ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು ಕಾರ್ತಿಕ ಮಾಸೆ ಶುಕ್ಲ ಪಕ್ಷದ ಅಶ್ವಿನಿ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಅಶ್ವಿನಿ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ. ಆದ್ದರಿಂದ ಮನಸ್ಸಿಗೆ ಇಂದು ನಿರ್ಲಿಪ್ತ ಭಾವನೆ ಉಂಟಾಗುವ ಸಾಧ್ಯತೆ ಇದೆ. ಮೇಷ ರಾಶಿ ಅವರಿಗೆ ಇಂದು ಅತ್ಯುತ್ತಮ ವಾದ ದಿನವಾಗಿದೆ. ಇದ್ದಂತಹ ವೈಮನಸ್ಸು, ಮನಸ್ಸಿನ ತೊಂದರೆ ಎಲ್ಲವೂ ಮಯವಾಗಲಿದೆ. ಉತ್ತಮ ಮಾರ್ಗದರ್ಶನ ಕೂಡ ನಿಮಗೆ ಸಿಗಲಿದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದ್ದು, ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಮುಖ್ಯವಾದ ಮೀಟಿಂಗ್, ಇಮೇಲ್ ಇತ್ಯಾದಿ ಯಾವುದು ಇಂದು ಮಾಡಲು ಹೋಗಬೇಡಿ.ಯಾವುದೇ ಮುಖ್ಯ ಕೆಲಸಗಳ ಜವಾಬ್ದಾರಿ ತೆಗೆದುಕೊಳ್ಳಲು ಹೋಗಬೇಡಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಅತ್ಯುತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಗುಂಪು ಕೆಲಸಗಳಿಂದ ಧನಾಗಮನ ಕೂಡ ಆಗಲಿದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು ಮನಸ್ಸಿಗೆ ನೆಮ್ಮದಿ ಕೊಡುವ ದಿನವಾಗಿದೆ. ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಭಾಗ್ಯೋದಯವಾದ ದಿನವಾಗಿದೆ. ಆದರೂ ಭಗವಂತನ ಆಶೀರ್ವಾದ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಆಗುವುದಿಲ್ಲ. ಹಾಗಾಗಿ ಭಗವಂತನ ಹಿರಿಯರ ಆಶೀರ್ವಾದ ಅತೀ ಮುಖ್ಯವಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನ ವಾಗಿದೆ.ಮನಸ್ಸಿಗೆ ಬಹಳಷ್ಟು ಬೇಸರ ಇರಲಿದ್ದು ಆತಂಕಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಧಾನ್ಯಧಿಗಳನ್ನು ಮಾಡಿ ನೀವು ಸಮಯ ಕಳೆಯಬೇಕಾಗುತ್ತದೆ.
ಇದನ್ನು ಓದಿ:Vastu Tips: ಮನೆ ಸ್ವಚ್ಛಗೊಳಿಸುವಾಗ ಪಾಲಿಸಬೇಕು ಕೆಲವು ನಿಯಮ
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಅತೀ ಉತ್ತಮವಾದ ದಿನವಾಗಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ದಾಂಪತ್ಯ ದಲ್ಲಿ ಕೂಡ ನೆಮ್ಮದಿ ಸಿಗುತ್ತದೆ..
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಸಾಮಾಜಿಕ ಕೆಲಸದಲ್ಲಿ, ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಕಾರ್ಯ ಕ್ಷೇತ್ರದಲ್ಲಿ ಪ್ರಗತಿ ಸಿಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಬಿಸೆನೆಸ್ ವ್ಯವಹಾರದಲ್ಲಿ ಲಾಸ್ ಆಗುವ ಸಾಧ್ಯತೆ ಇದೆ. ಮಕ್ಕಳಿಂದ ಕೂಡ ಕಿರಿ ಕಿರಿ ಆಗುವ ಸಾಧ್ಯತೆ ಇದೆ. ನಿಮ್ಮ ಬುದ್ದಿ ಶಕ್ತಿಯಿಂದ ಕಾರ್ಯ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಲಿದ್ದೀರಿ
ಮಕರ ರಾಶಿ: ಮಕರ ರಾಶಿ ಅವರಿಗೆ ಇಂದು ಕ್ಲಿಷ್ಟಕರವಾದ ದಿನವಾಗಿದೆ. ಆಸ್ತಿ ಪಾಸ್ತಿ, ಟ್ಯಾಕ್ಸ್ ,ವ್ಯವಹಾರದಲ್ಲಿ ಕೂಡ ಹುಷಾರಾಗಿ ಇರಬೇಕಾಗುತ್ತದೆ. ತಾಯಿಯ ಆರೋಗ್ಯ ಮನೆಯವರ ಮನಸ್ಥಿತಿ ಇಂದು ಮುಖ್ಯವಾಗುತ್ತದೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಅತ್ಯುತ್ತಮವಾದ ದಿನವಾಗಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದ್ದು, ಸೋಷಿಯಲ್ ಮೀಡಿಯಾ, ಮಾರ್ಕೆಟಿಂಗ್ ಇತ್ಯಾದಿಯಲ್ಲಿ ಇರೋರಿಗೆ ಉತ್ತಮ ವಾಗಲಿದೆ.
ಮೀನ ರಾಶಿ: ಮೀನ ರಾಶಿ ಅವರು ಸಂಸಾರದ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಸಂಸಾರದಲ್ಲಿನ ಒಡಕುಗಳನ್ನು ಸರಿ ಪಡಿಸಲು ಹೆಚ್ಚು ಕಾರ್ಯಶೀಲರು ಆಗಬೇಕಾಗುತ್ತದೆ.