ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದಿನ ಭವಿಷ್ಯ, ಜುಲೈ 12, 2026: ಆರೋಗ್ಯದ ಕಡೆ ಗಮನ ಕೊಡಿ; ಅನಗತ್ಯ ಖರ್ಚು ತಪ್ಪಿಸದಿದ್ದರೆ ಸಂಕಷ್ಟ

Horoscope Today July 12th 2026: ವರ್ಷ ಋತು ಆಷಾಢ ಕೃಷ್ಣ ಪಕ್ಷದ ತ್ರಯೋದಶಿ ವಾರ ಭಾನುವಾರವಾದ ಇಂದು ಶಿವನಿಗೆ ಪ್ರಾರ್ಥನೆ ಸಲ್ಲಿಸಲು ವಿಶೇಷ ದಿನ. ಹೊಸ ಕೆಲಸ ಶುರು ಮಾಡಲು ವಿಜಯ ಮುಹೂರ್ತ ಉತ್ತಮ. ಶಿವಲಿಂಗಕ್ಕೆ ನೀರು-ಬಿಲ್ವಪತ್ರೆ ಅರ್ಪಿಸಿದರೆ ಒಳಿತಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಪಂಡಿತರು.

ಸಾಂದರ್ಭಿಕ ಚಿತ್ರ

ಬೆಂಗಳೂರು: ಪರಾಭವ ಸಂವತ್ಸರ, ಉತ್ತರಾಯಣ, ಕೃಷ್ಣೆ ಪಕ್ಷದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ವಿವರ ಇಲ್ಲಿದೆ (Horoscope Today July 12th 2026). ಇಂದಿನ ಶುಭ ಬಣ್ಣ: ಬಿಳಿ, ಕೇಸರಿ: ಶುಭ ಸಂಖ್ಯೆ: 3, 9.

ಮೇಷ: ಹೊಸ ಕೆಲಸಗಳಿಗೆ ಉತ್ತಮ ಆರಂಭ. ಕುಟುಂಬದವರ ಸಹಕಾರ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಕಡೆ ಗಮನ ಕೊಡಿ.

ವೃಷಭ: ಉದ್ಯೋಗದಲ್ಲಿ ಪ್ರಶಂಸೆ ಸಿಗಬಹುದು. ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಖರ್ಚು ತಪ್ಪಿಸಿ. ಚಂದ್ರ ಈ ರಾಶಿಯಲ್ಲೇ ಇರುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಪ್ರಯಾಣ ಮಾಡುವಾಗ ಎಚ್ಚರ ಅಗತ್ಯ.

ಮಿಥುನ: ಬಾಕಿ ಕೆಲಸ ಸ್ನೇಹಿತರ ಸಹಾಯದಿಂದ ಪೂರ್ಣಗೊಳ್ಳಲಿವೆ. ಪ್ರಯಾಣದ ಸಾಧ್ಯತೆ ಇದೆ. ಶುಭ ಸುದ್ದಿ ಸಿಗಲಿದೆ. ಮಧ್ಯಾಹ್ನದ ನಂತರ ಮನಸ್ಸು ಚಂಚಲವಾಗಬಹುದು. ತಾಳ್ಮೆ ಇರಲಿ. ಹೊಸ ಐಡಿಯಾ ಮೂಡಲಿದೆ.

ಕಟಕ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಯೋಚಿಸಿ ಹೂಡಿಕೆ ಮಾಡಿ. ಆರ್ಥಿಕ ಲಾಭ. ಕುಟುಂಬದಲ್ಲಿ ಸಂತಸದ ವಾತಾವರಣ. ಶುಕ್ರನ ಪ್ರಭಾವದಿಂದ ಕಲಾವಿದರಿಗೆ ಒಳ್ಳೆಯ ದಿನ. ಖರ್ಚು ನಿಯಂತ್ರಿಸಿ.

ಸಿಂಹ: ವೃತ್ತಿಯಲ್ಲಿ ಹೊಸ ಅವಕಾಶ ದೊರೆಯಬಹುದು. ಹಿರಿಯರ ಸಲಹೆಯಿಂದ ಲಾಭ. ಕೋಪ ನಿಯಂತ್ರಿಸಿ. ಶುಕ್ರನ ಪ್ರಭಾವದಿಂದ ಕಲಾವಿದರಿಗೆ ಒಳ್ಳೆಯ ದಿನ. ಸಂಬಂಧಗಳಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಖರ್ಚು ನಿಯಂತ್ರಿಸಿ.

ಜಾತಕದ ಮೊದಲ ಮನೆಯಲ್ಲಿ ಸೂರ್ಯನಿದ್ದರೆ ರಾಜಯೋಗವೇ?

ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲದ ದಿನ. ಹೊಸ ಯೋಜನೆಗಳಿಗೆ ಚಾಲನೆ ನೀಡಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು. ಹೀಗಾಗಿ ಆರೋಗ್ಯದ ಕಡೆ ಗಮನ ಹರಿಸಿ.

ತುಲಾ: ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಹೆಚ್ಚಲಿದೆ. ಆರ್ಥಿಕ ಸ್ಥಿತಿ ಸುಧಾರಿಸಬಹುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ. ಸಾಮಾಜಿಕ ಕೆಲಸಗಳಲ್ಲಿ ಯಶಸ್ಸು. ಸ್ನೇಹಿತರಿಂದ ಸಹಾಯ.

ವೃಶ್ಚಿಕ: ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಆತುರದ ನಿರ್ಧಾರ ಬೇಡ. ಹೂಡಿಕೆ ಮಾಡುವ ಮುನ್ನ ಯೋಚಿಸಿ. ಕುಟುಂಬದಲ್ಲಿ ಸಣ್ಣ ಜಗಳ ಉಂಟಾಗುವ ಸಾಧ್ಯತೆ.

ಧನು: ವ್ಯಾಪಾರಿಗಳಿಗೆ ಲಾಭದ ದಿನ. ಮಕ್ಕಳಿಂದ ಸಂತಸದ ಸುದ್ದಿ ಸಿಗಬಹುದು. ದೇವರ ಆರಾಧನೆಯಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ವಿದ್ಯೆ ಮತ್ತು ಜ್ಞಾನದಲ್ಲಿ ಪ್ರಗತಿ. ಗುರುಬಲದಿಂದ ಒಳ್ಳೆಯ ಅವಕಾಶ ದೊರೆಯಲಿದೆ.

ಮಕರ: ಕೆಲಸದ ಒತ್ತಡ ಇದ್ದರೂ ಯಶಸ್ಸು ನಿಮ್ಮದಾಗಲಿದೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ನಿಮ್ಮ ಪರವಾದ ಬೆಳವಣಿಗೆ ಕಂಡುಬರಬಹುದು. ಆರೋಗ್ಯದಲ್ಲಿ ಸುಧಾರಣೆ. ಶಿವನ ಧ್ಯಾನ ಮಾಡಿ.

ಕುಂಭ: ಹೊಸ ಪರಿಚಯ ಭವಿಷ್ಯಕ್ಕೆ ಉಪಯುಕ್ತವಾಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬದೊಂದಿಗೆ ಸಮಯ ಕಳೆಯುತ್ತೀರಿ.

ಮೀನ: ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಸುವ ಬಗ್ಗೆ ಚರ್ಚೆಯಾಗಬಹುದು. ಆತ್ಮವಿಶ್ವಾಸದಿಂದ ಮುಂದುವರಿದರೆ ಯಶಸ್ಸು ಸಿಗಲಿದೆ. ಮನಸ್ಸಿನಲ್ಲಿ ಮೂಡುವ ಗೊಂದಲಕ್ಕೆ ಧ್ಯಾನ ಮತ್ತು ಪ್ರಾರ್ಥನೆಯಿಂದ ಪರಿಹಾರ. ಹಿರಿಯರ ಸಲಹೆ ಕೇಳಿ.

Ramesh Ballamoole

View all posts by this author