್ 29, 2026: ಉದ್ಯೋಗದಲ್ಲಿ ಬಡ್ತಿ, ಧನಾಗಮನ; ಇಂದು ಅದೃಷ್ಟದ ದಿನ

Horoscope Today April 29: 2026ರ 29 ಏಪ್ರಿಲ್ – ಬುಧವಾರ. ತಿಥಿ: ಶುಕ್ಲ ಪಕ್ಷ ಏಕಾದಶಿ (ಮಧ್ಯಾಹ್ನದ ನಂತರ ಮುಂದುವರಿಯುತ್ತದೆ). ನಕ್ಷತ್ರ: ಉತ್ತರ ಫಾಲ್ಗುನಿ (ನಂತರ ಹಸ್ತ ನಕ್ಷತ್ರ ಪ್ರಾರಂಭ). ಸೂರ್ಯೋದಯ: ಬೆಳಗ್ಗೆ ಸುಮಾರು 5:55. ಸೂರ್ಯಾಸ್ತ: ಸಂಜೆ ಸುಮಾರು 6:40 (ಸ್ಥಳದ ಆಧಾರದಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು). ರಾಹುಕಾಲ: ಮಧ್ಯಾಹ್ನ 12:00 – 1:30. ಯಮಗಂಡ ಕಾಲ: ಬೆಳಗ್ಗೆ 7:30– 9:00. ಗುಳಿಕ ಕಾಲ: ಬೆಳಗ್ಗೆ 10:30 – 12:00.

ಸಾಂಧರ್ಬಿಕ ಚಿತ್ರ

ಬೆಂಗಳೂರು, ಏ. 29: ಚೈತ್ರ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಆಶ್ಲೇಷಾ ನಕ್ಷತ್ರದ ಬುಧವಾರ (ಏಪ್ರಿಲ್‌ 29) ಬುಧ ಗ್ರಹದ ದಿನವಾಗಿದ್ದು, ವ್ಯಾಪಾರ, ಶಿಕ್ಷಣ, ಸಂವಹನಕ್ಕೆ ಶುಭ ಫಲ ದೊರೆಯಲಿದೆ. ಬುಧವಾರ ಗಣೇಶನಿಗೆ ಪ್ರಿಯವಾದ ದಿನವಾಗಿದ್ದು, ಇಂದು ವಿಘ್ನ ನಿವಾರಣೆಗೆ ಗಣಪತಿ ಪೂಜೆ ಮಾಡುವುದು ಉತ್ತಮ. ಮೇಷ ರಾಶಿಯವರ ಅಧಿಕಾರ, ಗೌರವ ಹೆಚ್ಚಳವಾಗಲಿದೆ. ಇಂದು ಹಸಿರು ಬಣ್ಣದ ಬಟ್ಟೆ ಧರಿಸಿದರೆ ಬುಧ ಗ್ರಹದ ಅನುಗ್ರಹ ದೊರೆಯಲಿದೆ. ವಿದ್ಯಾರ್ಥಿಗಳು ಸರಸ್ವತಿ ಪೂಜೆ ಮಾಡಿದರೆ ವಿದ್ಯೆಯಲ್ಲಿ ಪ್ರಗತಿ ಕಾಣಬಹುದು. ಇನ್ನು ಎಲ್ಲ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ.

ಮೇಷ: ಆತ್ಮವಿಶ್ವಾಸ ಹೆಚ್ಚಲಿದ್ದು, ನವ ಚೈತನ್ಯದ ದಿನವಾಗಲಿದೆ. ವೃತ್ತಿಯಲ್ಲಿ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿಯ ಯೋಗ. ಆದಾಯ ಹೆಚ್ಚಾದರೂ ಖರ್ಚಿನ ಮೇಲೆ ನಿಗಾ ಇಡಬೇಕು. ಮುಂಗೋಪವನ್ನು ನಿಯಂತ್ರಿಸಿ.

ವೃಷಭ: ಆರ್ಥಿಕವಾಗಿ ಲಾಭದಾಯಕ ದಿನವಾಗಲಿದೆ. ಹಳೆಯ ಹೂಡಿಕೆಯ ಫಲ ದೊರೆಯಲಿದೆ. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಪ್ರೀತಿಗೆ ಜಯ ಸಿಗಲಿದೆ.

ಮಿಥುನ: ಸಂವಹನ ಕೌಶಲ್ಯದಿಂದ ಕಠಿಣ ಕೆಲಸವೂ ಸುಲಭವಾಗಲಿದೆ. ವ್ಯಾಪಾರದಲ್ಲಿ ಸಾಧಾರಣ ಲಾಭ, ಹೊಸ ಪಾಲುದಾರಿಕೆಯ ಬಗ್ಗೆ ಎಚ್ಚರಿಕೆವಹಿಸಿ. ಉದ್ಯೋಗದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕ ಸಮಸ್ಯೆ ಬಗೆಹರಿಸಿ.

ಕರ್ಕಾಟಕ: ಉದ್ಯೋಗಸ್ಥರಿಗೆ ಅದೃಷ್ಟದ ಬಾಗಿಲು ತೆರಯಲಿದೆ. ಇಚ್ಛಿಸಿದಂತೆ ವರ್ಗಾವಣೆ ಆಗಲಿದೆ. ಸಾಲ ತೀರಿಸಲು ಇದು ಸೂಕ್ತ ಸಮಯ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದ್ದು, ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ. ಏಪ್ರಿಲ್ ತಿಂಗಳ ಕೊನೆಯಲ್ಲಿ ಅದೃಷ್ಟ ದೊರೆಲಿದೆ.

ಸಿಂಹ: ಧೈರ್ಯ, ಸ್ಥಿರತೆ ಹೆಚ್ಚುತ್ತದೆ. ಶತ್ರುಗಳ ಮೇಲೆ ಜಯ ಸಾಧಿಸುತ್ತೀರಿ. ಸಹೋದರ/ಮಿತ್ರರಿಂದ ಸಹಕಾರ ದೊರೆಯಲಿದೆ. ಕೃಷಿ ಕೆಲಸದಲ್ಲಿ ಲಾಭ ಸಿಗಲಿದೆ.

ಕನ್ಯಾ: ಕುಟುಂಬದೊಂದಿಗೆ ಸಂತೋಷದಿಂದ ದಿನ ಕಳೆಯುತ್ತೀರಿ. ಆಸ್ತಿಗೆ ಸಂಬಂಧಿಸಿ ಲಾಭವಾಗಲಿದ್ದು, ಸ್ನೇಹಿತರ ಸಮಾಗಮ ನಡೆಯಲಿದೆ. ವ್ಯಾಪಾರ, ಉದ್ಯೋಗದಲ್ಲಿ ಪ್ರಗತಿ.

ಚಂದ್ರನು ಮೀನ ರಾಶಿಗೆ ಆರ್ಥಿಕವಾಗಿ ಯಶಸ್ಸು ನೀಡುತ್ತನಾ?

ತುಲಾ: ಹಣಕಾಸಿನ ತೊಂದರೆ, ಅನಿರೀಕ್ಷಿತ ಪ್ರವಾಸ. ಆರೋಗ್ಯ ಸಮಸ್ಯೆಯಾಗಲಿದ್ದು ಎಚ್ಚರ ವಹಿಸಿ. ವ್ಯವಹಾರದಲ್ಲಿ ಅಡೆತಡೆ.

ವೃಶ್ಚಿಕ: ಹಣಕಾಸಿನ ತೊಂದರೆಯಾಗಲಿದ್ದು, ಓಡಾಟದ ದಿನವಾಗಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ವಹಿಸಿ. ವ್ಯಾಪಾರ/ಉದ್ಯೋಗ ಸಾಮಾನ್ಯ ದಿನವಾಗಲಿದೆ.

ಧನು: ಹೊಸ ಉದ್ಯೋಗಾವಕಾಶ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಆರ್ಥಿಕ ಪ್ರಗತಿ ಕಾಣಲಿದ್ದೀರಿ. ಸರಿಯಾದ ನಿರ್ಧಾರದಿಂದ ಯಶಸ್ಸು ದೊರೆಯಲಿದೆ. ವ್ಯಾಪಾರದಲ್ಲಿ ಉತ್ತಮ ಫಲ.

ಮಕರ: ಮಾಜಿ ಸಂಗಾತಿಯನ್ನು ಭೇಟಿಯಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಉದ್ಯಮಿಗಳು ತುರ್ತು ನಿರ್ಧಾರ ತೆಗೆದುಕೊಳ್ಳಬಾರದು. ಸ್ನೇಹಿತರ ಸಹಾಯದಿಂದ ಸಮಸ್ಯೆ ನಿವಾರಣೆಯಾಗಲಿದೆ. ಹಣಕಾಸು ಸ್ಥಿತಿ ಸುಧಾರಣೆ ಕಾಣಲಿದೆ.

ಕುಂಭ: ಸಾಮಾಜಿಕ ಸ್ಥಾನಮಾನ, ಗೌರವ ಹೆಚ್ಚಳ. ಧನಾಗಮನ. ಜತೆಗೆ ಅನಿವಾರ್ಯ ಖರ್ಚೂ ಅದಿಕ. ವೈಯಕ್ತಿಕ ಜೀವನದಲ್ಲಿ ಸಣ್ಣ ಭಿನ್ನಾಭಿಪ್ರಾಯ ತಲೆದೋರಬಹುದು. ಅದನ್ನು ಎಚ್ಚರಿಕೆಯಿಂದ ಬಗೆಹರಿಸಿ.

ಮೀನ: ಶನಿಯ ಪರೀಕ್ಷೆ ಇದ್ದರೂ ಗುರುವಿನ ಅನುಗ್ರಹ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚುತ್ತದೆ.

Ramesh Ballamoole

View all posts by this author