ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ರೇವತಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ರೇವತಿ ನಕ್ಷತ್ರದ ಅಧಿಪತಿ ಬುಧ ಆಗಿದ್ದಾನೆ. ಆದ್ದರಿಂದ ಮನಸ್ಸಿಗೆ ಇಂದು ಕ್ಷೇಷ ಉಂಟಾಗುವ ಸಾಧ್ಯತೆ ಇದೆ. ಮೇಷ ರಾಶಿ ಅವರಿಗೆ ಮನಸ್ಸಿಗೆ ಅಷ್ಟೊಂದು ನೆಮ್ಮದಿ ಇರುವುದಿಲ್ಲ. ಮುಖ್ಯವಾದ ಯಾವುದೇ ನಿರ್ಧಾರಗಳನ್ನು ಇಂದು ಮಾಡಲು ಹೋಗಬೇಡಿ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಅತ್ಯುತ್ತಮ ವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಮಿತ್ರ ರಿಂದ ಧನ ಆಗಮನದ ಸೂಚನೆಗಳು ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ. ನೀವು ಮಾಡಿದಂತಹ ಕೆಲಸಗಳಿಗೆ ಪ್ರಶಂಸೆ ಕೂಡ ಸಿಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದೆ. ಆದರೂ ಕೂಡ ಭಗವಂತನ ಹಿರಿಯರ ಆಶೀರ್ವಾದ ಇಲ್ಲದೆ ಏನೂ ಮಾಡಲಾಗುವುದಿಲ್ಲ. ಆದ್ದರಿಂದ ಬಹಳ ವಿನಯತೆಯಿಂದ ನೀವು ಇರಬೇಕಾಗುತ್ತದೆ.
ಇದನ್ನು ಓದಿ:Vastu Tips: ಮನೆ ಸ್ವಚ್ಛಗೊಳಿಸುವಾಗ ಪಾಲಿಸಬೇಕು ಕೆಲವು ನಿಯಮ
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕ್ಲಿಷ್ಟಕರವಾದ ದಿನ ವಾಗಿದೆ.ಮುಖ್ಯವಾದ ಕೆಲಸ ಕಾರ್ಯದಲ್ಲಿ ಸಹಕಾರ ನಿಮಗೆ ಸಿಗುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದ ಅಕ್ಕರೆ ಇತ್ಯಾದಿಗಳು ಪ್ರಾಪ್ತಿ ಯಾಗುವುದಿಲ್ಲ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಮುಖ್ಯವಾದ ಎಲ್ಲ ಕೆಲಸ ಕಾರ್ಯದಲ್ಲೂ ಯಶಸ್ಸು ಸಿಗುತ್ತದೆ. ಬೇರೆಯವರಿಂದ ನಿಮಗೆ ನೆಮ್ಮದಿ ಸಿಗುತ್ತದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಸಾಮಾಜಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಮುಖ್ಯವಾದ ಎಲ್ಲ ಕೆಲಸ ಕಾರ್ಯದಲ್ಲಿ ಜಯ ಪ್ರಾಪ್ತಿ ಯಾಗುತ್ತದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರ ದಲ್ಲಿ ನಿಮಗೆ ಸಹಕಾರ ಸಿಗುವುದಿಲ್ಲ. ಲಾಸ್ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಸಂಸಾರದ ತಾಪತ್ರಯಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿ ಶಕ್ತಿಯನ್ನು ಉಪಯೋಗಿಸಿ ಕೊಂಡು ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನೀಡಬೇಕಾಗುತ್ತದೆ
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಸಂಸಾರದ ತಾಪತ್ರಯಗಳು ಹೆಚ್ಚು ಇರುತ್ತದೆ. ಹಾಗೆಯೇ ನೀವು ಅಮ್ಮನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಹಾಗೆಯೇ ಆಸ್ತಿ ಪಾಸ್ತಿ ವಿಚಾರವಾಗಿ ಕ್ಷಿಷ್ಟಕರವಾದ ದಿನವಾಗಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಉತ್ತಮ ವಾದ ದಿನವಾಗಿದೆ. ಸೇಲ್ಸ್, ಮಾರ್ಕೆಟಿಂಗ್ ,ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಉತ್ತಮವಾದ ದಿನವಾಗಿದೆ. .
ಕುಂಭರಾಶಿ: ಕುಂಭ ರಾಶಿ ಅವರು ಸಂಸಾರದ ತಾಪತ್ರಯಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸಂಸಾರ,ಆರ್ಥಿಕ ಸುಭದ್ರತೆ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ನಿಮ್ಮ ರಾಶಿಯಲ್ಲೆ ಚಂದ್ರ ಇರುವುದರಿಂದ ಮಾರ್ಗ ದರ್ಶನ ಪ್ರಾಪ್ತಿಯಾಗಲಿದೆ. ಹಿಂದಿನ ದಿನ ಇದ್ದ ತೊಂದರೆಗಳು ಬಗೆಹರಿಯಲಿದೆ.