ಬೆಂಗಳೂರು: ಶನಿವಾರದ ಈ ದಿನ ಚಂದ್ರ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. ಇಂದು ಬಹುತೇಕ ಎಲ್ಲ ರಾಶಿಗಳಿಗೆ ಶುಭ ಫಲವೇ ಗೋಚರವಾಗಲಿದೆ.
ಮೇಷ ರಾಶಿ: ಇಂದು ನಿಮ್ಮ ಕೆಲಸಗಳಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸ್ನೇಹಿತರು ಮನೆಗೆ ಬರ್ತಾರೆ.
ವೃಷಭ ರಾಶಿ: ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭ ದೊರೆಯಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಮಿಥುನ ರಾಶಿ: ಇಂದು ನಿಮ್ಮ ಮಾತಿನ ಚಾತುರ್ಯದಿಂದ ಹಲವು ಕೆಲಸ ಸುಗಮವಾಗಲಿದೆ. ಸ್ನೇಹಿತರ ಸಹಕಾರ ದೊರೆಯಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಅವಕಾಶ ಸಿಗಬಹುದು.
ಕರ್ಕಾಟಕ ರಾಶಿ: ಕುಟುಂಬದ ವಿಚಾರಗಳಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಕೆಲಸದಲ್ಲಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ. ಹಿರಿಯರ ಸಲಹೆ ಉಪಯುಕ್ತವಾಗಲಿದೆ. ಒಳ್ಳೆಯ ನೆನಪುಗಳು ಮರುಕಳಿಸುತ್ತವೆ.
ಸಿಂಹ ರಾಶಿ: ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಬಹುಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ.
ಕನ್ಯಾ ರಾಶಿ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯುವ ಸಾಧ್ಯತೆ. ಆರೋಗ್ಯದ ಕಡೆ ಗಮನ ಕೊಡಿ.
ಶನಿ ದೋಷದ ಪರಿಹಾರಕ್ಕೆ ಶನಿವಾರ ಏನು ಮಾಡಬೇಕು? ಇಲ್ಲಿದೆ ಜ್ಯೋತಿಷ್ಯ ಶಾಸ್ತ್ರದ ಸಲಹೆ
ತುಲಾ ರಾಶಿ: ಇಂದು ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಸಂತೋಷದ ಕ್ಷಣಗಳು ಎದುರಾಗಬಹುದು.
ವೃಶ್ಚಿಕ ರಾಶಿ: ಕೆಲವು ಸವಾಲು ಎದುರಾದರೂ ಧೈರ್ಯದಿಂದ ಮುನ್ನಡೆಯಿರಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ. ಬೆಂಗಳೂರು ಸಂಜೆ ಮಳೆ ಬರಬಹುದು.
ಧನುಸ್ಸು ರಾಶಿ: ಅದೃಷ್ಟ ನಿಮ್ಮ ಕೈಹಿಡಿಯುವ ದಿನ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ದೂರ ಪ್ರಯಾಣದ ಯೋಗವಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ನಿಮ್ಮ ದೊಡ್ಡ ಕನಸಿಗೆ ಇಂದು ಒಂದು ಸಣ್ಣ ಹೆಜ್ಜೆ ಇಡ್ತೀರಿ.
ಮಕರ ರಾಶಿ: ಕೆಲಸದ ಒತ್ತಡ ಹೆಚ್ಚಾಗಬಹುದು. ಆದರೂ ನಿಮ್ಮ ಪ್ರಯತ್ನಗಳು ಯಶಸ್ಸು ತಂದುಕೊಡಲಿವೆ. ಹಣಕಾಸಿನ ವಿಚಾರದಲ್ಲಿ ಯೋಜಿತ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯಿರಿ. ತಂದೆ-ತಾಯಿ ಜತೆ ಸ್ವಲ್ಪ ವಾದ ಆಗಬಹುದು.
ಕುಂಭ ರಾಶಿ: ವ್ಯಾಪಾರಿಗಳಿಗೆ ಲಾಭದ ಸಾಧ್ಯತೆ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆಗೆ ಮೆಚ್ಚುಗೆ ದೊರೆಯಬಹುದು.
ಮೀನ ರಾಶಿ: ಮನಸ್ಸಿಗೆ ನೆಮ್ಮದಿ ನೀಡುವ ಘಟನೆಗಳು ನಡೆಯಲಿವೆ. ಆರ್ಥಿಕವಾಗಿ ಉತ್ತಮ ದಿನವಾಗಿರಲಿದೆ. ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.