ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ಶರದೃತು ಕಾರ್ತಿಕ ಮಾಸೆ ಕೃಷ್ಣ ಪಕ್ಷದ ಪಂಚಮಿ ತಿಥಿ, ಪುರ್ನವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾ ಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.
ಮೇಷ ರಾಶಿ: ಇಂದು ಕಾರ್ತಿಕ ಸೋಮವಾರ ಆಗಿದ್ದು ದೀಪ ಹಚ್ಚುವ ಮೂಲಕ ನಿಮ್ಮ ಆಸೆ ಈಡೇರಿಕೆಗಳನ್ನು ಇಂದು ಬೇಡಿಕೊಳ್ಳಬಹುದು. ಪುನರ್ವಸು ನಕ್ಷತ್ರದ ಅಧಿಪತಿ ಗುರು ಆಗಿದ್ದು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರು ಮನೆಯ ವಾತಾವರಣವನ್ನು ಅವರೇ ನಿಭಾಯಿಸಿಕೊಂಡು ಹೋಗ ಬೇಕಾಗುತ್ತದೆ. ಎಲ್ಲರ ಜತೆ ನೀವು ಸರಿಯಾಗಿ ವರ್ತಿಸಿ ವಿನಯತೆಯಿಂದ ಇರಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿವರಿಗೆ ಅತ್ಯುತ್ತಮ ದಿನವಾಗಲಿದೆ ಸಾಮಾಜಿಕ ವ್ಯವಹಾರದಲ್ಲಿ ಅತೀ ಹೆಚ್ಚಿನ ಯಶಸ್ಸು ಕಾಣುವಂತಹ ದಿನವೂ ಹೌದು. ಮಾತುಗಾರರಿಗೆ ಇಂದು ಅತೀ ಉತ್ತಮ ದಿನ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರು ಸಂಸಾರದ ಸುಭದ್ರತೆ ಬಗ್ಗೆ ಇಂದು ಯೋಚನೆ ಮಾಡಬೇಕಾಗುತ್ತದೆ. ಮನೆಯಲ್ಲಿ ತಾಯಿ- ಅಣ್ಣ, ತಮ್ಮಂದಿರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ. ನಿಮ್ಮ ಮನಸ್ಸಿಗೆ ಸಮಾಧಾನದ ದಿನವಾಗಲಿದೆ.
ಇದನ್ನು ಓದಿ: Vastu Tips: ಸಂಪತ್ತು ವೃದ್ಧಿಗೆ ಮನೆ ಬಳಿ ಈ ಗಿಡಗಳನ್ನು ನೆಡಿ
ಕಟಕ ರಾಶಿ: ಕಟಕ ರಾಶಿಯಲ್ಲೇ ಚಂದ್ರ ಇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿಂದಿನ ಎರಡು ಮೂರು ದಿನಗಳಲ್ಲಿ ಇದ್ದಂತಹ ಯೋಚನೆಗಳೆಲ್ಲವೂ ಇಂದು ಮಾಯವಾಗಲಿದೆ. ನಿಮಗೆ ಬೇಸರ ಉಂಟು ಮಾಡಿದವರು ನಿಮ್ಮ ಬಳಿ ಕ್ಷಮೆ ಕೂಡ ಕೇಳಲಿದ್ದಾರೆ.
ಸಿಂಹ ರಾಶಿ: ಸಿಂಹ ರಾಶಿ ಅಯರಿಗೆ ಕಷ್ಟದ ದಿನವಾಗಿದ್ದು ಮುಖ್ಯವಾದ ಯಾವುದೇ ನಿರ್ಧಾರಗಳು ಇಂದು ಬೇಡ. ಯಾವುದೇ ಮಿಟಿಂಗ್, ವ್ಯವಹಾರವನ್ನು ಇಂದು ಮಾಡಲು ಹೋಗಬೇಡಿ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ದಿನ ಉತ್ತಮವಾಗಿದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಕೂಡ ಇಂದು ನಡೆಯಲಿದೆ. ಇಂದು ಧನಾಗಮನದ ಸೂಚನೆ ಕೂಡ ನಿಮಗೆ ಇರಲಿದೆ.
ತುಲಾ ರಾಶಿ: ತುಲಾ ರಾಶಿಯವರಿಗೆ ಕಾರ್ಯ ಕ್ಷೇತ್ರದ ಜವಾಬ್ದಾರಿಗಳು ಇಂದು ಬಹಳಷ್ಟು ಹೆಚ್ಚು ಇರುತ್ತದೆ. ಹಾಗಾಗಿ ಕೆಲಸ ಕಾರ್ಯಗಳಿಗೆ ಒತ್ತು ನೀಡಿ ಮುಂದೆ ಹೋಗಬೇಕಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅದೃಷ್ಟದ ದಿನವಾಗಲಿದೆ. ಆದರೆ ಎಲ್ಲರ ಜತೆ ವಿನಯತೆಯಿಂದ ನೀವು ವರ್ತಿಸಬೇಕಾಗುತ್ತದೆ. ನೀವು ಅಂದುಕೊಂಡ ಕೆಲಸ ಕಾರ್ಯಗಳು ಕೂಡ ಇಂದು ನಡೆಯಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಕಷ್ಟದ ದಿನವಾಗುವ ಸಾಧ್ಯತೆ ಇದೆ. ಹೆಚ್ಚಿನ ಆತಂಕ ಎದುರಾಗಬಹುದು. ಬೇಕಾದವರಿಂದ ಯಾವುದೇ ಸಹಕಾರ ನಿಮಗೆ ಸಿಗುವಿದಿಲ್ಲ. ಧ್ಯಾನಾಧಿಗಳನ್ನು ಮಾಡುವ ಮೂಲಕ ಇಂದು ಸಮಯ ಕಳೆಯಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಈ ದಿನ ಅತೀ ಹೆಚ್ಚಿನ ನೆಮ್ಮದಿ ಇದ್ದು, ಮನಸ್ಸಿಗೆ ಖುಷಿ ಸಿಗಲಿದೆ. ಎಲ್ಲರಿಂದಲೂ ನಿಮಗೆ ಸಹಕಾರ ಪ್ರಾಪ್ತಿಯಾಗಲಿದೆ. ದಾಂಪತ್ಯ ಜೀವನದಲ್ಲೂ ನೆಮ್ಮದಿ ಸಿಗಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದ್ದು, ಸಾಮಾಜಿಕ ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿಯಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು, ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.
ಮೀನ ರಾಶಿ: ಮೀನ ರಾಶಿಯವರು ನಿಮ್ಮ ಬುದ್ದಿವಂತಿಕೆಯನ್ನು ಉಪಯೋಗಿಸಕೊಂಡು ಕೆಲಸ ಕಾರ್ಯಗಳನ್ನು ನಿಭಾಯಿಸಬೇಕಾಗುತ್ತದೆ. ತಂದೆ ತಾಯಿ ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನ ನೀಡಬೇಕು. ಪ್ರೇಮ, ಪ್ರೀತಿ ದಾಂಪತ್ಯ ವಿಚಾರದಲ್ಲೂ ಗಮನ ವಹಿಸಬೇಕು.. ಯಾವುದೇ ವಿಚಾರ ನಿರ್ಲಕ್ಷಿಸದೆ ಪರಮರ್ಶಿಸಿದರೆ ಅನೇಕ ಗೊಂದಲಗಳು ಕೂಡ ಬಗೆಹರಿಯಲಿದೆ.